Asianet Suvarna News Asianet Suvarna News

ಲಡಾಕ್‍‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಧೋನಿ ಧ್ವಜಾರೋಹಣ!

ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧರ ಜೊತೆ ಸೇವೆ ಸಲ್ಲಿಸುತ್ತಿರುವ ಎಂ.ಎಸ್.ಧೋನಿ, ಲಡಾಕ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲಿದ್ದಾರೆ. ಕೇಂದ್ರಾಡಳಿತ ಪ್ರದೇಶವಾದ ಬಳಿಕ ಧೋನಿ ಮೊದಲ ಬಾರಿಗೆ ಲಡಾಕ್‌ನಲ್ಲಿ ಧ್ವಜಾರೋಹಣ ಮಾಡಲಿದ್ದಾರೆ.

MS Dhoni likley to hoist national flag in Ladakh on Independence Day
Author
Bengaluru, First Published Aug 13, 2019, 8:33 PM IST

ಕಾಶ್ಮೀರ(ಆ.13):  ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದೆ. ಸ್ವತಂತ್ರ್ಯ ಭಾರತದಲ್ಲೇ ಇದು ಐತಿಹಾಸಿಕ ನಿರ್ಧರವಾಗಿ ಮಾರ್ಪಟ್ಟಿದೆ. ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ ಇದೀಗ ಜಮ್ಮು, ಕಾಶ್ಮೀರ ಹಾಗೂ ಲಡಾಕ್ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಬಳಿಕ ಲಡಾಕ್‌ನಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಧ್ವಜಾರೋಹಣ ನೇರವೇರಿಸಲಿದ್ದಾರೆ.

ಇದನ್ನೂ ಓದಿ: ಬೂಟ್ ಪಾಲಿಶ್ ಮಾಡಿದ ಸಾವಿರಾರು ಕೋಟಿ ಒಡೆಯ ಧೋನಿ..!

ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಸದ್ಯ ಭಾರತೀಯ ಸೇನೆಯ 106 ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್ ಜೊತೆ ಸೇವೆ ಸಲ್ಲಿಸುತ್ತಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸಲು ಧೋನಿ, ವೆಸ್ಟ್ ಇಂಡೀಸ್ ಪ್ರವಾಸದಿಂದಲೂ ಹಿಂದೆ ಸರಿದಿದ್ದರು. ಧೋನಿ ಜುಲೈ 31 ರಿಂದ ಆಗಸ್ಟ್ 15ರ ವರೆಗೆ ಧೋನಿ ಕಾಶ್ಮೀರ ಕಣಿವೆಯಲ್ಲಿ ಗಸ್ತು ತಿರುಗಲಿದ್ದಾರೆ. ಆಗಸ್ಟ್ 15ರಂದು ಭಾರತ 73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ. ಇದೀಗ ಲಡಾಕ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಧೋನಿ ಧ್ವಜಾರೋಹಣ ನೇರವೇರಿಸಲಿದ್ದಾರೆ.

ಇದನ್ನೂ ಓದಿ: ಸೇನೆಯಲ್ಲಿ ಧೋನಿ ಆಟೋಗ್ರಾಫ್‌ಗೆ ಫುಲ್ ಡಿಮ್ಯಾಂಡ್!

ಲಡಾಕ್‌ನ ಯಾವ ಪ್ರಾಂತ್ಯದಲ್ಲಿ ಧೋನಿ ಧ್ವಜಾರೋಹಣ ನೇರವೇರಿಸಲಿದ್ದಾರೆ ಅನ್ನೋದನ್ನು ಸೇನೆ ಬಹಿರಂಗ ಪಡಿಸಿಲ್ಲ. ಭದ್ರತಾ ಕಾರಣದಿಂದ ಧೋನಿ ಧ್ವಜಾರೋಹಣ ಕಾರ್ಯಕ್ರಮ ಗೌಪ್ಯವಾಗಿ ಇಡಲಾಗಿದೆ. ನೂತನ ಕೇಂದ್ರಾಡಳಿತ ಪ್ರದೇಶವಾದ ಲಡಾಕ್‌ನಲ್ಲಿ ಧ್ವಜಾರೋಹಣ ಮಾಡೋ ಮೂಲಕ ವಿಶೇಷ ಸಂದೇಶ ರವಾನೆಯಾಗಲಿದೆ. ಈ ಕಾರ್ಯಕ್ರಮದದಲ್ಲಿ ಲಡಾಕ್ ಯುವ MP ಜಮಯಂಗ್ ತೆಸರಿಂಗ್ ನಂಗ್ಯಾಲ್ ಕೂಡ ಹಾಜರಾಗಲಿದ್ದಾರೆ.
 

Follow Us:
Download App:
  • android
  • ios