Asianet Suvarna News Asianet Suvarna News

ಬೆಂಗಳೂರು ಮಣಿಸಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟ ಹುಬ್ಳಿ ಟೈಗರ್ಸ್!

ಹುಬ್ಳಿ ಟೈಗರ್ಸ್ ಘರ್ಜನೆಗೆ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡ ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಬ್ಲಾಸ್ಟರ್ಸ್ ವಿರುದ್ಧ ಅಬ್ಬರಿಸಿದ ಹುಬ್ಳಿ ಗೆಲುವಿನೊಂದಿಗೆ ಪ್ಲೇ ಆಫ್ ಪ್ರವೇಶಿಸಿದೆ. 

Hubli tigers beat bengaluru blasters and entered play off
Author
Bengaluru, First Published Aug 27, 2019, 8:38 PM IST
  • Facebook
  • Twitter
  • Whatsapp

ಮೈಸೂರು(ಆ.27): ನಾಯಕ ವಿನಯ್ ಕುಮಾರ್ ಅವರ ಜವಾಬ್ದಾರಿಯುತ ಅರ್ಧ ಶತಕ (81 ನಾಟೌಟ್) ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡ ರೋಚಕ ಗೆಲುವಿನೊಂದಿಗೆ ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿದೆ. ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 7 ವಿಕೆಟ್ ಗೆಲುವು ಸಾಧಿಸೋ ಮೂಲಕ ಹುಬ್ಳಿ, ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡವನ್ನು ಪ್ಲೇ ಆಫ್ ರೇಸ್‌ನಿಂದ ಹೊರದಬ್ಬಿತು.

ಇದನ್ನೂ ಓದಿ:  KPL ಟೂರ್ನಿಯ ವೇಳಾಪಟ್ಟಿ ಇಲ್ಲಿದೆ

159 ರನ್ ಟಾರ್ಗೆಟ್ ಪಡೆದ ಹುಬ್ಬಳ್ಳಿ ಟೈಗರ್ಸ್ ಇನ್ನೂ 14 ಎಸೆತ ಬಾಕಿ ಇರುವಾಗಲೇ ಜಯ ಸಾಧಿಸಿತು. ವಿನಯ್ ಹಾಗೂ ಮೊಹಮ್ಮದ್ ತಾಹ (48) 105 ರನ್ ಜತೆಯಾಟವಾಡಿ ಜಯದ ಹಾದಿಯನ್ನು ಸುಲಭಗೊಳಿಸಿದರು. ಗಾಯದ ಸಮಸ್ಯೆಯ ಕಾರಣ ವಿನಯ್ ಇಂದು ಬೌಲಿಂಗ್ ಮಾಡಿರಲಿಲ್ಲ, ಆದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ  ಭಡ್ತಿ ಪಡೆದು ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. 

ಇದನ್ನೂ ಓದಿ: ಪ್ರತಿ ಸಿಕ್ಸರ್‌ - ಬೌಂಡರಿಗೆ ತಲಾ 100, 50 ಸಸಿ ಕೊಡುಗೆ!

51 ಎಸೆತಗಳನ್ನೆದುರಿಸಿದ ವಿನಯ್ ಅವರ ಇನಿಂಗ್ಸ್ ನಲ್ಲಿ 13 ಬೌಂಡರಿ ಸೇರಿತ್ತು. ಮೊಹಮ್ಮದ್ ತಾಹ, 31 ಎಸೆತಗಳನ್ನೆದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 48 ರನ್ ಗಳಿಸಿ ಜಯಕ್ಕೆ ಅಗತ್ಯವಿರುವ ವೇದಿಕೆ ನಿರ್ಮಿಸಿದರು. ಪಂದ್ಯದ ಪ್ರಾಮಖ್ಯತೆಯನ್ನು ಅರಿತು ವಿನಯ್ ಕುಮಾರ್ ನಾಯಕನ ಜವಾಬ್ದಾರಿಯುತ ಆಟವಾಡಿ ತಂಡವನ್ನು ಪ್ಲೇ ಆಫ್ ಹಂತಕ್ಕೆ ಕೊಂಡೊಯ್ದರು.

ಬ್ಲಾಸ್ಟರ್ಸ್ ಸಾಧಾರಣ ಮೊತ್ತ
ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ಸಾಧಾರಣ ಮೊತ್ತಕ್ಕೆ ಕುಸಿಯಿತು.  ಭರತ್ ದ್ರುವಿ (42) ಹಾಗೂ ವಿ. ಕೌಶಿಕ್ (17ನಾಟೌಟ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ 158 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು.

Follow Us:
Download App:
  • android
  • ios