ಭಾರತ ತಂಡದ ಹಿರಿಯ ಕ್ರಿಕೆಟಿಗ ಮಾಧವ್ ಆಪ್ಟೆ ಸೋಮವಾರ ಹೃದಾಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆಪ್ಟೆ ನಿಧನಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಮುಂಬೈ(ಸೆ.24): ಭಾರತದ ಮಾಜಿ ಕ್ರಿಕೆಟಿಗ ಮಾಧವ್‌ ಆಪ್ಟೆ, ಹೃದಯಾ​ಘಾ​ತ​ದಿಂದ ಸೋಮವಾರ ಬೆಳಗ್ಗೆ ನಿಧನರಾದರು ಎಂದು ಅವರ ಕುಟುಂಬಸ್ಥರು ಖಚಿತ​ಪ​ಡಿ​ಸಿ​ದ್ದಾರೆ. ಅವ​ರಿಗೆ 86 ವರ್ಷ ವಯಸ್ಸಾಗಿತ್ತು. ಭಾರತ ತಂಡವನ್ನು ಪ್ರತಿನಿಧಿಸಿದ ಅತಿ ಹಿರಿಯ ಕ್ರಿಕೆಟಿಗನ ನಿಧನಕ್ಕೆ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ.

ಭಾರತ ಪರ 7 ಟೆಸ್ಟ್‌ ಪಂದ್ಯಗಳನ್ನಾಡಿದ್ದ ಮಾಧವ್‌, 542 ರನ್‌ ಗಳಿಸಿದ್ದರು. 4 ಅರ್ಧಶತಕ, 1 ಶತಕ ಗಳಿ​ಸಿ​ದ್ದರು. ಮುಂಬೈ ಪರ ಹಲವು ವರ್ಷ​ಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿದ್ದ ಅವರು 67 ಪಂದ್ಯ​ಗ​ಳಿಂದ 3336 ರನ್‌ ಕಲೆಹಾಕಿ​ದ್ದರು. ತಮ್ಮ 70ನೇ ವಯ​ಸ್ಸಿನ ವರೆಗೂ ಮುಂಬೈನ ಕಂಗಾ ಲೀಗ್‌ನಲ್ಲಿ ಅವರು ಆಡುತ್ತಿ​ದ್ದರು.

ಚೊಚ್ಚಲ ಟಿ20 ವಿಶ್ವಕಪ್ ಗೆದ್ದು 12 ವರ್ಷ, ಚಿಯರ್ಸ್ ಟೀಂ ಇಂಡಿಯಾ..!

ನವೆಂಬರ್ 1952ರಲ್ಲಿ ನಾಗ್ಪುರದಲ್ಲಿ ಪಾಕಿಸ್ತಾನ ವಿರುದ್ಧ ಮಾಧವ್‌ ಆಪ್ಟೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 1952-53ರಲ್ಲಿ ಪೋರ್ಟ್ ಆಫ್ ಸ್ಪೇನ್’ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 163 ರನ್ ಬಾರಿಸುವ ಮೂಲಕ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್ ಆಗಿದ್ದ ಮಾಧವ್‌ ಆಪ್ಟೆ, ಟೆಸ್ಟ್ ಸರಣಿಯೊಂದರಲ್ಲಿ 400+ ರನ್ ಬಾರಿಸಿದ ಮೊದಲ ಕ್ರಿಕೆಟಿಗ ಎನ್ನುವ ಗೌರವಕ್ಕೆ ಭಾಜನರಾಗಿದ್ದರು. 1953ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 460 ರನ್ ಬಾರಿಸಿದ್ದರು.

ಫೋಟೋ ಶೇರ್ ಮಾಡಿದ ಹಫೀಜ್; ಕೊಹ್ಲಿ ನಕಲು ಮಾಡಬೇಡಿ ಎಂದ ಫ್ಯಾನ್ಸ್

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಮೊಹಮ್ಮದ್ ಕೈಫ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…