ಮುಂಬೈ(ಮಾ.19): 12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಮುಂಬೈ ಇಂಡಿಯನ್ಸ್ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಐಪಿಎಲ್ ಆರಂಭಕ್ಕೆ ಕೆಲ ದಿನ ಇರುವಾಗಲೇ ಮುಂಬೈ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಾರು ಅನ್ನೋದನ್ನ ನಾಯಕ ರೋಹಿತ್ ಶರ್ಮಾ ಬಹಿರಂಗ ಪಡಿಸಿದ್ದಾರೆ. 

ಇದನ್ನೂ ಓದಿ: ಐಪಿಎಲ್ 2019: ಸಂಪೂರ್ಣ ವೇಳಾ ಪಟ್ಟಿ ಬಿಡುಗಡೆ!

ಮುಂಬೈ ತಂಡದ ಆರಂಭಿಕನಾಗಿ ಸ್ವತಃ ರೋಹಿತ್ ಶರ್ಮಾ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ತಂಡದ ಸಂಪೂರ್ಣ ಬ್ಯಾಟಿಂಗ್ ಕ್ರಮಾಂಕದ ಕುರಿತು ಇನ್ನೂ ನಿರ್ಧರಿಸಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಸದ್ಯ ತಂಡ 12ನೇ ಆವೃತ್ತಿಗೆ ಅಭ್ಯಾಸ ನಡೆಸುತ್ತಿದ್ದು, ಗೆಲುವಿನ ವಿಶ್ವಾಸವಿದೆ ಎಂದಿದ್ದಾರೆ.

"

ಇದನ್ನೂ ಓದಿ: RCB ತಂಡಕ್ಕೆ ಕೊಹ್ಲಿ ಕೃತಜ್ಞರಾಗಿರಬೇಕು: ಗಂಭೀರ್ ಕೊಂಕು ನುಡಿ

ಈ ಬಾರಿಯ ಕೇಂದ್ರ ಬಿಂದು ಯುವರಾಜ್ ಸಿಂಗ್. ಯುವಿ ಆಗಮನದ ಬಳಿಕ ತಂಡದ ಅನುಭವ ಹೆಚ್ಚಾಗಿದೆ. ಕಳೆದ ಕೆಲ ವರ್ಷಗಳಿಂದ ಯುವಿ ಐಪಿಎಲ್ ಟೂರ್ನಿ ಆನಂದಿಸಲು ಸಾಧ್ಯವಾಗಿಲ್ಲ. ಆದರೆ ಈ ಆವೃತ್ತಿ ಯುವಿ ಪಾಲಿಗೆ ಸ್ಮರಣೀಯವಾಗಿರಲಿದೆ ಎಂದು ರೋಹಿತ್ ಹೇಳಿದ್ದಾರೆ. ಅಭ್ಯಾಸದ ವೇಳೆ ರೋಹಿತ್ ಹಾಗೂ ತಂಡದ ಮೆಂಟರ್ ಜಹೀರ್ ಖಾನ್ ಪತ್ರಿಕಾ ಗೋಷ್ಠಿ  ನಡೆಸಿ ತಂಡದ ಬೆಳವಣಿಗೆ ಕುರಿತು ಮಾತನಾಡಿದ್ದಾರೆ.