ಕ್ರಿಸ್ ಲಿನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ವಿರುದ್ಧ ಕೋಲ್ಕತ ನೈಟ್'ರೈಡರ್ಸ್ 191 ರನ್'ಗಳ ಸವಾಲಿನ ಮೊತ್ತ ಕಲೆಹಾಕಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೆಕೆಆರ್ ಆರಂಭದಲ್ಲೇ ಸುನಿಲ್ ನರೈನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಎರಡನೇ ವಿಕೆಟ್'ಗೆ ಕ್ರಿಸ್ ಲಿನ್ ಹಾಗೂ ರಾಬಿನ್ ಉತ್ತಪ್ಪ 72 ರನ್'ಗಳ ಭರ್ಜರಿ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಉತ್ತಪ್ಪ 23 ಎಸೆತಗಳಲ್ಲಿ 34 ರನ್ ಬಾರಿಸಿದರು. ನಿತಿಶ್ ರಾಣಾ ಆಟ ಕೇವಲ 3 ರನ್'ಗಳಿಗೆ ಸೀಮಿತವಾಯಿತು.

ಆ ಬಳಿಕ ನಾಯಕ ದಿನೇಶ್ ಕಾರ್ತಿಕ್ ಹಾಗೂ ಲಿನ್ ಮತ್ತೊಂದು ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150ರ ಸಮೀಪ ಕೊಂಡ್ಯೊಯ್ದರು. ಲಿನ್ ಕೇವಲ 41 ಎಸೆತಗಳಲ್ಲಿ 74 ರನ್ ಸಿಡಿಸಿದರೆ, ಕಾರ್ತಿಕ್ 28 ಎಸೆತಗಳಲ್ಲಿ 6 ಬೌಂಡರಿ ಸಹಿತ 43 ರನ್ ಸಿಡಿಸಿದರು. ಕೊನೆಯಲ್ಲಿ ರಸೆಲ್, ಗಿಲ್ ಬೇಗನೆ ಪೆವಿಲಿಯನ್ ಸೇರಿದ್ದರಿಂದ 200 ರನ್ ಬಾರಿಸಲು ಕೆಕೆಆರ್ ವಿಫಲವಾಯಿತು.

ಪಂಜಾಬ್ ಪರ ಬರೀಂದರ್ ಸರನ್ ಹಾಗೂ ಆಂಡ್ರೂ ಟೈ ತಲಾ 2 ವಿಕೆಟ್ ಪಡೆದರೆ, ಅಶ್ವಿನ್ ಹಾಗೂ ಮುಜೀಬ್ ರಹಮಾನ್ ತಲಾ ಒಂದೊಂದು ವಿಕೆಟ್ ಪಡೆದರು.