ಕಾಶ್ಮೀರ(ಆ.02): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಕಾಶ್ಮೀರದ ಗಡಿಯಲ್ಲಿ ಭಾರತಿಯ ಸೇನೆ ಜೊತೆ ಗಸ್ತು ತಿರುಗುತ್ತಿದ್ದಾರೆ. ದೇಶ ಸೇವೆಗಾಗಿ ಧೋನಿ, ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. 106 ಟೆರಿಟೊರಿಯಲ್ ಆರ್ಮಿ ಬೆಟಾಲಿಯನ್(ಪ್ಯಾರ) ಫೋರ್ಸ್ ಜೊತೆ 2 ವಾರಗಳ ಕಾಲ ಧೋನಿ ಸೇವೆ ಸಲ್ಲಿಸಲಿದ್ದಾರೆ. ಸೇನೆ ಕ್ಯಾಂಪ್ ಸೇರಿಕೊಂಡಿರುವ ಧೋನಿಗೆ ಫುಲ್ ಡಿಮ್ಯಾಂಡ್. ಧೋನಿ ಆಟೋಗ್ರಾಫ್ ಪಡೆಯಲು  ಸೈನಿಕರು ಮುಗಿ ಬೀಳುತ್ತಿದ್ದಾರೆ.

ಇದನ್ನೂ ಓದಿ: ಉಗ್ರ ಚಟುವಟಿಕೆ: ದಕ್ಷಿಣ ಕಾಶ್ಮೀರದಲ್ಲಿ ಧೋನಿ ಪಹರೆ!

ದಕ್ಷಿಣ ಕಾಶ್ಮೀರದಲ್ಲಿ ಸಾಮಾನ್ಯ ಯೋಧರಂತೆ ಧೋನಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಸೇನಾ ಕ್ಯಾಂಪ್‌ನಲ್ಲಿ ಧೋನಿ ಆಟೋಗ್ರಾಫ್ ಪಡೆಯಲು ಎಲ್ಲರು ಉತ್ಸುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಧೋನಿ ಬ್ಯಾಟ್ ಮೇಲೆ ಸಹಿ ಹಾಕುತ್ತಿರುವ ಫೋಟೋ ಬಾರಿ ಸದ್ದು ಮಾಡುತ್ತಿದೆ. ಸೈನಿಕರ ಜೊತೆ ನಿಂತು ಧೋನಿ ಆಟೋಗ್ರಾಫ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

 

ಇದನ್ನೂ ಓದಿ: ಧೋನಿಗೆ ಸಲ್ಯೂಟ್ ಹೊಡೆದ ವಿಂಡೀಸ್ ವೇಗಿ ಕಾಟ್ರೆಲ್!

ಆಗಸ್ಟ್ 15 ರ ವರೆಗೆ ಧೋನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ಪ್ರಾಥಮಿಕ ತರಬೇತಿ ಪಡೆದ ಧೋನಿ ಸೇನೆಗೆ ಸೇರಿಕೊಂಡಿದ್ದಾರೆ. ಪ್ಯಾರಾ ರಿಜಿಮೆಂಟ್‌ನಲ್ಲಿ 5 ಬಾರಿ ಆಗಸದಿಂದ ಹಾರಿ ಸಾಹಸ ಪ್ರದರ್ಶನ ಮಾಡಿರುವ ಧೋನಿ, ಪ್ಯಾರಾ ಟ್ರೂಪರ್ ಆಗಿ ಅರ್ಹತೆ ಪಡೆದಿದ್ದಾರೆ. ಟೀಂ ಇಂಡಿಯಾದಲ್ಲಿನ ಕೊಡುಗೆಯನ್ನು ಗಮನಿ ಭಾರತೀಯ ಸೇನೆ ಧೋನಿಗೆ ಲೆಫ್ಟಿನೆಂಟ್ ಕೊಲೊನೆಲ್ ಗೌರವ ಹುದ್ದೆ ನೀಡಿದೆ.