ನೇಪಿಯರ್[ಜ.24] ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಓರ್ವ ಜೀನಿಯಸ್ ಕ್ರಿಕೆಟಿಗ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಧೋನಿ ಅನುಭವ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ನೆರವಿಗೆ ಬಂದಿದೆ.

ಟೀಂ ಇಂಡಿಯಾ ಅಬ್ಬರಕ್ಕೆ ಕಿವೀಸ್ ಧೂಳೀಪಟ-ಸರಣಿ ಶುಭಾರಂಭ

ಎದುರಾಳಿ ಬ್ಯಾಟ್ಸ್’ಮನ್ ಮೈಂಡ್ ರೀಡ್ ಮಾಡುವ ಕಲೆ ಕರಗತ ಮಾಡಿಕೊಂಡಿರುವ ಧೋನಿ ಕುಲ್ದೀಪ್ ಬೌಲಿಂಗ್‌ನಲ್ಲಿ ನ್ಯೂಜಿಲೆಂಡ್‌ನ ಕೊನೆಯ ವಿಕೆಟ್ ಪಡೆಯಲು ನೀಡಿದ ಸಲಹೆ ಯಶಸ್ವಿಯಾಗಿದೆ. ಕೊನೆಯ ವಿಕೆಟ್’ಗೆ ಕ್ರೀಸ್‌ನಲ್ಲಿದ್ದ ಟ್ರೆಂಟ್ ಬೌಲ್ಟ್ ಕಣ್ಣು ಮುಚ್ಚಿಕೊಂಡು ಬ್ಯಾಟ್ ಬೀಸುತ್ತಿದ್ದರು. ಈ ವೇಳೆ ಧೋನಿ, ಕಣ್ಣು ಮುಚ್ಚಿ ಡಿಫೆಂಡ್ ಮಾಡುತ್ತಾ ಇದ್ದಾನೆ. ರೌಂಡ್ ದಿ ವಿಕೆಟ್’ನಿಂದ ಬೌಲಿಂಗ್ ಮಾಡು, ಮೊದಲ ಸ್ಲಿಪ್‌ನಲ್ಲಿ ರೋಹಿತ್‌ನ್ನು ನಿಲ್ಲಿಸಿರುವುದಾಗಿ ಕುಲ್ದೀಪ್‌ಗೆ ಹೇಳಿದರು. 

ಇಂಡೋ-ಕಿವೀಸ್ ಕ್ರಿಕೆಟ್: ಅಂತಿಮ 2 ಏಕದಿನ, ಟಿ20 ಸರಣಿಯಿಂದ ಕೊಹ್ಲಿಗೆ ರೆಸ್ಟ್!

ಧೋನಿ ಅಣತಿಯಂತೆ ಬೌಲಿಂಗ್ ಮಾಡಿದ ಕುಲ್ದೀಪ್ ಎಸೆತವನ್ನು ಅರಿಯದ ಬೌಲ್ಟ್ ಬ್ಯಾಟ್‌ನ್ನು ಸವರಿದ ಚೆಂಡು ರೋಹಿತ್ ಕೈ ಸೇರಿತು. ಧೋನಿ, ಕುಲ್ದೀಪ್ ನಡುವೆ ನಡೆಸಿದ ಸಂಭಾಷಣೆ ಸ್ಪಂಪ್ ಮೈಕ್‌ನಲ್ಲಿ ರೆಕಾರ್ಡ್ ಆಗಿದೆ. ಧೋನಿ ಐಡಿಯಾ ವರ್ಕೌಟ್ ಆಯಿತು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಟೀಂ ಇಂಡಿಯಾ ಭರ್ಜರಿ ಆರಂಭ: ಲಾರಾ ದಾಖಲೆ ಸರಿಗಟ್ಟಿದ ’ಗಬ್ಬರ್ ಸಿಂಗ್’

ಭಾರತ-ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು 8 ವಿಕೆಟ್’ಗಳಿಂದ ಜಯಿಸಿ ಶುಭಾರಂಭ ಮಾಡಿದೆ. ಇನ್ನು ಎರಡನೇ ಪಂದ್ಯ ಬೇ ಓವಲ್’ನಲ್ಲಿ ಜನವರಿ 26ರಂದು ನಡೆಯಲಿದೆ.