ರಾಂಚಿ(ಆ.11): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ವಿಶ್ವಕಂಡ ಅತ್ಯುತಮ ಕ್ರಿಕೆಟಿಗ. ಕ್ರಿಕೆಟ್ ಜೊತೆಗೆ  ಧೋನಿಗೆ ಕಾರು, ಬೈಕ್ ಕ್ರೇಝ್ ಸ್ವಲ್ಪ ಹೆಚ್ಚೇ ಇದೆ. ಧೋನಿ ಮನೆಯಲ್ಲಿ ದುಬಾರಿ ಹಮ್ಮರ್ ಕಾರು ಸೇರಿದಂತೆ ಹಲವು ಕಾರುಗಳಿವೆ. ಇದೀಗ ನೂತನ ಕಾರು ಧೋನಿ ಮನೆ ಸೇರಿದೆ. ಜೀಪ್ ಕಂಪಾಸ್ ಚೆರೋಕಿ ಟ್ರಾಕ್‌ವಾಕ್ ಕಾರನ್ನು ಧೋನಿ ಖರೀದಿಸಿದ್ದಾರೆ.

ಇದನ್ನೂ ಓದಿ: ಬೂಟ್ ಪಾಲಿಶ್ ಮಾಡಿದ ಸಾವಿರಾರು ಕೋಟಿ ಒಡೆಯ ಧೋನಿ..!

ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧರ ಜೊತೆ ಗಡಿ ಕಾಯುತ್ತಿದ್ದಾರೆ. ಇಂಡಿಯನ್ ಟೆರಿಟೋರಿಯಲ್ ಆರ್ಮಿ 106 ಬೆಟಾಲಿಯನ್ ರೆಜಿಮೆಂಟ್ ಜೊತೆ ಧೋನಿ ಫುಲ್ ಬ್ಯುಸಿಯಾಗಿದ್ದಾರೆ. ಧೋನಿ ಸೇನೆಗೆ ಸೇರೋ ಮೊದಲೇ ಜೀಪ್ ಕಂಪಾಸ್ ಚೆರೋಕಿ ಟ್ರಾಕ್‌ವಾಕ್ ಕಾರನ್ನು ಬುಕ್ ಮಾಡಿದ್ದರು. ಇದೀಗ ಧೋನಿ ಪತ್ನಿ ಸಾಕ್ಷಿ ಧೋನಿ ಜೀಪ್ ಕಂಪಾಸ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಾರದೊಳಗೆ ಕಾಶ್ಮೀರ ಸಮಸ್ಯೆ ಬಗೆಹರಿಸಿದ MSD

ಆತ್ಮೀಯ ಸ್ವಾಗತ, ಧೋನಿ ನೆಚ್ಚಿನ ಆಟಿಕೆ ಮನೆ ಸೇರಿದೆ. ನಿಮ್ಮನ್ನು ಮಿಸ್‌ಮಾಡಿಕೊಳ್ಳುತ್ತಿದ್ದೇನೆ. ಭಾರತದ ಮೊದಲ ಹಾಗೂ ಏಕೈಕ  ಜೀಪ್ ಕಂಪಾಸ್ ಚೆರೋಕಿ ಟ್ರಾಕ್‌ವಾಕ್ ಪೌರತ್ವಕ್ಕಾಗಿ ಕಾಯುತ್ತಿದ್ದೇನೆ ಎಂದು ಸಾಕ್ಷಿ ಧೋನಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

 

ಧೋನಿ ಖರೀದಿಸಿರುವ ಜೀಪ್ ಕಂಪಾಸ್ ಚೆರೋಕಿ ಟ್ರಾಕ್‌ವಾಕ್ ಕಾರಿನ ಬೆಲೆ 90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಕಾರಿನ ಆನ್ ರೋಡ್ ಬೆಲೆ ಸರಿಸುಮಾರು 1 ಕೋಟಿ ರೂಪಾಯಿ ದಾಟಲಿದೆ. ಈ ನೂತನ ಕಾರು 2017ರಲ್ಲಿ ಅಮೆರಿಕಾದಲ್ಲಿ ಬಿಡುಗಡೆಯಾಗಿದೆ. 6.2 ಲೀಟರ್ ಸೂಪರ್‌ ಚಾರ್ಜ್ V8 HEMI ಎಂಜಿನ್ ಹೊಂದಿದೆ. 707 bhp ಪವರ್ ಹಾಗೂ  875 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

ಇದನ್ನೂ ಓದಿ: ಗುಟ್ಟು ಬಿಚ್ಚಿಟ್ಟ ಮಾದಕ ತಾರೆ ಸನ್ನಿ- ಹೃದಯದಲ್ಲಿ ಕ್ರಿಕೆಟಿಗ ಎಂ.ಎಸ್.ಧೋನಿ!

 ಧೋನಿ ಬಳಿಕ ಹಲವು ದುಬಾರಿ ಕಾರು ಹಾಗೂ ಬೈಕ್‌ಗಳಿವೆ.  ಫೆರಾರಿ 599 GTO, ಹಮ್ಮರ್ H2,  GMC ಸಿಯೇರಾ ಸೇರಿದಂತೆ ಹಲವು ಕಾರುಗಳಿವೆ. ಇನ್ನ ಕವಾಸದಿ ನಿಂಜ H2, ಹೆಲ್‌ಕಾಟ್, BSA, ಸುಜುಕಿ ಹಯಬೂಸಾ, ರಾಯಲ್ ಎನ್‌ಫೀಲ್ಡ್,  ಸೇರಿದಂತೆ ಹಲವು ಹಳೇ ಬೈಕ್‍‌ಗಳು ಧೋನಿ ಬಳಿಯಿವೆ.