ಕಾಡಿ ಬೇಡಿ ಓಪನರ್ ಆಗಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್..!

ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬದಲಾದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದ ಸಚಿನ್ ಆ ದಿನಗಳನ್ನು ಮೆಲುಕು ಹಾಕಿದ್ದು ಹೀಗೆ...

legendary Cricketer Sachin Tendulkar reveals how he had to beg and plead for a chance to open the innings for Team India

"

’ಮುಂಬೈ[ಸೆ.26]: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್’ನಲ್ಲಿ ಆರಂಭಿಕನಾಗಲು ಹೇಗೆಲ್ಲಾ ಕಷ್ಟಪಟ್ಟಿದ್ದರು ಎನ್ನುವ ರಹಸ್ಯವನ್ನು ಸ್ವತಃ ಬಾಯ್ಬಿಟ್ಟಿದ್ದಾರೆ, ಅಲ್ಲದೆ ಯುವ ಮನಸ್ಸುಗಳಿಗೆ ಸ್ಫೂರ್ತಿದಾಯಕ ಸಂದೇಶವೊಂದನ್ನು ನೀಡಿದ್ದಾರೆ.

ಧೋನಿ ಅಲಭ್ಯತೆಗೆ ಕಾರಣ ಬಹಿರಂಗ, ಆತಂಕದಲ್ಲಿ ಅಭಿಮಾನಿಗಳು

ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಆಗಿ ಗುರುತಿಸಿಕೊಂಡಿದ್ದ ಸಚಿನ್ ತೆಂಡುಲ್ಕರ್ 1994ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆರಂಭಿಕನಾಗಿ ಆಡಲು ನಿರ್ಧರಿಸಿದ್ದರು. ಆ ದಿನಗಳಲ್ಲಿ ಎಲ್ಲರೂ ವಿಕೆಟ್ ಉಳಿಸಿಕೊಳ್ಳಲು ಪರಡಾಡುವ ಸನ್ನಿವೇಶವಿತ್ತು. ಇಂತಹ ಸಂದರ್ಭದಲ್ಲೇ ನಾನು ಆರಂಭಿಕನಾಗಿ ಆಡಲು ಕಾಡಿ-ಬೇಡಿ ಅವಕಾಶ ಪಡೆದೆ. ಒಂದು ವೇಳೆ ನಾನು ಫೇಲ್ ಆದರೆ ಮತ್ತೆ ಅವಕಾಶ ಕೇಳುವುದಿಲ್ಲ ಎಂದು ನಾಯಕನ ಬಳಿ ಹೇಳಿದ್ದರಂತೆ.

ವಿರಾಟ್ ಕೊಹ್ಲಿಗೆ ಶುರುವಾಯ್ತು ಆತಂಕ; ಇನ್ನೊಂದು ತಪ್ಪು ಮಾಡಿದ್ರೆ ಬ್ಯಾನ್

ಆಕ್ಲೆಂಡ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಾನು ಕೇವಲ 49 ಎಸೆತಗಳಲ್ಲಿ 82 ರನ್ ಬಾರಿಸಿದ್ದೆ, ಆ ಬಳಿಕ ನಾನು ಯಾರನ್ನೂ ಕೇಳಲು ಹೋಗಲಿಲ್ಲ. ಅವರೇ ನನ್ನನ್ನು ಆರಂಭಿಕನಾಗಿ ಕಣಕ್ಕಿಳಿಸುವ ನಿರ್ಧಾರಕ್ಕೆ ಬಂದರು. ಇದರ ಅರ್ಥ ಏನೆಂದರೆ, ಸೋಲುಗಳಿಗೆ ಎಂದಿಗೂ ಹೆದರಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಮಾಧವ್‌ ಆಪ್ಟೆ ನಿಧನಕ್ಕೆ ಕಂಬನಿ ಮಿಡಿದ ಸಚಿನ್

ಸಚಿನ್ ಏಕದಿನ ಕ್ರಿಕೆಟ್’ನಲ್ಲಿ 49 ಶತಕಗಳು ಬಾರಿಸಿರಬಹುದು. ಆದರೆ ಮೊದಲ ಏಕದಿನ ಶತಕ ಬಾರಿಸಲು ಬರೋಬ್ಬರಿ 5 ವರ್ಷಗಳು ಕಾದಿದ್ದರು. 1994ರ ಸೆಪ್ಟೆಂಬರ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಲಂಬೋದಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ಆರಂಭಿಕನಾಗಿ ಕಣಕ್ಕಿಳಿದಾಗಲೇ ಮೊದಲ ಶತಕ ದಾಖಲಿಸಿದರು. ಸಚಿನ್ ತೆಂಡುಲ್ಕರ್ ಆರಂಭಿಕನಾಗಿ ಕಣಕ್ಕಿಳಿದ ಮೇಲೆ ಮೊದಲ 5 ಇನಿಂಗ್ಸ್’ಗಳಲ್ಲಿ ಕ್ರಮವಾಗಿ 82, 63, 40, 63 ಹಾಗೂ 73 ರನ್ ಸಿಡಿಸಿದ್ದರು. 

ಸಚಿನ್ ತೆಂಡುಲ್ಕರ್ ಆರಂಭಿಕನಾಗಿ ಬಡ್ತಿ ಪಡೆದ ಮೇಲೆ ಹಿಂತಿರುಗಿ ನೋಡಲೇ ಇಲ್ಲ. ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ಒಟ್ಟು 463 ಏಕದಿನ ಪಂದ್ಯಗಳನ್ನಾಡಿ 18,426 ರನ್ ಬಾರಿಸುವ ಮೂಲಕ ಅತಿಹೆಚ್ಚು ಏಕದಿನ ಪಂದ್ಯವಾಡಿದ ಹಾಗೆಯೇ ಅತಿಹೆಚ್ಚು ರನ್ ಬಾರಿಸಿದ ಆಟಗಾರ ಎನ್ನುವ ದಾಖಲೆಯೊಂದಿಗೆ ವಿದಾಯ ಹೇಳಿದ್ದರು. 
 

Latest Videos
Follow Us:
Download App:
  • android
  • ios