ಐಪಿಎಲ್ 2027 ರ ಮಿನಿ ಹರಾಜಿಗೆ ಆರ್ಸಿಬಿ, ಗುಜರಾತ್ ಟೈಟಾನ್ಸ್ ಮತ್ತು ಕೆಕೆಆರ್ ತಂಡಗಳು ಹೇಗೆ ಸಿದ್ಧತೆ ನಡೆಸಿವೆ ಎಂಬುದರ ಮಾಹಿತಿ ಇಲ್ಲಿದೆ. ಕಡಿಮೆ ಹಣವಿದ್ದರೂ ಬಲಿಷ್ಠ ತಂಡ ಕಟ್ಟುವ ಬಗ್ಗೆ ಆಂಡಿ ಫ್ಲವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಾರ್ಥಿವ್ ಪಟೇಲ್ ಮತ್ತು ಅಭಿಷೇಕ್ ನಾಯರ್ ತಮ್ಮ ತಂಡಗಳ ಹರಾಜು ತಂತ್ರಗಳನ್ನು ಹಂಚಿಕೊಂಡಿದ್ದಾರೆ.
ಐಪಿಎಲ್ 2027 ಗಾಗಿ ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿವೆ. ಸತತ ಎರಡು ಬಾರಿಯ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮೂರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಈ ಬಗ್ಗೆ ಆರ್ಸಿಬಿ ಮುಖ್ಯ ಕೋಚ್ ಆಂಡಿ ಫ್ಲವರ್ ಮೂರನೇ ಕಪ್ ಗೆಲ್ಲುವ ಬಗ್ಗೆ ಜಿಯೋಸ್ಟಾರ್ನ "ಟಾಟಾ ಐಪಿಎಲ್ 2027 ರಿಟೆನ್ಷನ್ ಸ್ಪೆಷಲ್" ಕಾರ್ಯಕ್ರಮದಲ್ಲಿ ಮಾತನ್ನಾಡಿದ್ದಾರೆ.
ಆರ್ಸಿಬಿ ಕೋಚ್ ಏನಂದ್ರು?
ಮುಂದಿನ ತಿಂಗಳು ಗೋವಾದಲ್ಲಿ ನಡೆಯಲಿರುವ ಮಿನಿ ಹರಾಜು ನಡೆಯಲಿದೆ. ಬೇರೆ ಫ್ರಾಂಚೈಸಿಗಳಿಗೆ ಹೋಲಿಸಿದರೆ ಆರ್ಸಿಬಿ ಪರ್ಸ್ನಲ್ಲಿ ಕಡಿಮೆ ಹಣ ಇದೆ. ಹೀಗಿದ್ದೂ ನಾವು ಬಲಿಷ್ಠ ತಂಡ ಕಟ್ಟಲು ಚಿಂತಿಸುವುದಿಲ್ಲ ಎಂದಿದ್ದಾರೆ ಕೋಚ್. ಕಳೆದ ಎರಡು ವರ್ಷಗಳಲ್ಲಿ ನಮ್ಮ ತಂಡವು ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದೆ. ಮುಂದಿನ ಋತುವಿನಲ್ಲಿ ಅದೇ ವೇಗವನ್ನು ಕಾಯ್ದುಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ.
ಕಳೆದ ಎರಡು ವರ್ಷಗಳು ನಮಗೆ ಉತ್ತಮವಾಗಿವೆ. ಈಗ ಮೂರನೇ ವರ್ಷವನ್ನು ಎದುರು ನೋಡುತ್ತಿದ್ದೇವೆ. ನಾವು ಆತ್ಮವಿಶ್ವಾಸದಲ್ಲಿದ್ದೇವೆ ಮತ್ತು ಆರಾಮದಾಯಕವಾಗಿದ್ದೇವೆ. ನಾವು ಕೆಲವು ಆಟಗಾರರನ್ನು ರಿಲೀಸ್ ಮಾಡಿದ್ದೇವೆ. ಹರಾಜಿನಲ್ಲಿ ನಮ್ಮ ಜವಾಬ್ದಾರಿ ನಮ್ಮ ತಂಡವನ್ನು ಸುಧಾರಿಸುವುದಾಗಿದೆ.
ಹರಾಜಿನಲ್ಲಿ ಇತರ ತಂಡಗಳಿಗಿಂತ ಆರ್ಸಿಬಿ ಕಡಿಮೆ ಖರ್ಚು ಮಾಡಲಿದೆ. ಹಾಗಿದ್ದೂ ನಮ್ಮ ಕಾರ್ಯತಂತ್ರದ ಮೇಲೆ ಪರಿಣಾಮ ಬೀರುವುದಿಲ್ಲ. ತಂಡವು ತನ್ನ ಹೆಚ್ಚಿನ ಆಟಗಾರರನ್ನು ಮತ್ತು ಬಲವಾದ ಕೋರ್ ಉಳಿಸಿಕೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ತಂಡದ ಯಶಸ್ಸಿಗೆ ಕಾರಣವಾಗಿದೆ. 2027ರ ಋತುವು ತಂಡಕ್ಕೆ ಬಹಳ ಮುಖ್ಯವಾಗಿದೆ. ಏಕೆಂದರೆ ಅದು ಸತತ ಮೂರನೇ ಪ್ರಶಸ್ತಿ ಗೆದ್ದು ಇತಿಹಾಸವನ್ನು ಸೃಷ್ಟಿಸುವ ಅವಕಾಶ ಹೊಂದಿದೆ ಎಂದು ಆರ್ಸಿಬಿ ಕೋಚ್ ಆಂಡಿ ಫ್ಲವರ್ ಹೇಳಿದ್ದಾರೆ. ಆರ್ಸಿಬಿಯು ವಿರಾಟ್ ಕೊಹ್ಲಿ, ಜೋಶ್ ಹ್ಯಾಜಲ್ವುಡ್, ಫಿಲ್ ಸಾಲ್ಟ್ ಮತ್ತು ನಾಯಕ ರಜತ್ ಪಾಟಿದಾರ್ ಅವರಂತಹ ಪ್ರಮುಖ ಆಟಗಾರರನ್ನ ಉಳಿಸಿಕೊಂಡಿದೆ. ಗಾಯಗೊಂಡ ಇಂಗ್ಲೆಂಡ್ ಆಲ್ರೌಂಡರ್ ಜಾಕೋಬ್ ಬೆಥೆಲ್ ಸೇರಿದಂತೆ ಫ್ರಾಂಚೈಸಿ ಕೇವಲ ಐದು ಆಟಗಾರರನ್ನು ಬಿಡುಗಡೆ ಮಾಡಿದೆ. ಇನ್ನು ಆರ್ಸಿಬಿ ಪರ್ಸ್ನಲ್ಲಿ 14.15 ಕೋಟಿ ರೂ.ಗಳ ಹಣ ಹೊಂದಿದೆ. ಅದರಲ್ಲಿ ಅದು 5 ಆಟಗಾರರ ಸ್ಥಾನಗಳನ್ನು ತುಂಬಬೇಕಾಗಿದೆ. ಇದರಲ್ಲಿ ಒಬ್ಬ ವಿದೇಶಿ ಆಟಗಾರನ ಸ್ಥಾನವೂ ಸೇರಿದೆ. ಐಪಿಎಲ್ 2027ರ ಆಟಗಾರರ ಹರಾಜು ಡಿಸೆಂಬರ್ 16 ರಂದು ಗೋವಾದಲ್ಲಿ ನಡೆಯಲಿದೆ.
ಇದೇ ವೇಳೆ ಗುಜರಾತ್ ಟೈಟಾನ್ಸ್ ತಂಡದ ಪ್ಲಾನ್ ಬಿಚ್ಚಿಟ್ಟ ಸಹಾಯಕ ಕೋಚ್ ಪಾರ್ಥಿವ್ ಪಟೇಲ್.. ಇಶಾಂತ್ ಶರ್ಮಾ ವಿಚಾರದ ಬಗ್ಗೆ ಮಾತನ್ನಾಡಿ.. ಕಳೆದ ಎರಡು ಋತುಗಳಲ್ಲಿ ಇಶಾಂತ್ ಗುಜರಾತ್ ತಂಡದ ಭಾಗವಾಗಿದ್ದರು. ಆಟಗಾರರ ಮೇಲೆ ಬಲವಾದ ಪ್ರಭಾವ ಬೀರಿದ್ದರು. ಕಳೆದ ಋತುವಿನಲ್ಲಿ ಅವರಿಗೆ ಒಂದೇ ಒಂದು ಪಂದ್ಯವೂ ಸಿಗಲಿಲ್ಲ. 100 ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರನು ಒಂದೇ ಒಂದು ಪಂದ್ಯವನ್ನು ಆಡದೆ ಇಡೀ ಐಪಿಎಲ್ ಋತುವನ್ನು ಕಳೆಯುವುದು ಕಷ್ಟ. ಲ್ಯೂಕ್ ವುಡ್ ಮತ್ತು ಕಾನರ್ ಎಸ್ಟರ್ಹುಯಿಜೆನ್ ಅವರಿಗೂ ಇದು ಅನ್ವಯಿಸುತ್ತದೆ. ಅದಕ್ಕಾಗಿಯೇ ನಾವು ಕೆಲವು ಆಟಗಾರರನ್ನು ಬಿಡುಗಡೆ ಮಾಡಲು ನಿರ್ಧರಿಸಿದೇವು ಎಂದರು. ಕಳೆದ ಮೂರು ವರ್ಷಗಳಿಂದ ಗುಜರಾತ್ ಟೈಟಾನ್ಸ್ ಉತ್ತಮ ಪ್ರದರ್ಶನ ನೀಡಿದೆ. 2025 ರಲ್ಲಿ ನಮ್ಮ ತಂಡವು ಪ್ಲೇಆಫ್ಗೆ ತಲುಪಿತು. ಅದಕ್ಕೂ ಮೊದಲು ಜಿಟಿ ಫೈನಲ್ ತಲುಪಿತು. ಹೀಗಾಗಿ ನಾವು ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ ಎಂದು ಪಟೇಲ್ ತಿಳಿಸದರು.
ನಮಗೆ ಹರ್ಷಲ್ ಪಟೇಲ್ ತುಂಬಾ ಮುಖ್ಯವಾಗಿದ್ದಾರೆ. ಅವರ ಅಗತ್ಯ ಹಿನ್ನೆಲೆಯಲ್ಲಿ ನಾವು ಹೈದರಾಬಾದ್ ತಂಡದಿಂದ ಅವರನ್ನು ನಾವು ಸೇರಿಸಿಕೊಂಡಿದ್ದೇವೆ. ಇಶಾಂತ್ ಶರ್ಮಾ ಅನುಭವದ ಕೊರತೆಯನ್ನು ಹರ್ಷಲ್ ತುಂಬುತ್ತಾರೆ ಎಂದು ಪಾರ್ಥಿವ್ ಪಟೇಲ್ ಆಶಿಸಿದ್ದಾರೆ. ಹರ್ಷಲ್ ಗುಜರಾತ್ನಿಂದ ಬಂದವರು ಮಾತ್ರವಲ್ಲದೆ ಇಲ್ಲಿನ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು. ಡೆತ್ ಓವರ್ಗಳಲ್ಲಿ ಅವರ ಬೌಲಿಂಗ್ ತಂಡಕ್ಕೆ ತುಂಬಾ ಉಪಯುಕ್ತವಾಗಿದೆ ಎಂದು
ಪಾರ್ಥಿವ್ ಹೇಳಿದ್ದಾರೆ. ಹರ್ಷಲ್ ಯಾರ್ಕರ್ಗಳು, ನಿಧಾನಗತಿಯ ಎಸೆತಗಳು ಮತ್ತು ವಿವಿಧ ರೀತಿಯ ವ್ಯತ್ಯಾಸಗಳನ್ನು ಹೊಂದಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಬೌಲಿಂಗ್ ಮಾಡುವ ಅನುಭವವೂ ಅವರಿಗೆ ಇದೆ. ಐಪಿಎಲ್ನಲ್ಲಿ ಡೆತ್ ಓವರ್ಗಳಲ್ಲಿ ವಿಕೆಟ್ ಪಡೆಯುವಲ್ಲಿ ಅವರು ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಇದು ತಂಡದ ಯುವ ಬೌಲರ್ಗಳಿಗೂ ಪ್ರಯೋಜನವನ್ನು ನೀಡುತ್ತದೆ ಎಂದಿದ್ದಾರೆ.
ಕೆಕೆಆರ್ ಕೋಚ್ ಅಭಿಷೇಕ್ ನಾಯರ್ ಮಾತನ್ನಾಡಿ.. ಹರಾಜಿನಲ್ಲಿ ಫ್ರಾಂಚೈಸಿ ತನ್ನ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲು ಗಮನ ಹರಿಸಿದೆ. ಕಳೆದ ಬಾರಿ ಬ್ಯಾಟಿಂಗ್ನಲ್ಲಿ ಫೇಲ್ ಆಗಿದ್ದೇವು. ಹೀಗಾಗಿ ನಾವು ಈ ಬಾರಿ ಬ್ಯಾಟಿಂಗ್ ಶಕ್ತಿ ಹೆಚ್ಚಿಸಲು ತಂತ್ರ ರೂಪಿಸುತ್ತೇವೆ ಎಂದಿದ್ದಾರೆ. ಬ್ಯಾಟಿಂಗ್ ನಾವು ಬಲಪಡಿಸಲು ಬಯಸುವ ವಿಭಾಗ. ನಾವು ವಹಿವಾಟುಗಳ ಮೂಲಕ ಆಟಗಾರರನ್ನು ಸೇರಿಸಲು ಪ್ರಯತ್ನಿಸಿದ್ದೇವೆ. ಅದು ವಿಫಲವಾದಾಗ, ನಾವು ಈಗ ಹರಾಜಿನಲ್ಲಿ ಪ್ರವೇಶಿಸಲು ಮತ್ತು ನಮ್ಮ ಬ್ಯಾಟಿಂಗ್ ಅನ್ನು ಬಲಪಡಿಸುವ ಆಟಗಾರರನ್ನು ಸೇರಿಸಲು ಬಯಸುತ್ತೇವೆ ಎಂದಿದ್ದಾರೆ.
















