ಮುಂಬೈ(ಮಾ.14): ಎಂ.ಎಸ್.ಧೋನಿ ಏಕದಿನ ನಾಯಕತ್ವದಿಂದ ಕೆಳಗಿಳಿದ ವರ್ಷಗಳೇ ಉರುಳಿದೆ. ಇನ್ನು ಸತತ ಕ್ರಿಕೆಟ್‌ನಿಂದಲೂ ದೂರವಿದ್ದಾರೆ. ಆದರೆ ಧೋನಿ ಪಾಪ್ಯುಲಾರಿಟಿಗೆ ಯಾವುದೇ ಕೊರತೆ ಇಲ್ಲ. ಇದೀಗ ಬಾಲಿವುಡ್ ಮಾದಕ ತಾರೆ ಸನ್ನಿ ಲಿಯೋನ್ ತಮ್ಮ ನೆಚ್ಚಿನ ಕ್ರಿಕೆಟಿಗ ಎಂ.ಎಸ್.ಧೋನಿ ಎಂದಿದ್ದಾರೆ.

ಇದನ್ನೂ ಓದಿ: ಚುನಾವಣಾ ದಿನಾಂಕ ನಿಗದಿ ಬೆನ್ನಲ್ಲೇ ಸಚಿನ್, ಕೊಹ್ಲಿ ನೆರವು ಕೇಳಿದ ಮೋದಿ!

ಎಂ.ಎಸ್.ಧೋನಿ ಕೌಟುಂಬಿಕ ವ್ಯಕ್ತಿ. ಧೋನಿ ಸರಳತೆ ಎಲ್ಲರಿಗೂ ಮಾದರಿ. ಧೋನಿ  ಮಗಳು  ಫೋಟೋಗಳನ್ನ ನೋಡಿದ್ದೇನೆ. ಝಿವಾ ಧೋನಿ ತುಂಬಾ ಮುದ್ದಾಗಿದ್ದಾರೆ. ಕ್ರಿಕೆಟಿಗರಲ್ಲಿ ಧೋನಿಯೇ ನನ್ನ ಅಚ್ಚು ಮೆಚ್ಚು ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. 

ಇದನ್ನೂ ಓದಿ: ಧೋನಿ ಪತ್ನಿ-ಕೊಹ್ಲಿ ಮಡದಿ ಇಬ್ಬರೂ ಕ್ಲಾಸ್‌ಮೇಟ್ಸ್!

ಆಸ್ಟ್ರೇಲಿಯಾ ವಿರುದ್ದದ ಆರಂಭಿಕ 3 ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಧೋನಿ, ಅಂತಿಮ 2 ಪಂದ್ಯದಿಂದ ವಿಶ್ರಾಂತಿ ಪಡೆದಿದ್ದರು. ಇದೀಗ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್  ತಂಡವನ್ನು ಮುನ್ನಡೆಸಲಿದ್ದಾರೆ. ಬಳಿಕ 2019ರ ವಿಶ್ವಕಪ್ ಟೂರ್ನಿಯಲ್ಲಿ ಆಡಲಿದ್ದಾರೆ. ಇತ್ತ ಸನ್ನಿ ಲಿಯೋನ್ ಕೂಡ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ.