Asianet Suvarna News Asianet Suvarna News

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನಿಗೆ ಜೀವ ಬೆದರಿಕೆ..?

ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನಾ ಜಹಾನ್ ನಡುವಿಕ ಕೌಟುಂಬಿಕ ಜಗಳ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಪತ್ನಿ ಕಡೆಯಿಂದ ಜೀವಬೆದರಿಕೆ ಕರೆಗಳು ಬರುತ್ತಿದ್ದು ನನಗೆ ವಿಶೇಷ ಭದ್ರತೆಯ ಅವಶ್ಯಕತೆಯಿದ್ದು, ಗನ್’ಮ್ಯಾನ್ ನೀಡಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕೆಲದಿನಗಳಿಂದಲೂ ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಮತ್ತೊಮ್ಮೆ ಭುಗಿಲೇಳುವಂತೆ ಮಾಡಿದೆ.

Mohammed Shami requests extra security after alleged death threats Says Report
Author
Lucknow, First Published Oct 1, 2018, 1:53 PM IST
  • Facebook
  • Twitter
  • Whatsapp

ಲಖ್ನೋ[ಅ.01]: ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ತಮಗೊಬ್ಬ ಗನ್’ಮ್ಯಾನ್ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆಂದು ರಾಷ್ಟ್ರೀಯ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಇದನ್ನು ಓದಿ: ಎರಡನೇ ವಿವಾಹಕ್ಕೆ ಹಸೀನಾಗೆ ಆಹ್ವಾನ..!

ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನಾ ಜಹಾನ್ ನಡುವಿಕ ಕೌಟುಂಬಿಕ ಜಗಳ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಪತ್ನಿ ಕಡೆಯಿಂದ ಜೀವಬೆದರಿಕೆ ಕರೆಗಳು ಬರುತ್ತಿದ್ದು ನನಗೆ ವಿಶೇಷ ಭದ್ರತೆಯ ಅವಶ್ಯಕತೆಯಿದ್ದು, ಗನ್’ಮ್ಯಾನ್ ನೀಡಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕೆಲದಿನಗಳಿಂದಲೂ ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಮತ್ತೊಮ್ಮೆ ಭುಗಿಲೇಳುವಂತೆ ಮಾಡಿದೆ.

ಇದನ್ನು ಓದಿ: ಶಮಿ ಟೆಸ್ಟ್ ಆಯ್ಕೆ ಬೆನ್ನಲ್ಲೇ ಕೋಲ್ಕತ್ತಾ ಪೊಲೀಸರಿಂದ ನೊಟಿಸ್

ಶಮಿಯಿಂದ ದೂರು ಉಳಿದಿರುವ ಹಸೀನಾ ಜಹಾನ್ ತಮ್ಮ ಹಾಗೂ ಮಗಳಾದ ಐರಾ ಜೀವನ ನಿರ್ವಹಣೆಗೆ ತಿಂಗಳಿಗೆ 10 ಲಕ್ಷ ನೀಡಬೇಕೆಂದು ಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಬಳಿಕ ಸಾಕಷ್ಟು ವಾದ-ವಿವಾದಗಳ ಬಳಿಕ ಶಮಿ ತಿಂಗಳಿಗೆ 80 ಸಾವಿರ ನೀಡಲು ಒಪ್ಪಿದ್ದಾರೆ.

ಇದನ್ನು ಒದಿ: ದಾಖಲೆ ಸಮೇತ ಶಮಿ ವಿರುದ್ಧ ಪತ್ನಿ ಆರೋಪ- ಸಂಕಷ್ಟದಲ್ಲಿ ಟೀಂ ಇಂಡಿಯಾ ವೇಗಿ

ಹಸೀನಾ ಜಹಾನ್ ಪತಿ ಶಮಿ ಮೇಲೆ ಮ್ಯಾಚ್ ಫಿಕ್ಸಿಂಗ್, ವಿವಾಹೇತರ ಸಂಬಂಧ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ಹತ್ತು-ಹಲವು ಆರೋಪಗಳನ್ನು ಮಾಡಿದ್ದರು. ಈ ವಿವಾದಗಳಿಂದ ಕೆಲಕಾಲ ಟೀಂ ಇಂಡಿಯಾದಿಂದಲೂ ಹೊರಗುಳಿಯಬೇಕಾಯಿತು.
 
Follow Us:
Download App:
  • android
  • ios