ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗರಿಷ್ಠ ಹಿರಿಯ ಕ್ರಿಕೆಟಿಗರನ್ನು ಹೊಂದಿದೆ. ಈ ಐಪಿಎಲ್ ಬಳಿಕ ಕೆಲ ಕ್ರಿಕೆಟಿಗರು ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದ ಬೆನ್ನಲ್ಲೇ , ಹಿರಿಯ ಕ್ರಿಕೆಟಿಗನೊಬ್ಬ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಸಿಡ್ನಿ(ಮೇ.17): ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಾಯಕ ಎಂ.ಎಸ್.ಧೋನಿ, ಹರ್ಭಜನ್ ಸಿಂಗ್ ಸೇರಿದಂತೆ ಹಲವರು ಹಿರಿಯ ಕ್ರಿಕೆಟಿಗರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ವರ್ಷ ಐಪಿಎಲ್ ಟೂರ್ನಿಗೆ ಹಲವು ಕ್ರಿಕೆಟಿಗರು ಅಲಭ್ಯರಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ CSK ತಂಡ ಸ್ಟಾರ್ ಬ್ಯಾಟ್ಸ್‌ಮನ್ ಶೇನ್ ವ್ಯಾಟ್ಸನ್ ಮುಂದಿನ ವರ್ಷ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯೋದಾಗಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: IPLನಲ್ಲಿ ಸಿಗಲಿಲ್ಲ ಚಾನ್ಸ್; ವಿದೇಶದತ್ತ ಮುಖ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ..!
ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಬಳಿಕ ಲೀಗ್ ಟೂರ್ನಿಗಳಲ್ಲಿ ಮಾತ್ರ ಕಾಣಿಸಿಕೊಳ್ಳತ್ತಿದ್ದ ಶೇನ್ ವ್ಯಾಟ್ಸನ್ ಈಗಾಗಲೇ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಟೂರ್ನಿಗೆ ವಿದಾಯ ಹೇಳಿದ್ದಾರೆ. ಆದರೆ 2020ರ ಐಪಿಎಲ್ ಟೂರ್ನಿಯಲ್ಲಿ ಮತ್ತಷ್ಟು ಬಲಿಷ್ಠ ಆಟಗಾರನಾಗಿ ಕಣಕ್ಕಿಳಿಯುತ್ತೇನೆ ಎಂದು ವ್ಯಾಟ್ಸನ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ದೇವರ ಕೋಣೆಯಲ್ಲಿ IPL ಟ್ರೋಫಿ ಇಟ್ಟು ಭಜನೆ ಮಾಡಿದ ನೀತಾ ಅಂಬಾನಿ!
2019ರ ಐಪಿಎಲ್ ಟೂರ್ನಿ ಆರಂಭಿಕ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ ವ್ಯಾಟ್ಸನ್ ಪ್ಲೇ ಆಫ್ ಪಂದ್ಯದಳಲ್ಲಿ ಅದ್ಬುತ ಕಮ್‌ಬ್ಯಾಕ್ ಮಾಡಿದ್ದರು. ಫೈನಲ್ ಪಂದ್ಯದಲ್ಲಿ ವ್ಯಾಟ್ಸನ್ 59 ಎಸೆತದಲ್ಲಿ 80 ರನ್ ಸಿಡಿಸಿದ್ದರು. ವ್ಯಾಟ್ಸನ್ ಅದ್ಬುತ ಹೋರಾಟ ನೀಡಿದರು. ಆದರೆ ವ್ಯಾಟ್ಸನ್ ವಿಕೆಟ್ ಪತನದ ಬಳಿಕ CSK ಕೇವಲ 1 ರನ್‌ಗಳಿಂದ ಸೋಲು ಅನುಭವಿಸಿದ್ದರು.
