ರಾಂಚಿ(ಜು.20): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಸೇನೆ ಸೇರಿಕೊಳ್ಳಲು ಇದೀಗ ಕ್ರಿಕೆಟ್‌ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಮುಂದಿನ 2 ತಿಂಗಳು ಎಂ.ಎಸ್.ಧೋನಿ ಪ್ಯಾರಾರೆಜಿಮೆಂಟ್ ಟೆರಿಟೋರಿಯಲ್ ಆರ್ಮಿ ವಿಭಾಗದಲ್ಲಿ ಧೋನಿ ಸೇವೆ ಸಲ್ಲಿಸಲಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸದಿಂದ ಧೋನಿ ಹಿಂದೆ ಸರಿದಿದ್ದಾರೆ. ಧೋನಿ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಧೋನಿ ದೇಶ ಸೇವೆಯನ್ನು ಕೊಂಡಾಡಿದ್ದಾರೆ.