Asianet Suvarna News Asianet Suvarna News

ಬಾಲಿವುಡ್ ಈ ಹೀರೋ ಜತೆ ಧೋನಿ ನಟನೆ..?

ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯವಾದ ಬಳಿಕ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ಮಾಜಿ ನಾಯಕ ಎಂ.ಎಸ್. ಧೋನಿ ಬಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

MS Dhoni likely to make his Bollywood acting debut alongside Sanjay Dutt
Author
New Delhi, First Published Sep 27, 2019, 9:43 AM IST

ನವ​ದೆ​ಹ​ಲಿ[ಸೆ.27]: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ತಮ್ಮ ಜೀವ​ನಾ​ಧಾ​ರಿತ ಸಿನಿಮಾ ಸೂಪರ್‌ ಹಿಟ್‌ ಆದ ಬಳಿಕ, ಇದೀಗ ಸ್ವತಃ ತಾವೇ ಬಾಲಿ​ವುಡ್‌ಗೆ ಪದಾ​ರ್ಪಣೆ ಮಾಡ​ಲಿ​ದ್ದಾರಾ?. ಈ ರೀತಿಯ ಸುದ್ದಿ​ಯೊಂದು ಹಬ್ಬಿದೆ. 

ಧೋನಿ ಅಲಭ್ಯತೆಗೆ ಕಾರಣ ಬಹಿರಂಗ; ಆತಂಕದಲ್ಲಿ ಫ್ಯಾನ್ಸ್!

ಖ್ಯಾತ ನಟ ಸಂಜಯ್‌ ದತ್‌ ಅವರ ‘ಡಾ​ಗ್‌ಹೌಸ್‌’ ಎನ್ನುವ ಚಿತ್ರದಲ್ಲಿ ಧೋನಿ ಕೂಡ ಕಾಣಿ​ಸಿ​ಕೊ​ಳ್ಳ​ಲಿ​ದ್ದಾರೆ ಎಂದು ಮಾಧ್ಯ​ಮ​ಗಳು ವರದಿ ಮಾಡಿವೆ. ಡಾಗ್‌ಹೌಸ್ ಒಂದು ಬಹು​ತಾರಾ ಚಿತ್ರವಾಗಿದ್ದು, ಸುನಿಲ್‌ ಶೆಟ್ಟಿ, ಇಮ್ರಾನ್‌ ಹಾಶ್ಮಿ ಹಾಗೂ ಆರ್‌.ಮಾ​ಧ​ವನ್‌ ಸಹ ಪ್ರಮುಖ ಪಾತ್ರಗಳನ್ನು ನಿರ್ವ​ಹಿ​ಸ​ಲಿ​ದ್ದಾರೆ ಎನ್ನ​ಲಾ​ಗಿದೆ. ಎಲ್ಲ​ವೂ ಅಂದು​ಕೊಂಡಂತೆ ನಡೆ​ದರೆ ಧೋನಿ ಸಹ ಈ ಚಿತ್ರದಲ್ಲಿ ಬಣ್ಣ ಹಚ್ಚ​ಲಿ​ದ್ದಾರೆ ಎಂದು ವರ​ದಿ​ಯಲ್ಲಿ ಹೇಳ​ಲಾ​ಗಿದೆ. ಅಕ್ಟೋಬರ್‌ ಕೊನೆ ವೇಳೆಗೆ ಚಿತ್ರ​ದ ತಾರಾಂಗಣದ ಬಗ್ಗೆ ಅಧಿ​ಕೃತ ಮಾಹಿತಿ ಹೊರ​ಬೀ​ಳುವ ನಿರೀಕ್ಷೆ ಇದೆ.

ವಿಶ್ವ​ಕಪ್‌ ವೇಳೆ ಧೋನಿ ಗಾಯಾ​ಳು: ವಿಶ್ರಾಂತಿ?

ಎಂ.ಎಸ್‌.ಧೋನಿ ನವೆಂಬರ್‌ ವರೆಗೂ ಆಯ್ಕೆಗೆ ಲಭ್ಯ​ವಿ​ರು​ವು​ದಿ​ಲ್ಲ ಎನ್ನುವ ಸುದ್ದಿ ಹೊರ​ಬಿದ್ದಿದೆ. ಧೋನಿಗೆ ವಿಶ್ರಾಂತಿ ನೀಡ​ಲಾ​ಗಿದೆಯೇ, ಅವ​ರನ್ನು ತಂಡ​ದಿಂದ ಕೈಬಿ​ಡ​ಲಾ​ಗಿ​ದೆಯೇ ಎನ್ನು​ವು​ದರ ಕುರಿತು ಬಿಸಿ​ಸಿಐ ಆಯ್ಕೆ ಸಮಿತಿ ಸ್ಪಷ್ಟನೆ ನೀಡಿಲ್ಲ. 

ಕಾಡಿ ಬೇಡಿ ಓಪನರ್ ಆಗಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್..!

ಮೂಲ​ಗಳ ಪ್ರಕಾ​ರ, ಬೆನ್ನು ನೋವಿನ ಸಮಸ್ಯೆಯ ನಡುವೆಯೇ ಧೋನಿ ವಿಶ್ವ​ಕಪ್‌ಗೆ ತೆರ​ಳಿ​ದರು. ಅಲ್ಲಿ ನೋವು ಹೆಚ್ಚಾ​ಗಿದ್ದು, ಮೊಣ​ಕೈ ಗಾಯಕ್ಕೂ ಅವರು ತುತ್ತಾ​ದರು ಎಂದು ಮೂಲ​ಗಳು ತಿಳಿ​ಸಿವೆ. ಧೋನಿ ಸದ್ಯ ಚೇತ​ರಿಕೆಯ ಹಾದಿ​ಯ​ಲ್ಲಿದ್ದು, ಡಿಸೆಂಬರ್‌ ಇಲ್ಲವೇ 2020ರ ಜನ​ವ​ರಿ​ಯಲ್ಲಿ ತಂಡಕ್ಕೆ ವಾಪ​ಸಾ​ಗ​ಬ​ಹುದು ಎನ್ನ​ಲಾ​ಗಿದೆ.
 

Follow Us:
Download App:
  • android
  • ios