ಧೋನಿ ಭವಿಷ್ಯದ ಬಗ್ಗೆ ತುಟಿಬಿಚ್ಚಿದ ಆಯ್ಕೆ ಸಮಿತಿ ಮುಖ್ಯಸ್ಥ!
ಧೋನಿ ನಿವೃತ್ತಿ ಯಾವಾಗ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಇದೇ ಮೊದಲ ಬಾರಿಗೆ ಎಂ.ಎಸ್.ಕೆ ಪ್ರಸಾದ್ ತುಟಿ ಬಿಚ್ಚಿದ್ದಾರೆ. ಅಷ್ಟಕ್ಕೂ ಏನಂದ್ರು ನೀವೇ ನೋಡಿ...
ಮುಂಬೈ[ಜು.21]: ಬಹುನಿರೀಕ್ಷಿತ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ವಿಶ್ರಾಂತಿ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಧೋನಿ ಭವಿಷ್ಯದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಇದೇ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.
ವಿಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ಮೂರು ಕನ್ನಡಿಗರಿಗೆ ಸ್ಥಾನ
ಧೋನಿ ಪೋಷಕರೇ ಕೆಲ ದಿನಗಳ ಹಿಂದಷ್ಟೇ ತಮ್ಮ ಮಗ ನಿವೃತ್ತಿಯಾಗಲಿ ಎಂದು ಅಭಿಪ್ರಾಯಪಟ್ಟಿದ್ದರು. ಹೀಗಿರುವಾಗ ಧೋನಿ 2020ರ ಟಿ20 ವಿಶ್ವಕಪ್ ಆಡುತ್ತಾರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪ್ರಸಾದ್, ಧೋನಿ ನಿವೃತ್ತಿಯ ನಿರ್ಧಾರ ತೆಗೆದುಕೊಳ್ಳಲು ಅವರು ಸಂಪೂರ್ಣ ಸ್ವತಂತ್ರರು ಎಂದಿದ್ದಾರೆ.
ಟೀಂ ಇಂಡಿಯಾ ನಂ.4 ಸಮಸ್ಯೆಗೆ ಪರಿಹಾರ ನೀಡಿದ ಮಂಜ್ರೇಕರ್ ಟ್ರೋಲ್!
’ಧೋನಿಗೆ ತಾವು ಯಾವಾಗ ನಿವೃತ್ತಿ ಪಡೆಯಬೇಕು ಎಂದು ಗೊತ್ತಿದೆ. ಧೋನಿಯಂತಹ ದಿಗ್ಗಜ ಕ್ರಿಕೆಟಿಗ ತಮಗೆ ಬೇಕಾದಾಗ ನಿವೃತ್ತಿ ನಿರ್ಧಾರ ಪಡೆಯಲು ಸ್ವತಂತ್ರರು’ ಎಂದು ಎಂ.ಎಸ್.ಕೆ ಪ್ರಸಾದ್ ಹೇಳಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ್ದಕ್ಕೆ ಧೋನಿ ವಿರುದ್ಧ ವ್ಯಾಪಕ ಟೀಕೆ ಕೇಳಿ ಬಂದಿದ್ದವು. ಭಾರತ ವಿಶ್ವಕಪ್ ಟೂರ್ನಿಯ ಸೆಮಿಫೈನಲ್’ನಲ್ಲೇ ಹೊರಬೀಳುತ್ತಿದ್ದಂತೆ, ಧೋನಿ ನಿವೃತ್ತಿ ಪಡೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಎಂ.ಎಸ್.ಕೆ ಪ್ರಸಾದ್ ಹೇಳಿಕೆ ಗಮನಿಸಿದರೆ ಧೋನಿ ನಿವೃತ್ತಿ ಸದ್ಯಕ್ಕಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.