"

ಮೈಸೂರು(ಆ.30): ಕರ್ನಾಟಕ ಪ್ರೀಮಿಯರ್ ಲೀಗ್ 8ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್, ಶಿವಮೊಗ್ಗ ಲಯನ್ಸ್ ವಿರುದ್ಧ 20 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ 2ನೇ ಕ್ವಾಲಿಫೈಯರ್ ಹಂತಕ್ಕೇರಿದೆ. ಸೋತ ಶಿವಮೊಗ್ಗ ಹೊರಬಿದ್ದಿದೆ. 

KPL 2019: ಫೈನಲ್‌ಗೆ ಲಗ್ಗೆಯಿಟ್ಟ ಬಳ್ಳಾರಿ ಟಸ್ಕರ್ಸ್‌

ಶುಕ್ರವಾರ ನಡೆಯಲಿರುವ 2ನೇ ಕ್ವಾಲಿಫೈಯರ್‌ನಲ್ಲಿ ಹುಬ್ಬಳ್ಳಿ, ಬೆಳಗಾವಿ ವಿರುದ್ಧ ಸೆಣಸಲಿದೆ. ಇಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ನೀಡಿದ 191 ರನ್‌ಗಳ ಬೃಹತ್ ಸವಾಲನ್ನು ಬೆನ್ನತ್ತಿದ ಶಿವಮೊಗ್ಗ ಕೇವಲ 15 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಪವನ್ (38), ಮಿಥುನ್ (40) ಹೊರತಾಗಿಯೂ ಶಿವಮೊಗ್ಗ 19.3 ಓವರಲ್ಲಿ 170ಕ್ಕೆ ಆಲೌಟ್ ಆಯಿತು. ಇದಕ್ಕೂ ಮುನ್ನ ಹುಬ್ಬಳ್ಳಿ ವಿನಯ್ (55), ಕೆ.ಬಿ. ಪವನ್ (56) ರನ್ ನೆರವಿನಿಂದ 5 ವಿಕೆಟ್‌ಗೆ 190 ರನ್ ಗಳಿಸಿತು. 

ಬೆಂಗಳೂರು ಮಣಿಸಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟ ಹುಬ್ಳಿ ಟೈಗರ್ಸ್!

ಈಗಾಗಲೇ ಬಳ್ಳಾರಿ ಟಸ್ಕರ್ಸ್ ತಂಡವು ಫೈನಲ್ ಪ್ರವೇಶಿಸಿದ್ದು, ಆಗಸ್ಟ್ 31ರಂದು ಫೈನಲ್ ಪಂದ್ಯ ನಡೆಯಲಿದೆ. 

ಸ್ಕೋರ್: 
ಹುಬ್ಬಳ್ಳಿ 190/5
ಶಿವಮೊಗ್ಗ 170/10