ಎಂ.ಎಸ್.ಧೋನಿ ಸಲಹೆ ನೀಡಿದರೆ ಮರು ಎಸೆತದಲ್ಲಿ ವಿಕೆಟ್ ಖಚಿತ. ಇದು ಟೀಂ ಇಂಡಿಯಾ ಬೌಲರ್‌ಗಳ ಮಾತ್ರವಲ್ಲ, ವಿದೇಶಿ ಬೌಲರ್‌ಗಳೂ ಹೇಳಿದ್ದಾರೆ. ಆದರೆ ಕುಲ್ದೀಪ್ ಯಾದವ್ ಇದೀಗ ಧೋನಿ ವಿರುದ್ಧ ಹೇಳಿಕೆ ನೀಡಿ ಭಾರಿ ಚರ್ಚೆಗೆ ಕಾರಣವಾಗಿದೆ.

ಮುಂಬೈ(ಮೇ.15): ಭಾರತ ಕ್ರಿಕೆಟ್‌ ತಂಡದ ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅಚ್ಚರಿಯ ಹೇಳಿಕೊಂದನ್ನು ನೀಡಿದ್ದಾರೆ. ತಮ್ಮ ಯಶಸ್ಸಿನಲ್ಲಿ ಮಾಜಿ ನಾಯಕ ಎಂ.ಎಸ್‌.ಧೋನಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಪದೇ ಪದೇ ಹೇಳುತ್ತಿದ್ದ ಕುಲ್ದೀಪ್‌, ಇದೀಗ ಧೋನಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಧೋನಿ ಹಲವು ಸಲಹೆ ನೀಡುತ್ತಾರೆ. ಅದರಲ್ಲಿ ಎಲ್ಲವೂ ಕೈಹಿಡಿಯುವುದಿಲ್ಲ ಎಂದಿದ್ದಾರೆ.

Add Asianetnews Kannada as a Preferred SourcegooglePreferred

ಇದನ್ನೂ ಓದಿ: ಬೌಲಿಂಗ್ ಹೇಳಿಕೊಟ್ಟು ವಿಕೆಟ್ ಎಗರಿಸಿದ ಧೋನಿ: ವಿಡಿಯೋ ವೈರಲ್..!

ಮುಂಬೈನಲ್ಲಿ ನಡೆದ ಖಾಸಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಕುಲ್ದೀಪ್ ಯಾದವ್, ಧೋನಿ ಸಲಹೆಗೆ ಗರಂ ಆಗಿದ್ದಾರೆ. ಧೋನಿ ನೀಡೋ ಸಲಹೆ ಹಲವು ಬಾರಿ ತಪ್ಪಾಗಿರುತ್ತದೆ. ಆದರೆ ಅದನ್ನು ಅವರಿಗೆ ಹೇಳಲು ಆಗುವುದಿಲ್ಲ. ಅವರು ಹೆಚ್ಚು ಮಾತನಾಡುವುದಿಲ್ಲ. ಏನಾದರು ಹೇಳಬೇಕಿದ್ದರೆ ಓವರ್‌ಗಳ ಮಧ್ಯೆ ಹೇಳುತ್ತಾರೆ ಅಷ್ಟೆ’ ಎಂದಿದ್ದಾರೆ. ಕುಲ್ದೀಪ್‌ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ. 

ಇದನ್ನೂ ಓದಿ: ಬೌಲಿಂಗ್ ಮಾಡ್ತಿಯೋ? ಇಲ್ಲಾ ಬೌಲರ್ ಚೇಂಜ್ ಮಾಡ್ಲಾ? ಗರಂ ಆದ ಧೋನಿ!

ಬ್ಯಾಟ್ಸ್‌ಮನ್ ಮೈಂಡ್ ರೀಡ್ ಮಾಡೋ ಧೋನಿ, ಬೌಲರ್‌ಗಳಿಗೆ ಸಲಹೆ ನೀಡುತ್ತಾರೆ. ಈ ಮೂಲಕ ಬೌಲರ್‌ಗಳು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದುವರೆಗೆ ಎಲ್ಲಾ ಕುಲ್ದೀಪ್ ಸೇರಿದಂತೆ ಬೌಲರ್‌ಗಳು ಧೋನಿ ಸಲಹೆ ಉಪಯುಕ್ತವಾಗಿದೆ ಎಂದಿದ್ದಾರೆ. ಇದೇ ಮೊದಲ ಬಾರಿಗೆ ಕುಲ್ದೀಪ್, ಮಾಜಿ ನಾಯಕ ಸಲಹೆ ತಪ್ಪಾಗಿದೆ ಎಂದಿದ್ದಾರೆ.