ಎರಡನೇ ವಿವಾಹಕ್ಕೆ ಹಸೀನಾಗೆ ಆಹ್ವಾನ..!

First Published 12, Jun 2018, 9:50 AM IST
Will Invite Her For Second Marriage Shami Laughs Off Wife's Allegation
Highlights

‘ಈದ್ ಮುಗಿಯುತ್ತಿದ್ದಂತೆ ಮತ್ತೊಂದು ಮದುವೆಯಾಗಲು ಶಮಿ ಸಿದ್ಧತೆ ನಡೆಸಿದ್ದರು. ಅಲ್ಲದೇ ಹಣದ ಆಮಿಷ ತೋರಿ ನನಗೆ ಡೈವೋರ್ಸ್ ನೀಡುವಂತೆ ಕೋರಿದ್ದರು’ ಎಂದು ಇತ್ತೀಚೆಗಷ್ಟೇ ಜಹಾನ್ ಆರೋಪಿಸಿದ್ದರು. 

ನವದೆಹಲಿ(ಜೂ.12]: ಟೀಂ ಇಂಡಿಯಾ ವೇಗಿ ಮೊಹಮದ್ ಶಮಿ ಹಾಗೂ ಅವರ ಪತ್ನಿ ಹಸೀನ್ ಜಹಾನ್ ನಡುವಿನ ರಂಪಾಟ ಮುಂದುವರಿದಿದ್ದು, 2ನೇ ಮದುವೆ ಕುರಿತು ಪತ್ನಿ ಮಾಡಿದ್ದ ಆರೋಪಕ್ಕೆ ಟೀಂ ಇಂಡಿಯಾ ವೇಗಿ ಹಾಸ್ಯದಾಟಿಯಲ್ಲೇ ಖಡಕ್ ಉತ್ತರ ನೀಡಿದ್ದಾರೆ. 

‘ಈದ್ ಮುಗಿಯುತ್ತಿದ್ದಂತೆ ಮತ್ತೊಂದು ಮದುವೆಯಾಗಲು ಶಮಿ ಸಿದ್ಧತೆ ನಡೆಸಿದ್ದರು. ಅಲ್ಲದೇ ಹಣದ ಆಮಿಷ ತೋರಿ ನನಗೆ ಡೈವೋರ್ಸ್ ನೀಡುವಂತೆ ಕೋರಿದ್ದರು’ ಎಂದು ಇತ್ತೀಚೆಗಷ್ಟೇ ಜಹಾನ್ ಆರೋಪಿಸಿದ್ದರು. ಇದಕ್ಕೆ ಹಾಸ್ಯದಾಟಿಯಲ್ಲಿ ಉತ್ತರಿಸಿರುವ ಶಮಿ, ‘ಈಗಾಗಲೇ ಒಂದು ಮದುವೆ ಮಾಡಿಕೊಂಡು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇನೆ. ಇದೀಗ ಮತ್ತೆ ಅದೇ ತಪ್ಪು ಮಾಡಲು ನನಗೇನು ಹುಚ್ಚು ಹಿಡಿದಿದೆಯೇ?’ ಎಂದಿದ್ದಾರೆ. 

ಇದನ್ನ ಓದಿ: ಪ್ರತಿ ತಿಂಗಳು 10 ಲಕ್ಷ ಬೇಡಿಕೆಯಿಟ್ಟ ಶಮಿ ಪತ್ನಿ

‘ಕಳೆದ ಕೆಲ ತಿಂಗಳಿಂದ ಹಸೀನ್ ನನ್ನ ಮೇಲೆ ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಹೇಳಿದಂತೆ ನಾನೇದರೂ 2ನೇ ಮದುವೆಯಾದರೆ, ಅವರಿಗೂ ಆಹ್ವಾನ ನೀಡುತ್ತೇನೆ’ ಎಂದು ಶಮಿ ತಮಾಷೆ ಮಾಡಿದ್ದಾರೆ.

loader