ಮುಂಬೈ(ಮಾ.19): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ. ಲೋಕಸಭಾ ಚುನಾವಣಾ ದಿನಾಂಕ ನಿಗದಿಗೂ ಮೊದಲು ಆರಂಭಿಕ ಹಂತದ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ ಇದೀಗ ಸಂಪೂರ್ಣ ವೇಳಾಪಟ್ಟಿ ರಿಲೀಸ್ ಮಾಡಿದೆ. ಈ ಮೂಲಕ ಸಂಪೂರ್ಣ ಐಪಿಎಲ್ ಭಾರತದಲ್ಲೇ ನಡೆಯಲಿದೆ ಅನ್ನೋದು ಬಹಿರಂಗವಾಗಿದೆ.

ಇದನ್ನೂ ಓದಿ: IPL ಫ್ಲಾಶ್'ಬ್ಯಾಕ್: 1 ಟು 11 ಸೀಸನ್ ಮನರಂಜನೆಯ ಕ್ವಿಕ್ ಚೆಕ್

ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಗಳನ್ನ ಹೊರತು ಪಡಿಸಿ ಲೀಗ್ ಪಂದ್ಯದ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿ ಬಿಡುಗಡೆ ಮಾಡಿದೆ. ಮಾರ್ಚ್ 23 ರಿಂದ ಎಪ್ರಿಲ್ 5ರ ವರೆಗಿನ ವೇಳಾಪಟ್ಟಿಯನ್ನೂ ಮೊದಲ ಹಂತದಲ್ಲಿ ಬಿಡುಗಡೆ ಮಾಡಿತ್ತು. ಮೇ 5ರ ವರೆಗೆ ಐಪಿಎಲ್ ಲೀಗ್ ಪಂದ್ಯಗಳು ನಡೆಯಲಿದೆ. ಬಳಿಕ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯ ನಡೆಯಲಿದೆ. ಆದರೆ ಕೆಲ ಬದಲಾವಣೆಗಳು ಆಗೋ ಸಾಧ್ಯತೆ ಇದೆ ಎಂದಿದ್ದಾರೆ.

ಪ್ರತಿ ತಂಡ ವಿರುದ್ಧ 2 ತವರಿನ ಪಂದ್ಯ 2 ತವರಿನಾಚೆ ಪಂದ್ಯ ಆಡಲಿದೆ. ಆದರೆ ಲೋಕಸಭಾ ಚುನಾವಣೆ ದಿನಾಂಕದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತವರಿನಲ್ಲಿ ಪ್ರತಿ ತಂಡದ ವಿರುದ್ಧ 3 ತವರಿನ ಪಂದ್ಯಗಳನ್ನಾಡಲಿದೆ. ಇನ್ನು ಬೆಂಗಳೂರಲ್ಲಿ ಮಾರ್ಚ್ 28 ರಂದು ಮೊದಲ ಪಂದ್ಯ ನಡೆಯಲಿದೆ. ಒಟ್ಟು 7 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ RCB ಪಂದ್ಯಗಳು:

ಮಾ.28 - RCB vs MI 

ಎ.05 - RCB vs KKR

ಎ.07 - RCB vs DC

ಎ.21 - RCB vs CSK

ಎ.24 - RCB vs KXP

ಎ.30 - RCB vs RR

ಮೇ.04 - RCB vs SRH