ಕೆಪಿಎಲ್ 2019: ಹುಬ್ಳಿಗೆ ಶಾಕ್ ಕೊಟ್ಟ ಶಿವಮೊಗ್ಗ ಲಯನ್ಸ್
8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ತಂಡ ಗೆಲುವಿನೊಂದಿಗೆ ಶುಭರಂಭ ಮಾಡಿದೆ. ನಿಹಾಲ್ ಅಜೇಯ ಅರ್ಧಶತಕ ಹುಬ್ಳಿ ಟೈಗರ್ಸ್ ಗೆಲುವನ್ನು ಕಸಿದುಕೊಂಡಿತು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಆ.17]: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಿಹಾಲ್ ಉಲ್ಲಾಳ್[88*] ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಶಿವಮೊಗ್ಗ ಲಯನ್ಸ್ 6 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ 8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಭಿಮನ್ಯು ಮಿಥುನ್ ಬಳಗ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
KPL ವೇಳಾಪಟ್ಟಿ:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಳಿ ಟೈಗರ್ಸ್ ಕೆ.ಬಿ ಪವನ್[53], ಕೆ.ಎಲ್ ಶಿರ್ಜಿತ್[33] ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಶಿವಮೊಗ್ಗ ಪರ ಪ್ರದೀಪ್ ಟಿ, ರಿಷಭ್ ಸಿಂಗ್ ತಲಾ 3 ವಿಕೆಟ್, ಎಚ್.ಎಸ್ ಶರತ್ 2 ಹಾಗೂ ನಾಯಕ ಅಭಿಮನ್ಯು ಮಿಥುನ್, ಪೃಥ್ವಿರಾಜ್ ಶೇಖಾವತ್ ತಲಾ ಒಂದೊಂದು ವಿಕೆಟ್ ಪಡೆಯುವ ಮೂಲಕ ಹುಬ್ಳಿಯನ್ನು ಕೇವಲ 154 ರನ್’ಗಳಿಗೆ ಆಲೌಟ್ ಮಾಡುವಲ್ಲಿ ಶಿವಮೊಗ್ಗ ಯಶಸ್ವಿಯಾಯಿತು.
ಪ್ರತಿ ಸಿಕ್ಸರ್ - ಬೌಂಡರಿಗೆ ತಲಾ 100, 50 ಸಸಿ ಕೊಡುಗೆ!
ಸವಾಲಿನ ಗುರಿ ಬೆನ್ನತ್ತಿದ ಶಿವಮೊಗ್ಗ ಸ್ಫೋಟಕ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ ಅರ್ಜುನ್ ಹೊಯ್ಸಳ-ನಿಹಾಲ್ ಉಲ್ಲಾಳ್ 4.5 ಓವರ್;ಗಳಲ್ಲಿ 43 ರನ್ ಸಿಡಿಸಿಸುವ ಮೂಲಕ ಸ್ಫೋಟಕ ಆರಂಭ ಪಡೆಯಿತು. ಅರ್ಜುನ್ 13 ರನ್ ಬಾರಿಸಿ ಮಿತ್ರಕಾರ್’ಗೆ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ ಸುಜಿತ್ 1 ರನ್ ಗಳಿಸಿ ರನೌಟ್ ಆದರು. ಆದರೆ ಮೂರನೇ ವಿಕೆಟ್’ಗೆ ಜತೆಯಾದ ಉಲ್ಲಾಳ್-ಪವನ್ ದೇಶ್’ಪಾಂಡೆ ಜೋಡಿ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡ್ಯೊಯ್ದರು. ಎಚ್ಚರಿಕೆಯ ಆಟವಾಡಿದ ನಿಹಾಲ್ 60 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಮನಮೋಹಕ ಸಿಕ್ಸರ್ ನೆರವಿನಿಂದ ಅಜೇಯ 88 ರನ್ ಬಾರಿಸಿದರು. ಇವರಿಗೆ ದೇಶ್’ಪಾಂಡೆ, ಅಕ್ಷಯ್ ಬಲ್ಲಾಳ್ ತಲಾ 20 ರನ್ ಸಿಡಿಸುವ ಮೂಲಕ ಉತ್ತಮ ಸಾಥ್ ನೀಡಿದರು. ಕೊನೆಯಲ್ಲಿ ನಿದೀಶ್ ಭರ್ಜರಿ 2 ಬೌಂಡರಿ ಬಾರಿಸುವುದರೊಂದಿಗೆ ಇನ್ನೂ 2 ಓವರ್ ಬಾಕಿ ಇರುವಂತೆಯೇ ಶಿವಮೊಗ್ಗ ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್:
ಹುಬ್ಳಿ ಟೈಗರ್ಸ್: 154/10
ಕೆ.ಬಿ ಪವನ್: 53
ಶಿವಮೊಗ್ಗ ಲಯನ್ಸ್: 155/4
ನಿಹಾಲ್ ಉಲ್ಲಾಳ್: 88*