Sachin Tendulkar  

(Search results - 271)
 • Sachin Tendulkar

  Cricket5, Apr 2020, 8:09 PM IST

  ಸಚಿನ್ ತೆಂಡುಲ್ಕರ್ ಹೆಸರಿನಲ್ಲಿರುವ 5 ಅಪರೂಪದ ಬೌಲಿಂಗ್ ದಾಖಲೆಗಳಿವು..!

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ತಮ್ಮ 24 ವರ್ಷಗಳ ಸುದೀರ್ಘ ಕ್ರಿಕೆಟ್‌ ಜರ್ನಿಯಲ್ಲಿ ಮುಂಬೈಕರ್ ರನ್‌ಗಳ ರಾಶಿಯನ್ನೇ ಗುಡ್ಡೆ ಹಾಕಿದ್ದಾರೆ. ಈಗಲೂ ಸಚಿನ್ ಆಟವನ್ನು ಬ್ಯಾಟಿಂಗ್‌ನಿಂದಲೇ ನೆನಪಿಸಿಕೊಳ್ಳುವವರು ಹೆಚ್ಚು.
  ಆದರೆ ನೆನಪಿರಲಿ ಸಚಿನ್ ಬೌಲಿಂಗ್‌ನಲ್ಲೂ ಕಮಾಲ್ ಮಾಡಿದ್ದಾರೆ. ಬೌಲಿಂಗ್‌ನಲ್ಲಿ ಪಾರ್ಟ್ನರ್‌ಶಿಪ್‌ ಬ್ರೇಕರ್ ಆಗಿಯೂ ಟೀಂ ಇಂಡಿಯಾ ಪಾಲಿಗೆ ತೆಂಡುಲ್ಕರ್ ಆಪತ್ಬಾಂದವ ಆಗಿದ್ದು ಬಹುತೇಕ ಮಂದಿ ಮರೆತಿರಬಹುದು. ಕುತೂಹಲಕರ ಸಂಗತಿ ಎಂದರೆ ಏಕದಿನ ಕ್ರಿಕೆಟ್‌ನಲ್ಲಿ ಕೆಲ ಬೌಲಿಂಗ್ ದಿಗ್ಗಜರಾದ ಶೇನ್ ವಾರ್ನ್, ಕಪಿಲ್ ದೇವ್, ಜಹೀರ್ ಖಾನ್, ಇಮ್ರಾನ್ ಖಾನ್ ಅವರಿಗಿಂತ ಹೆಚ್ಚು ಬಾರಿ ಸಚಿನ್ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಬೌಲಿಂಗ್‌ನಲ್ಲಿ ಸಚಿನ್ ಹೆಸರಿನಲ್ಲಿರುವ 5 ಅಪರೂಪದ ದಾಖಲೆಗಳು ನಿಮ್ಮ ಮುಂದೆ.

 • undefined

  Cricket4, Apr 2020, 6:33 PM IST

  ವಾಸೀಂ ಜಾಫರ್ ಕನಸಿನ ಏಕದಿನ ತಂಡ ಪ್ರಕಟ, ಧೋನಿಗೆ ನಾಯಕ ಪಟ್ಟ.!

  ಭಾರತ ದೇಸಿ ಕ್ರಿಕೆಟ್ ಲೆಜೆಂಡ್ ವಾಸೀಂ ಜಾಫರ್ ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. ಇದೀಗ ತಮ್ಮ ಕನಸಿಕ ಸಾರ್ವಕಾಲಿಕ ಏಕದಿನ ತಂಡವನ್ನು ಪ್ರಕಟಿಸಿದ್ದು, ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವ ಪಟ್ಟ ಕಟ್ಟಿದ್ದಾರೆ.
  ವಾಸೀಂ ಜಾಫರ್ ಸಾರ್ವಕಾಲಿಕ ಏಕದಿನ ತಂಡದಲ್ಲಿ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಅಚ್ಚರಿಯ ರೀತಿಯಲ್ಲಿ ಜಾಫರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಟೆಸ್ಟ್‌ನಲ್ಲಿ ಜಾಫರ್‌ರೊಂದಿಗೆ ಇನಿಂಗ್ಸ್ ಆರಂಭಿಸುತ್ತಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್‌ಗೆ ಜಾಫರ್ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಆಸೀಸ್ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ 12ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ವಾಸೀಂ ಜಾಫರ್ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜೊತೆಗೂ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಸಭೆ

  Cricket4, Apr 2020, 10:21 AM IST

  ಲಾಕ್‌ಡೌನ್‌ ಮುಗಿದ ಮೇಲೂ ಕಟ್ಟುನಿಟ್ಟಿನ ಕ್ರಮಕ್ಕೆ ಸಚಿನ್‌ ಸಲಹೆ

  ಬೆಳಗ್ಗೆ 11 ಗಂಟೆಗೆ ಆರಂಭಗೊಂಡ ಸಂವಾದ 1 ಗಂಟೆಗೂ ಹೆಚ್ಚು ಕಾಲ ನಡೆಯಿತು. ಕೊರೋನಾ ಸೋಂಕು ತಡೆಯಲು ಸರ್ಕಾರ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಕ್ರೀಡಾಪಟುಗಳು ಸಲಹೆ ನೀಡಿದರು.

 • modi and Virat Kohli

  Cricket3, Apr 2020, 2:49 PM IST

  ಸಚಿನ್, ಕೊಹ್ಲಿ ಸೇರಿ 40 ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ!

  ನವದೆಹಲಿ(ಏ.03): ಕೊರೋನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಹೆಚ್ಚಿನ ಶ್ರಮ ವಹಿಸುತ್ತಿದೆ. ಇಂದು(ಏ.03) ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ಮತ್ತೊಂದು ಕರೆ ನೀಡುವ ಮೂಲಕ ಸಂಘಟಿತ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. ದೇಶದ ಜನತೆಗೆ ಸಂದೇಶ ನೀಡಿದ ಬಳಿಕ ಮೋದಿ, ನೇರವಾಗಿ ಭಾರತ ದಿಗ್ಗಜ ಹಾಗೂ ಪ್ರಮುಖ ಕ್ರೀಡಾಪಟುಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಪಿವಿ ಸಿಂಧು ಸೇರಿದಂತೆ 40 ಕ್ರೀಡಾಪಟುಗಳ ಜೊತೆ ಮೋದಿ ಚರ್ಚಿಸಿದ ವಿಷವೇನು? ಇಲ್ಲಿದೆ.

 • ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬೆನ್ನಲ್ಲೇ ಸರ್ಕಾರಕ್ಕೆ ಹಣ ದೇಣಿಗೆ ನೀಡಿದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್

  Cricket27, Mar 2020, 7:19 PM IST

  26 ವರ್ಷಗಳ ಹಿಂದೆ ಆರಂಭಿಕನಾಗಿ ಬಡ್ತಿ ಪಡೆದ ಸಚಿನ್, ಆಮೇಲೆ ನಿರ್ಮಾಣವಾಗಿದ್ದು ಇತಿಹಾಸ..!

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ ಸಾಮ್ರಾಟನಾಗಿ ಮೆರೆದಿದ್ದನ್ನು ನಾವು-ನೀವೆಲ್ಲ ಕಣ್ತುಂಬಿಕೊಂಡಿದ್ದೇವೆ. ಭಾರತದಲ್ಲಿ ಕ್ರಿಕೆಟ್‌ವೊಂದು ಧರ್ಮ ಎಂದಾದರೆ, ಸಚಿನ್ ಅದಕ್ಕೆ ದೇವರು ಎನ್ನುವ ಮಾತೊಂದಿದೆ. ಆದರೆ ಸಚಿನ್ ತೆಂಡುಲ್ಕರ್ ಬದುಕು ಬದಲಾಗಿದ್ದು ಆರಂಭಿಕನಾಗಿ ಬಡ್ತಿ ಪಡೆದ ಮೇಲೆ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ.
  ಮುಂಬೈಕರ್ ವೃತ್ತಿಬದುಕು ಆರಂಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದರು. ಆದರೆ 1994ರ ಮಾರ್ಚ್ 27 ರಂದು ನ್ಯೂಜಿಲೆಂಡ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿಯಲು ತೀರ್ಮಾನಿಸಿದರು. ಆ ಬಳಿಕ ಮಾಸ್ಟರ್ ಬ್ಲಾಸ್ಟರ್ ಹಿಂತಿರುಗಿ ನೋಡಲೇ ಇಲ್ಲ. ವಿಶ್ವಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಬೆಳೆದು ನಿಂತರು. ಸಚಿನ್ ತೆಂಡುಲ್ಕರ್ ಆರಂಭಿಕನಾಗಿದ್ದು ಹೇಗೆ ಎನ್ನುವ ಕುತೂಹಲಕಾರಿ ಸಂಗತಿ ಇಲ್ಲಿದೆ ನೋಡಿ...
   

 • undefined

  Cricket27, Mar 2020, 2:41 PM IST

  ಕೊರೋನಾ ವೈರಸ್ ವಿರುದ್ಧ ಹೋರಾಟ; ಸರ್ಕಾರಕ್ಕೆ 50 ಲಕ್ಷ ರೂ ನೀಡಿದ ಸಚಿನ್ ತೆಂಡುಲ್ಕರ್!

  ಮುಂಬೈ(ಮಾ.27); ಕೊರೋನಾ ವೈರಸ್ ತಡೆಯಲು ಭಾರತವನ್ನು 21 ದಿನಗಳ ವರೆಗೆ ಲಾಕ್‌ಡೌನ್ ಮಾಡಲಾಗಿದೆ. ಇದು ಸರ್ಕಾರದ ಬೊಕ್ಕಸ ಅತೀ ದೊಡ್ಡ ಹೊಡೆತವಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದೆ. ಕೊರೋನಾ ಸೋಂಕಿತರ ಚಿಕಿತ್ಸೆ, ವೈರಸ್ ಹರಡದಂತೆ ತಡೆಯಲು ಕ್ರಮ ಹಾಗೂ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ವಿಶೇಷ ಪ್ಯಾಕೇಜ್ ಸೇರಿದಂತೆ ಹಲವು ಕಾರ್ಯಗಳಿಗೆ ಕೋಟಿ ಕೋಟಿ ಹಣ ಖರ್ಚಾಗಲಿದೆ. ಇದೀಗ ಕೊರೋನಾ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಹಲವರು ಕೈಜೋಡಿಸಿದ್ದಾರೆ. ಪಿವಿ ಸಿಂಧು ಬೆನ್ನಲ್ಲೇ ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸಹಾಯ ಹಸ್ತ ಚಾಚಿದ್ದಾರೆ.

 • Sachin Tendulkar

  News22, Mar 2020, 8:00 PM IST

  ನಿಜವಾದ ಹೀರೋಗಳಿಗೆ ಚಪ್ಪಾಳೆಯ ಕೃತಜ್ಞತೆ ಸಲ್ಲಿಸಿದ ಸಚಿನ್ ತೆಂಡುಲ್ಕರ್!

  ಕೊರೋನಾ ವೈರಸ್ ವಿರುದ್ಧ ಹೋರಾಡಲು ಪ್ರಧಾನಿ ಮೋದಿಯ ಜನತಾ ಕರ್ಫ್ಯೂ ಯಶಸ್ವಿಯಾಗಿದೆ. ಇಷ್ಟೇ ಅಲ್ಲ ನಮ್ಮ ಸುರಕ್ಷತೆಗಾಗಿ ಶ್ರಮವಹಿಸುತ್ತಿರುವ ವೈದ್ಯರು,ಆಸ್ಪತ್ರೆಗಳ ಸಂಪೂರ್ಣ ಸಿಬ್ಬಂಧಿವರ್ಗಕ್ಕೆ ಚಪ್ಪಾಳೆಯ ಕೃತಜ್ಞತೆ ಕೂಡ ಸಲ್ಲಿಸಲಾಗಿದೆ. ಇಡೀ ದೇಶವೇ ಚಪ್ಪಾಳೆ ಮೂಲಕ ಅವಿರತ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕೂಡ ಚಪ್ಪಾಳೆ ತಟ್ಟಿದ್ದಾರೆ. ಇಷ್ಟೇ ಅಲ್ಲ ಜನತಗೆ ವಿಶೇಷ ಮನವಿ ಮಾಡಿದ್ದಾರೆ. 
   

 • Sourav Ganguly, PK Banerjee, Sachin Tendulkar

  Football21, Mar 2020, 11:09 AM IST

  ಭಾರತದ ದಿಗ್ಗಜ ಫುಟ್ಬಾಲಿಗ ಪಿ.ಕೆ.ಬ್ಯಾನರ್ಜಿ ಇನ್ನಿಲ್ಲ

  ಜೂ.23, 1936ರಂದು ಪಶ್ಚಿಮ ಬಂಗಾಳದ ಜಲ್ಪೈಗುರಿಯ ಮೊಯ್ನಾಗುರಿಯಲ್ಲಿ ಜನಿಸಿದ್ದ ಬ್ಯಾನರ್ಜಿ, ವಿಭಜನೆಗೂ ಮುನ್ನ ಕುಟುಂಬದೊಂದಿಗೆ ಜಮ್ಶೆಡ್‌ಪುರಕ್ಕೆ ಸ್ಥಳಾಂತರಗೊಂಡು ನೆಲೆಸಿದ್ದರು.
   

 • Sachin Tendulkar looks on during the Bushfire Cricket Bash T20 match between the Ponting XI and the Gilchrist XI at Junction Oval on February 09, 2020 in Melbourne, Australia. The match is being staged as part of 'The Big Appeal', raising funds for the Australian Bushfire Appeal.

  Fact Check20, Mar 2020, 10:01 AM IST

  Fact Check: ಮಾಂಸ​ದಂಗಡಿ ಮುಚ್ಚಲು ಕರೆ ಕೊಟ್ಟಸಚಿನ್‌ ತೆಂಡು​ಲ್ಕ​ರ್‌!

  ಕೊರೋನಾ ಸಾಂಕ್ರಾ​ಮಿಕ ರೋಗವು ಮಾಂಸಾ​ಹಾ​ರ​ದಿಂದ ಹರ​ಡು​ತ್ತದೆ. ಬರೀ ಶಾಲೆ, ಕಾಲೇಜು ಮಾಲ್‌​ಗ​ಳನ್ನು ಮಾತ್ರ ರದ್ದು ಮಾಡಿ​ದ್ದೇಕೆ? ಎಲ್ಲಾ ಮಾಂಸದಂಗ​ಡಿ​ಗ​ಳ​ನ್ನೂ ಬಂದ್‌ ಮಾಡಿ’ ಎಂದು ಕ್ರಿಕೆಟ್‌ ದೇ​ವರು ಎಂದೇ ಕರೆ​ಯ​ಲಾ​ಗುವ ಸಚಿನ್‌ ತೆಂಡು​ಲ್ಕರ್‌ ಕರೆ​ಕೊ​ಟ್ಟಿ​ದ್ದಾರೆ ಎನ್ನುವ ಸಂದೇಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹರಿ​ದಾ​ಡು​ತ್ತಿದೆ. ನಿಜನಾ ಈ ಸುದ್ದಿ? 

 • Sachin Tendulkar appreciates women participation in Delhi marathon

  Cricket19, Mar 2020, 11:49 AM IST

  ‘ಕೈತೊಳೆಯಿರಿ’ ಅಭಿಯಾನಕ್ಕೆ ಸಚಿನ್‌, ಸಿಂಧು ಬೆಂಬಲ

  ಕೊರೋನಾ ವೈರಸ್‌ ಹರಡುತ್ತಿರುವ ಹಿನ್ನಲೆಯಲ್ಲಿ ಶಿಚಿತ್ವ ಕಾಪಾಡಲು ಮನವಿ ಮಾಡಲಾಗುತ್ತಿದೆ. ಇದೀಗ ಸಚಿನ್ ತೆಂಡುಲ್ಕರ್ ಹಾಗೂ ಪಿವಿ ಸಿಂಧು ವಿಶೇಷ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. 

 • PM Modi you are not just the pride of Gujarat, you are living proof that with hard work & devotion, Indians can accomplish anything at all, anything they want. The Prime Minister is a moving story of an incredible rise.

  Cricket24, Feb 2020, 8:02 PM IST

  ಸಚಿನ್ ಹೆಸರು ಉಚ್ಚಾರಣೆಯಲ್ಲಿ ತಪ್ಪು; ಟ್ರಂಪ್ ಟೋಲ್ ಮಾಡಿದ ಐಸಿಸಿ

  ಭಾರತಕ್ಕೆ ಭೇಟಿ ನೀಡಿದ ಅಮೆರಿಕಾ ಅಧ್ಯಕ್ಷ ಅಹಮ್ಮದಾಬಾದ್‌ನ ಮೊಟೆರಾ ಕ್ರಿಕೆಟ್ ಕ್ರೀಡಾಂಗಣ ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ, ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಹಾಗೂ ವಿರಾಟ್ ಕೊಹ್ಲಿ ಹೆಸರು ಉಲ್ಲೇಖಿಸಿದ್ದರು. ಇದೀಗ ಐಸಿಸಿ ಟ್ರಂಪ್‌ರನ್ನು ಟೋಲ್ ಮಾಡಿದೆ.

 • sachin odi 200

  Cricket24, Feb 2020, 3:54 PM IST

  ಸಚಿನ್ ತೆಂಡುಲ್ಕರ್ ಸಾಧನೆಗೆ 10 ವರ್ಷ; ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ!

  ಕ್ರಿಕೆಟ್‌ನ ಬಹುತೇಕ ಎಲ್ಲಾ ದಾಖಲೆಗಳು ಆರಂಭವಾವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಿಂದ. ಏಕದಿನ ಕ್ರಿಕೆಟ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ದ್ವಿಶತಕ ಸಿಡಿಸಿದ ದಾಖಲೆಯೂ ಸಚಿನ್ ಹೆಸರಿಗಿದೆ.  ಸಚಿನ್ ಬಳಿಕ ಹಲವು ದ್ವಿಶತಕ ದಾಖಲಾಗಿದೆ. ಇದೀಗ  ಸಚಿನ್ ಸಾಧನೆಗೆ 10 ವರ್ಷದ ಸಂಭ್ರಮ. 
   

 • সচিনের ছবি

  Cricket23, Feb 2020, 7:50 PM IST

  ಪರೀಕ್ಷೆ ಎದುರಿಸುವ ವಿದ್ಯಾರ್ಥಿ ಹಾಗೂ ಪೋಷಕರಿಗೆ ಸಚಿನ್ ಸರಳ ಟಿಪ್ಸ್!

  ಕೆಲ ದಿನಗಳಲ್ಲೇ ಪರೀಕ್ಷೆ ಆರಂಭವಾಗಲಿದೆ. ಈಗಾಗಲೇ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದಾರೆ. ಪರೀಕ್ಷೆ ತಯಾರಾಗುತ್ತಿರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸರಳ ಟಿಪ್ಸ್ ನೀಡಿದ್ದಾರೆ.

 • undefined

  Cricket19, Feb 2020, 9:47 AM IST

  ಕ್ರೀಡಾ ಕ್ಷೇತ್ರದ 'ಆಸ್ಕರ್' ಲಾರೆಸ್ ಪ್ರಶಸ್ತಿ ಜಯಿಸಿದ ಸಚಿನ್ ತೆಂಡುಲ್ಕರ್..!

  20ನೇ ವರ್ಷದ ಲಾರಿಯಸ್‌ ಪ್ರಶಸ್ತಿ ಸಮಾರಂಭದಲ್ಲಿ ಆಸ್ಪ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಸ್ಟೀವ್‌ ವಾ ಅವರಿಂದ ಸಚಿನ್‌ ಪ್ರಶಸ್ತಿ ಸ್ವೀಕರಿಸಿದರು. ಆನ್‌ಲೈನ್‌ನಲ್ಲಿ ಅಭಿಮಾನಿಗಳಿಂದ ನಡೆದಿದ್ದ ಮತದಾನದಲ್ಲಿ ಸಚಿನ್‌ ಅತಿಹೆಚ್ಚು ಮತಗಳನ್ನು ಪಡೆದಿದ್ದರು.

 • sachin sehwag
  Video Icon

  Cricket16, Feb 2020, 3:31 PM IST

  ಸಚಿನ್ - ಸೆಹ್ವಾಗ್ ಆರಂಭಿಕರಾಗಿ ಕಣಕ್ಕೆ: ದಿಗ್ಗಜ ಕ್ರಿಕೆಟಿಗರಿಂದ ಮತ್ತೊಂದು ಸರಣಿ!

  ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರಕ್ಕಾಗಿ ಈಗಾಗಲೇ ದಿಗ್ಗಜ ಕ್ರಿಕೆಟಿಗರು ಸೇರಿ ಬುಶ್‌ಫೈರ್ ಕ್ರಿಕೆಟ್ ಪಂದ್ಯ ಆಡಿದ್ದಾರೆ. ಇದೀಗ ಮತ್ತೊಂದು ಟೂರ್ನಿ ಆಯೋಜನೆಗೊಂಡಿದೆ. ಈ ಟೂರ್ನಿಯಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಆರಂಭಿಕರಾಗಿ ಮತ್ತೆ ಕಣಕ್ಕಿಳಿಯುತ್ತಿದ್ದಾರೆ. ಈ ಟೂರ್ನಿಯಲ್ಲಿ ಆಡುತ್ತಿರುವ ಇತರ ದಿಗ್ಗಜ ಕ್ರಿಕೆಟಿಗರು, ಪಂದ್ಯ ಆರಂಭ ಕುರಿತ ಹೆಚ್ಚಿನ ವಿವರ ಇಲ್ಲಿದೆ ನೋಡಿ.