ಸೇಡು ತೀರಿಸಲು ಸಜ್ಜಾದ ಆರ್‌ಸಿಬಿ, ಹೈದರಾಬಾದ್ ವಿರುದ್ದ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ!

ಸತತ ಸೋಲಿನಿಂದ ಕಂಗೆಟ್ಟಿರುವ ಆರ್‌ಸಿಬಿ ಇದೀಗ ಮೈಕೊಡವಿ ನಿಂತಿದೆ. ಕಳೆದ ಹೋರಾಟದಲ್ಲಿ ಎಸ್‌ಆರ್‌ಹೆಚ್ ಸ್ಫೋಟಕ ಬ್ಯಾಟಿಂಗ್ ನೋವನ್ನು ಆರ್‌ಸಿಬಿ ಮರೆತಿಲ್ಲ. ಈ ಸೇಡು ತೀರಿಸಲು ಸಜ್ಜಾಗಿರುವ ಆರ್‌ಸಿಬಿ ಇದೀಗ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
 

IPL 2024 RCB wins toss and chose bat first against SRH in Hyderabad ckm

ಹೈದರಾಬಾದ್(ಏ.25)  ಐಪಿಎಲ್ 2024ರಲ್ಲಿ ಆರ್‌ಸಿಬಿಗೆ ಲಕ್ ಕೈಕೊಟ್ಟಿದೆ.ಗೆಲುವು ಸಿಗುತ್ತಿಲ್ಲ, ಸೋಲೇ ಗತಿಯಾಗಿದೆ. ಇದುವರಿಗಿನ ಎಲ್ಲಾ ಸೋಲು ಮರೆತು ಹೊಸ ಹುಮ್ಮಸ್ಸಿನಲ್ಲಿ ಆರ್‌ಸಿಬಿ ಅಖಾಡಕ್ಕಿಳಿದಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಬೃಹತ್ ಮೊತ್ತ ಹಾಗೂ ಭಾರಿ ಅಂತರದ ಗೆಲುವು ದಾಖಲಿಸಲು ಆರ್‌ಸಿಬಿ ತಯಾರಿಗಿದೆ. ಆರ್‌ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಹೈದರಾಬಾದ್ ತಂಡದಲ್ಲಿ ವಾಶಿಂಗ್ಟನ್ ಸುಂದರ್ ಬದಲು ಜಯದೇವ್ ಉನಾದ್ಕಟ್ ತಂಡ ಸೇರಿಕೊಂಡಿದ್ದಾರೆ. 

ಆರ್‌ಸಿಬಿ ಪ್ಲೇಯಿಂಗ್ 11
ವಿರಾಟ್ ಕೊಹ್ಲಿ, ಪಾಫ್ ಡುಪ್ಲೆಸಿಸ್(ನಾಯಕ), ರಜತ್ ಪಾಟಿದಾರ್, ಕ್ಯಾಮರೂನ್ ಗ್ರೀನ್, ವಿಲ್ ಜ್ಯಾಕ್ಸ್, ದಿನೇಶ್ ಕಾರ್ತಿಕ್, ಮಹೀಪಾಲ್ ಲೊಮ್ರೊರ್, ಕರನ್ ಶರ್ಮಾ, ಲ್ಯೂಕಿ ಫರ್ಗ್ಯೂಸನ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್

ಸಾರಾ ತೆಂಡೂಲ್ಕರ್‌ ಜೊತೆ ಬ್ರೇಕಪ್‌? ಶುಬ್ಮನ್‌ ಗಿಲ್‌ಗೆ ಹೊಸ ಗರ್ಲ್‌ಫ್ರೆಂಡ್‌?
 
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ, ಆ್ಯಡಿನ್ ಮರ್ಕ್ರಮ್, ಹೆನ್ರಿಚ್ ಕ್ಲಾಸೆನ್, ನಿತೀಶ್ ರೆಡ್ಡಿ, ಅಬ್ದುಲ್ ಸಮಾದ್, ಶಹಬಾದ್ ಅಹಮ್ಮದ್, ಪ್ಯಾಟ್ ಕಮಿನ್ಸ್(ನಾಯಕ) ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕಟ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್ 

ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಹಾಗೂ ಹೈದರಾಬಾದ್ ನಡುವಿನ ಪಂದ್ಯ ತವರಿನ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿತ್ತು. ಕಾರಣ ಹೈದಾರಾಬಾದ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಆರ್‌ಸಿಬಿ ಬೆಚ್ಚಿ ಬಿದ್ದಿತ್ತು. ಹೈದರಾಬಾಗ್ 287 ರನ್ ಸಿಡಿಸಿತ್ತು. ಆರ್‌ಸಿಬಿ ಕೂಡ ದಿಟ್ಟ ಹೋರಾಟ ನಡೆಸಿತ್ತು. 262 ರನ್ ಸಿಡಿಸಿ ಸೋಲು ಕಂಡಿತ್ತು. ಇದೀಗ ಈ ಬೃಹತ್ ಮೊತ್ತ ಹಾಗೂ ಸೋಲಿಗೆ ತಿರುಗೇಟು ನೀಡಲು ಆರ್‌ಸಿಬಿ ಸಜ್ಜಾಗಿದೆ.

ಅಂಕಪಟ್ಟಿ:
ಸನ್‌ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 7 ಪಂದ್ಯದಲ್ಲಿ 5 ಪಂದ್ಯಗೆದ್ದುಕೊಂಡಿದೆ. 10 ಅಂಕ ಸಂಪಾದಿಸಿರುವ ಹೈದರಾಬಾದ್ ಪ್ಲೇ ಆಫ್ ಹಾದಿಯಲ್ಲಿದೆ. ಆದರೆ ಆಡಿದ  8ರಲ್ಲಿ ಕೇವಲ 1 ಪಂದ್ಯಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಕೊನೆಯ ಹಾಗೂ 10ನ ಸ್ಥಾನದಲ್ಲಿದೆ. ಆರ್‌ಸಿಬಿ ಪ್ಲೇ ಆಫ್ ಹಾದಿ ಬಹುತೇಕ ಮುಚ್ಚಿದೆ.  ಇನ್ನುಳಿದ ಎಲ್ಲಾ ಪಂದ್ಯ ಗೆದ್ದು ಅದೃಷ್ಠದ ಜೊತೆ ಲೆಕ್ಕಾಚಾರ ಹಾಕಲು ಆರ್‌ಸಿಬಿ ಇದೀಗ ಸಜ್ಜಾಗಿದೆ. ಆದರೆ ಹಾದಿ ಸುಲಭವಿಲ್ಲ.

7 ಪಂದ್ಯ ಸೋತರೇನಂತೆ RCB ತಂಡಕ್ಕೆ ಈಗಲೂ ಇದೆ ಪ್ಲೇ ಆಫ್ ಅವಕಾಶ.! ಯಾವ ನೆಟ್‌ ರನ್‌ರೇಟ್ ಅಗತ್ಯವೂ ಇಲ್ಲ..!
 

Latest Videos
Follow Us:
Download App:
  • android
  • ios