ಲೇಹ್ ಮಕ್ಕಳ ಜೊತೆ ಕ್ರಿಕೆಟ್ ಆಡಿದ ಧೋನಿ!
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ, ಲಡಾಕ್‌ಗೆ ಬೇಟಿ ನೀಡಿದ್ದರು. ಈ ವೇಳೆ ಮಕ್ಕಳ ಜೊತೆ ಕ್ರಿಕೆಟ್ ಆಡಿರುವ ಫೋಟೋ ವೈರಲ್ ಆಗಿದೆ.
ಲಡಾಕ್(ಆ.17): ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಇದೀಗ ರಾಂಚಿಗೆ ವಾಪಾಸ್ಸಾಗಿದ್ದದಾರೆ. 15 ದಿನಗಳ ಕಾಲ ಅಪಾಯಕಾರಿ ಕಾಶ್ಮೀರ ಕಣಿವೆ ರಾಜ್ಯದಲ್ಲಿ ಧೋನಿ ಸಾಮಾನ್ಯ ಸೈನಿಕರಂತೆ ಸೇವೆ ಸಲ್ಲಿಸಿದ್ದರು. ಈ ವೇಳೆ ಸೇನೆಯ ಹಲವು ಕಾರ್ಯಕ್ರಮಗಳಲ್ಲೂ ಧೋನಿ ಪಾಲ್ಗೊಂಡಿದ್ದರು. ಆಗಸ್ಟ್ 14 ರಂದು ಲಡಾಕ್ ತೆರಳಿದ್ದ ಧೋನಿ, ಲೇಹ್ ಮಕ್ಕಳ ಜೊತೆ ಕ್ರಿಕೆಟ್ ಆಡೋ ಮೂಲಕ ಗಮನಸಳೆದಿದ್ದಾರೆ.
ಇದನ್ನೂ ಓದಿ: ಸೇನೆಯಲ್ಲಿ ಸೇವೆ ಸಲ್ಲಿಸಿ ರಾಂಚಿಗೆ ಮರಳಿದ ಸೈನಿಕ ಧೋನಿ!
ಇಂಡಿಯನ್ ಟೆರಿಟೊರಿಯಲ್ ಆರ್ಮಿ 106 ಬೆಟಾಲಿಯನ್‌ನಲ್ಲಿ ಎರಡು ವಾರಗಳ ಕಾಲ ಸೇವೆ ಸಲ್ಲಿಸಿದ ಧೋನಿ, ಲಡಾಕ್ ಸೇನಾ ಬೇಸ್ ಹಾಗೂ ಮಿಲಿಟರಿ ಆಸ್ಪತ್ರೆಗೆ ಬೇಟಿ ನೀಡಿದ್ದರು. ಈ ವೇಳೆ ಬಾಸ್ಕೆಟ್ ಬಾಲ್ ಕೋರ್ಟ್‌ನಲ್ಲಿ ಧೋನಿ, ಮಕ್ಕಳ ಜೊತೆ ಕ್ರಿಕೆಟ್ ಆಡಿದ್ದಾರೆ. ಧೋನಿ ಕ್ರಿಕೆಟ್ ಆಡೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ; ಲಡಾಕ್‌ಗೆ ಧೋನಿ ಭೇಟಿ; ಕೇಂದ್ರಾಡಳಿತದಲ್ಲಿ ಹೊಸ ಸಂಚಲನ!
ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ವಿಟರ್‌ನಲ್ಲಿ ಧೋನಿ ಕ್ರಿಕೆಟ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜುಲೈ 31 ರಿಂದ ಆಗಸ್ಟ್ 15ರ ವರೆಗೆ ಪ್ಯಾರಾ ಮಿಲಿಟರಿ ವಿಕ್ಟರ್ ಫೋರ್ಸ್ ಜೊತೆ ಧೋನಿ ದೇಶದ ಗಡಿ ಕಾದಿದ್ದರು. ವೆಸ್ಟ್ ಇಂಡೀಸ್ ಸರಣಿಯಿಂದ ಹಿಂದೆ ಸರಿದು ಸೇನೆಯಲ್ಲಿ ಸೇರಿಕೊಂಡಿದ್ದರು. ಭಾರತೀಯ ಸೇನೆಯಲ್ಲಿ ಧೋನಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಹೊಂದಿದ್ದಾರೆ. ಕ್ರಿಕೆಟಿಗನಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಮೊದಲ ಹಾಗೂ ಏಕೈಕ ಭಾರತೀಯ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.