Asianet Suvarna News Asianet Suvarna News

ಧೋನಿ ತರಬೇತಿಗೆ ಭಾರತೀಯ ಸೇನಾ ಮುಖ್ಯಸ್ಥರಿಂದ ಗ್ರೀನ್ ಸಿಗ್ನಲ್!

ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದು ಸೇನೆಯಲ್ಲಿ ಸೇವೆ ಸಲ್ಲಿಸಲು ಮುಂದಾಗಿರುವ ಎಂ.ಎಸ್.ಧೋನಿಗೆ ಭಾರತೀಯ ಸೇನೆ ಅನುಮತಿ ನೀಡಿದೆ. 

MS Dhoni gets permission from indian army chief Gen Bipin rawat
Author
Bengaluru, First Published Jul 22, 2019, 4:08 PM IST

ರಾಂಚಿ(ಜು.22): ಭಾರತೀಯ ಸೇನೆಯಲ್ಲಿ ತರಬೇತಿ ಪಡೆಯಲು ಮುಂದಾಗಿರುವ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಧೋನಿ ತರಬೇತಿಗೆ ಅನುಮತಿ ನೀಡಿದ್ದಾರೆ. ಸೇನಾ ತರಬೇತಿಗಾಗಿ ಧೋನಿ, ವೆಸ್ಟ್ ಇಂಡೀಸ್ ಪ್ರವಾಸದಿಂದಲೂ ಹಿಂದೆ ಸರಿದಿದ್ದರು. ಧೋನಿ, ಜಮ್ಮು ಕಾಶ್ಮೀರದಲ್ಲಿರುವ ಸೇನಾ ತರಬೇತಿ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ. 

 

ಇದನ್ನೂ ಓದಿ: ಧೋನಿ ಭವಿಷ್ಯದ ಬಗ್ಗೆ ತುಟಿಬಿಚ್ಚಿದ ಆಯ್ಕೆ ಸಮಿತಿ ಮುಖ್ಯಸ್ಥ!

ವಿಶ್ವಕಪ್ ಟೂರ್ನಿ ಬಳಿಕ ಧೋನಿ ನಿವೃತ್ತಿಯಾಗುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ವೆಸ್ಟ್ ಇಂಡೀಸ್ ತಂಡದ ಆಯ್ಕೆಗೂ ಮುನ್ನ ಧೋನಿ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಸ್ಪಷ್ಟಪಡಿಸಿದರು. ಸೇನೆಯಲ್ಲಿ ತರಬೇತಿ ಪಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದರು.

ಇದನ್ನೂ ಓದಿ: ಸೇನೆಗೆ ಸೇರಿಕೊಳ್ಳಲು ಕ್ರಿಕೆಟ್‌ನಿಂದ ಬ್ರೇಕ್; ಧೋನಿಗೆ ಫ್ಯಾನ್ಸ್ ಸೆಲ್ಯೂಟ್!

ಭಾರತೀಯ ಟೆರಿಟೋರಿಯಲ್ ಆರ್ಮಿ ಪ್ಯಾರಾಚ್ಯೂಟ್ ರಿಜಿಮೆಂಟ್‌ನಲ್ಲಿ ತರಬೇತಿ ಪಡೆದಿದ್ದಾರೆ. ಪ್ಯಾರಾಚ್ಯೂಟ್ ಮೂಲಕ ಹಾರಿ ಸಾಹಸವನ್ನು ಪ್ರದರ್ಶಿಸಿದ್ದಾರೆ.  ಇಷ್ಟೇ ಅಲ್ಲ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕೊಲೊನೆಲ್ ಗೌರವ ಹುದ್ದೆಯನ್ನು ಹೊಂದಿದ್ದಾರೆ. 

Follow Us:
Download App:
  • android
  • ios