ಶಮಿ ಟೆಸ್ಟ್ ಆಯ್ಕೆ ಬೆನ್ನಲ್ಲೇ ಕೋಲ್ಕತ್ತಾ ಪೊಲೀಸರಿಂದ ನೊಟಿಸ್

First Published 18, Jul 2018, 8:52 PM IST
Mohammed Shami summoned by Kolkata Police
Highlights

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ , ತಮ್ಮ ಪತ್ನಿ ನಡುವಿನ ಜಟಾಪಟಿ, ಮಾನಿಸಿಕ ತೊಳಲಾಟ, ಇಂಜುರಿ ಸಮಸ್ಯೆಗಳನ್ನ ಎದುರಿಸಿ ಇದೀಗ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಆದರೆ ಇನ್ನೇನು ಎಲ್ಲವೂ ಮುಗಿಯಿತು ಅನ್ನುವಷ್ಟರಲ್ಲೇ ಮೊಹಮ್ಮದ್ ಶಮಿಗೆ ಕೊಲ್ಕತ್ತಾ ಪೊಲೀಸರು ನೊಟಿಸ್ ನೀಡಿದ್ದಾರೆ. ಅಷ್ಟಕ್ಕೂ ಈ ನೊಟಿಸ್‌ನಲ್ಲಿ ಏನಿದೆ?

ಕೋಲ್ಕತ್ತಾ(ಜು.18): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ವೇಗಿ ಮೊಹಮ್ಮದ್ ಶಮಿ ಆಯ್ಕೆಯಾಗೋ ಮೂಲಕ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕಮ್‌ಬ್ಯಾಕ್ ಮಾಡಿದರು. ಆದರೆ ಶಮಿ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ಕಾರಣ ಮೊಹಮ್ಮದ್ ಶಮಿಗೆ ಇದೀಗ ಕೊಲ್ಕತ್ತಾ ಪೊಲೀಸರು ಸಮನ್ಸ್ ನೀಡಿದ್ದಾರೆ.

ಪತ್ನಿ ಹಸಿನ್ ಜಹಾನ್ ಹಾಗೂ ಶಮಿ ನಡುವಿನ ಜಟಾಪಟಿ ತಾರಕಕ್ಕೇರಿದೆ. ಮಾನಸಿಕ ಹಾಗೂ ದೈಹಿಕ ಹಿಂಸೆ, ಪತಿ ಬೇರೆ ಯುವತಿ ಜೊತೆ ರಹಸ್ಯ ಮದುವೆ ಸೇರಿದಂತೆ ಶಮಿ ವಿರುದ್ಧ ಪತ್ನಿ ಹಲವು ಆರೋಪ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರುಕೂಡ ದಾಖಲಿಸಿದ್ದಾರೆ. ಇದೀಗ ಕಾನೂನು ಹೋರಾಟ ನಡೆಸುತ್ತಿರುವ ಪತ್ನಿ ಹಸಿನ್ ಜಹಾನ್ ಪಟ್ಟು ಬಿಗಿಗೊಳಿಸಿದ್ದಾರೆ.

ತನ್ನ ಜೀವನಾಂಶಕ್ಕೆ ಮಾಸಿಕ 10 ಲಕ್ಷ ರೂಪಾಯಿ ನೀಡುವಂತೆ ಹಸಿನ್ ಜಹಾನ್ ವಕೀಲರು ವಾದಿಸಿದ್ದರು. ಬಳಿಕ ಮಾಸಿಕ 1 ಲಕ್ಷ ರೂಪಾಯಿ ಒಪ್ಪಂದಕ್ಕೆ ಒಪ್ಪಿದ್ದರು. ಈ ಪ್ರಕಾರ ಶಮಿ 1 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ. ಇದೀಗ ಈ ಚೆಕ್ ಬೌನ್ಸ್ ಆಗಿದ್ದು, ಕೋಲ್ಕತ್ತಾ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೊಟಿಸ್ ನೀಡಿದ್ದಾರೆ ಎಂದು ಮೊಜೋ ನ್ಯೂಸ್ ವರದಿ ಮಾಡಿದೆ.

ಇಂಗ್ಲೆಂಡ್ ವಿರುದ್ಧದ ಆರಂಭಿಕ 3 ಟೆಸ್ಟ್ ಪಂದ್ಯಕ್ಕೆ ವೇಗಿ ಮೊಹಮ್ಮದ್ ಶಮಿ ಆಯ್ಕೆಯಾಗಿದ್ದಾರೆ. ಆಗಸ್ಟ್ 1 ರಂದು ಟೀಂ ಇಂಡಿಯಾ ಆಂಗ್ಲರ ವಿರುದ್ಧ ಟೆಸ್ಟ್ ಪಂದ್ಯ ಆಡಲಿದೆ.

loader