KPL 2019: ಶಿವಮೊಗ್ಗ ಲಯನ್ಸ್ ಘರ್ಜನೆಗೆ ಮೈಸೂರ್ ಪಂಚರ್!
ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ಗೆಲವಿನ ನಾಗಾಲೋಟ ಮುಂದುವರಿದಿದೆ. ಮೊದಲಲ ಪಂದ್ಯದಲ್ಲಿ ನಿಹಾಲ್ ಉಲ್ಲಾಳ್ ಅಬ್ಬರಿಸಿದರೆ, 2ನೇ ಪಂದ್ಯದಲ್ಲಿ ಪವನ್ ದೇಶ್‌ಪಾಂಡೆ ಅಸರೆಯಾದರು. ಈ ಮೂಲಕ ಶಿವಮೊಗ್ಗ 14 ರನ್ ರೋಚಕ ಗೆಲುವು ಸಾಧಿಸಿದೆ.
ಬೆಂಗಳೂರು(ಆ.18): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯ 8ನೇ ಆವೃತ್ತಿಯಲ್ಲಿ ಶಿವಮೊಗ್ಗ ಲಯನ್ಸ್ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಮೊದಲ ಪಂದ್ಯದಲ್ಲಿ ಹುಬ್ಳಿ ಟೈಗರ್ಸ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದ್ದ ಶಿವಮೊಗ್ಗ, ಇದೀಗ ಮೈಸೂರ್ ವಾರಿಯರ್ಸ್ ವಿರುದ್ಧವೂ ಗೆಲವು ಸಾದಿಸಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಿಂಚಿದ ಶಿವಮೊಗ್ಗ ಲಯನ್ಸ್ ತಂಡ 14 ರನ್ ಅಂತರದಲ್ಲಿ ಗೆಲುವಿನ ಕೇಕೆ ಹಾಕಿತು.
ಇದನ್ನೂ ಓದಿ: ಕೆಪಿಎಲ್ 2019: ಹುಬ್ಳಿಗೆ ಶಾಕ್ ಕೊಟ್ಟ ಶಿವಮೊಗ್ಗ ಲಯನ್ಸ್
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಲಯನ್ಸ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ದಿಟ್ಟ ಸವಾಲೊಡ್ಡಿತು. ಮೊದಲ ಪಂದ್ಯದ ಹೀರೋ ನಿಹಾಲ್ ಉಳ್ಳಾಲ್ ಕೇವಲ 28 ರನ್ ಗಳಿಸಿ ನಿರ್ಗಮಿಸಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಬಲ್ಲ ಅರ್ಜುನ್ ಹೊಯ್ಸಳ ಕೂಡ 28 ರನ್ ಗೆ ತೃಪ್ತಿಪಟ್ಟರು. 17 ಎಸೆತಗಳನ್ನು ಎದುರಿಸಿದ ಉಳ್ಳಾಲ್ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ದಿಟ್ಟ ಹೋರಾಟ ನೀಡಿದರೂ ಬೃಹತ್ ಮೊತ್ತ ಪೇರಿಸಲಿಲ್ಲ.
ಇದನ್ನೂ ಓದಿ: ಪ್ರತಿ ಸಿಕ್ಸರ್ - ಬೌಂಡರಿಗೆ ತಲಾ 100, 50 ಸಸಿ ಕೊಡುಗೆ!
ಶಿವಮೊಗ್ಗ ತಂಡ ಸವಾಲಿನ ಮೊತ್ತ ಗಳಿಸುವಲ್ಲಿ ಪವನ್ ದೇಶಪಾಂಡೆ ಆಕರ್ಷಕ ಅರ್ಧಶತಕ ಪ್ರಮುಖ ಪಾತ್ರ ವಹಿಸಿತು. 42 ಎಸೆತಗಳನ್ನೆದುರಿಸಿದ ದೇಶಪಾಂಡೆ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಮೂಲ್ಯ 53 ರನ್ ಗಳಿಸಿ ಪ್ರಸಕ್ತ ಕೆಪಿಎಲ್ ನಲ್ಲಿ ವೈಯಕ್ತಿಕ ಮೊದಲ ಅರ್ಧ ಶತಕ ದಾಖಲಿಸಿದರು. ಶಿವಮೊಗ್ಗ ತಂಡದ ಇತರ ಬ್ಯಾಟ್ಸಮನ್ ಗಳು ಬಹುಬೇಗನೆ ವಿಕೆಟ್ ಒಪ್ಪಿಸಿದರು. ಹೀಗಾಗಿ 7 ವಿಕೆಟ್ ನಷ್ಟಕ್ಕೆ 166 ರನ್ ಸಿಡಿಸಿತು.
ಇದನ್ನೂ ಓದಿ: KPL ಉದ್ಘಾಟನಾ ಸಮಾರಂಭ; ಟೂರ್ನಿ ಕಳೆ ಹೆಚ್ಚಿಸಿದ ಚಂದನ್ ಶೆಟ್ಟಿ, ರಾಗಿಣಿ!
167 ರನ್ ಗಳ ಬೃಹತ್ ಮೊತ್ತವನ್ನು ಬೆನಟ್ಟಿದ ಮೈಸೂರು ವಾರಿಯರ್ಸ್ ಶಿವಮೊಗ್ಗದ ಸ್ಪಿನ್ ಹಾಗೂ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿತು. 152 ರನ್ ಗಾಳಿಸುವಷ್ಟರಲ್ಲಿ ಮೈಸೂರ್ ವಾರಿಯರ್ಸ್ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಕೆ. ವಿ. ಸಿದ್ದಾರ್ಥ್ 77 ರನ್ ಗಳಿಸಿ ದಿಟ್ಟ ಹೋರಾಟ ನೀಡಿದರೂ ತಂಡವನ್ನು ಸೋಲಿನಿದಿಂದ ಪಾರು ಮಾಡಲಾಗಲಿಲ್ಲ. ಶಿವಮೊಗ್ಗ ಲಯನ್ಸ್ ಪರ ಟಿ. ಪ್ರದೀಪ್ ಹಾಗೂ ಎಚ್. ಎಸ್, ಶರತ್ ತಲಾ 3 ವಿಕೆಟ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕ ಅಭಿಮನ್ಯು ಮಿಥುನ್, ಹಾಗೂ ಎಸ್. ಪಿ ಮನುನಾಥ್ ತಲಾ ಎರಡು ವಿಕೆಟ್ ಗಳಿಸಿ ಜಯದ ಹಾದಿಯನ್ನು ಸುಗಮಗೊಳಿಸಿದರು. 19.2 ಓವರ್‌ಗಲ್ಲಿ ಶಿವಮೊಗ್ಗ್ 152 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಶಿವಮೊಗ್ಗ 14 ರನ್ ಗೆಲುವು ಸಾಧಿಸಿತು.