Search results - 263 Results
  • Orange Cap Winners

    SPORTS23, Mar 2019, 2:02 PM IST

    IPL ಜೋಶ್: ಆರೆಂಜ್ ಕ್ಯಾಪ್ ಗೆದ್ದ ಸ್ಫೋಟಕ ಬ್ಯಾಟ್ಸ್’ಮನ್’ಗಳಿವರು

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಸ್ಫೋಟಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ 2 ಬಾರಿ ಆರೆಂಜ್ ಕ್ಯಾಪ್ ಗಳಿಸಿಕೊಂಡ ಏಕೈಕ ಬ್ಯಾಟ್ಸ್’ಮನ್ ಎನಿಸಿಕೊಂಡಿದ್ದರೆ, ಆರ್’ಸಿಬಿ ಹಾಲಿ ನಾಯಕ ವಿರಾಟ್ ಕೊಹ್ಲಿ 2016ರಲ್ಲಿ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದರು. ಆದರೆ ಈ ಆರೆಂಜ್ ಕ್ಯಾಪ್ ಆರ್’ಸಿಬಿ ಕಪ್ ಗೆಲ್ಲಿಸಿಕೊಡುವಲ್ಲಿ ನೆರವಾಗದಿರುವುದು ವಿಪರ್ಯಾಸ.

  • IPL Sixes

    SPORTS21, Mar 2019, 4:29 PM IST

    IPL 2019: ಗರಿಷ್ಠ ಸಿಕ್ಸರ್ ಸಿಡಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳಿವರು..!

    ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದು (292) ಇನ್ನು ಕೇವಲ 8 ಸಿಕ್ಸರ್ ಬಾರಿಸಿದರೆ ಐಪಿಎಲ್ ಟೂರ್ನಿಯಲ್ಲಿ 300 ಸಿಕ್ಸರ್ ಬಾರಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳದ್ದಾರೆ.

  • IPL 2019

    SPORTS21, Mar 2019, 11:53 AM IST

    ಮೇ 12ಕ್ಕೆ ಐಪಿಎಲ್‌ ಫೈನಲ್‌?

    ವೇಳೆ ಮೇ 7ರಿಂದ ಪ್ಲೇ-ಆಫ್‌ ಆರಂಭಗೊಳ್ಳಲಿದ್ದು, ಹೈದರಾಬಾದ್‌ನಲ್ಲಿ ಮೇ 7ರಂದು ಮೊದಲ ಕ್ವಾಲಿಫೈಯರ್‌, ಮೇ 8ರಂದು ಎಲಿಮಿನೇಟರ್‌ ಪಂದ್ಯ ನಡೆಯಲಿದೆ.

  • CRICKET23, Jul 2018, 2:08 PM IST

    ರಿಷಭ್ ಪಂತ್ ಗುಣಗಾನ ಮಾಡಿದ ’ದ ವಾಲ್’

    ಟೆಸ್ಟ್ ಟೀಂ ಇಂಡಿಯಾದ ವಿಕೆಟ್ ಕೀಪರ್ ವೃದ್ದಿಮಾನ್ ಸಾಹ ಅನುಪಸ್ಥಿತಿಯಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದರ ಜತೆಗೆ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಅವರಿಗೂ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. 

  • 9, Jun 2018, 6:56 PM IST

    2019ರ ಐಪಿಎಲ್’ನಲ್ಲಿ ಈ ಮೂವರು ಆರ್’ಸಿಬಿ ಆಟಗಾರರಿಗೆ ಗೇಟ್’ಪಾಸ್..?

    11 ಆವೃತ್ತಿ ಕಳೆದರೂ ಕಪ್ ಗೆಲ್ಲಲು ವಿಫಲವಾಗಿರುವ ಆರ್’ಸಿಬಿ ಮುಂಬರುವ ಐಪಿಎಲ್’ನಲ್ಲಿ ಕೆಲ ಬದಲಾವಣೆ ಮಾಡಿದರೆ ಅಚ್ಚರಿಯಿಲ್ಲ. ಈ ಬಾರಿಯ ಹರಾಜಿನಲ್ಲಿ ಮಾಡಿಕೊಂಡ ಎಡವಟ್ಟು, ಕನ್ನಡದ ಪ್ರತಿಭೆಗಳನ್ನು ಕಡೆಗಣಿಸಿದ್ದಕ್ಕೆ ಆರ್’ಸಿಬಿ ಬೆಲೆತೆತ್ತಿದೆ. 2019ನೇ ಸಾಲಿನ ಐಪಿಎಲ್’ನಲ್ಲಿ ಈ ಮೂವರು ಆಟಗಾರರು ಆರ್’ಸಿಬಿ ಪರ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನ

  • 5, Jun 2018, 5:37 PM IST

    IPL 2018: ಪ್ರತಿ ತಂಡದಲ್ಲೂ ಕೆಟ್ಟ ಪ್ರದರ್ಶನ ತೋರಿದ ಆಟಗಾರರಿವರು..!

    8 ತಂಡಗಳ ಕೆಲ ಆಟಗಾರರು ಏಕಾಂಗಿಯಾಗಿ ಹೋರಾಡಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟರೆ, ಇನ್ನು ಕೆಲ ಆಟಗಾರರು ಪದೇ ಪದೇ ವಿಫಲವಾಗುವ ಮೂಲಕ ಪ್ರಾಂಚೈಸಿಗಳು ತಮ್ಮ ಮೇಲಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸಿದರು. ಪ್ರತಿ ತಂಡದಲ್ಲೂ ಈ ಬಾರಿಯ ಐಪಿಎಲ್’ನಲ್ಲಿ ಕೆಟ್ಟ ಪ್ರದರ್ಶನ ತೋರಿದ ಆಟಗಾರರ ಪಟ್ಟಿ ನಿಮ್ಮ ಮುಂದೆ..

  • Video Icon

    31, May 2018, 6:05 PM IST

    ಐಪಿಎಲ್’ನಿಂದ ಬೆಳಕಿಗೆ ಬಂದ ತಾರೆಗಳಿವರು

    ಐಪಿಎಲ್ ನೀಡಿದ ಹೊಸ ತಾರೆಗಳು ಐಪಿಎಲ್ ಟಿ20 ಟೂರ್ನಿ ಕೇವಲ ಮನರಂಜನೆಯಾಗಿ ಉಳಿದಿಲ್ಲ. ಭಾರತೀಯ ಕ್ರಿಕೆಟ್‌ಗೆ ನಿರಂತರವಾಗಿ ಹೊಸ ಹೊಸ ಪ್ರತಿಭೆಗಳನ್ನು ಹುಡುಕಿ ಕೊಟ್ಟಿದೆ. ವಿಶ್ವದ ಶ್ರೇಷ್ಠ ಆಟಗಾರರೆಲ್ಲಾ ಒಂದೇ ಕಡೆ ಆಡುವುದರಿಂದ ಇಲ್ಲಿ ತೋರುವ ಪ್ರದರ್ಶನ ಆಟಗಾರರಿಗೆ ಬಹಳ ಬೇಗ ಹೆಸರು ತಂದುಕೊಡುತ್ತದೆ. ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಎಷ್ಟೋ ಉದಾಹರಣೆಗಳಿವೆ. ಆರ್.ಅಶ್ವಿನ್,ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಯಜುವೇಂದ್ರ ಚಹಲ್ ಸೇರಿ ಇನ್ನೂ ಅನೇಕರು ಭಾರತ ತಂಡಕ್ಕೆ ಆಯ್ಕೆಯಾಗಿದ್ದೇ ಐಪಿಎಲ್‌ನಲ್ಲಿ ಮಿಂಚಿ. ಈ ವರ್ಷ ಐಪಿಎಲ್‌ನಲ್ಲಿ ಮಿಂಚಿದ, ರಾಷ್ಟ್ರೀಯ ತಂಡದ ಕದ ತಟ್ಟುವ ಸಾಮರ್ಥ್ಯವಿರುವ ಅಗ್ರ 10 ಆಟಗಾರರ ವಿವರ ನಿಮ್ಮ ಮುಂದೆ..

  • 30, May 2018, 5:51 PM IST

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಟ್ರೋಫಿ ಕನಸು ದೂರವಿಲ್ಲ-ಕೆಎಲ್ ರಾಹುಲ್

    ಮುಂದಿನ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರಶಸ್ತಿ ಗೆಲ್ಲೋ ವಿಶ್ವಾಸ ವ್ಯಕ್ತಪಡಿಸಿದ ಕೆಎಲ್ ರಾಹುಲ್
     

  • 29, May 2018, 7:21 PM IST

    ಸಿಎಸ್’ಕೆ ಗೆಲುವಿನ ಸಂಭ್ರಮಕ್ಕೆ ರೈನಾ ಕೊಟ್ಟ ಹೆಸರೇನು ಗೊತ್ತಾ..?

    ಈ ಬಾರಿ ಧೋನಿಗಾಗಿ ಕಪ್ ಗೆಲ್ಲುತ್ತೇವೆ ಎಂಬ ಮಾತನ್ನು ಸಿಎಸ್’ಕೆ ಎಡಗೈ ಬ್ಯಾಟ್ಸ್’ಮನ್ ಸುರೇಶ್ ರೈನಾ ಉಳಿಸಿಕೊಂಡಿದ್ದಾರೆ. ಸಿಎಸ್’ಕೆ ತಂಡದಲ್ಲಿ ಸುರೇಶ್ ರೈನಾ ಸೇರಿದಂತೆ ಡ್ವೇನ್ ಬ್ರಾವೋ, ಶೇನ್ ವಾಟ್ಸನ್, ಸ್ಯಾಮ್ ಬಿಲ್ಲಿಂಗ್ಸ್, ಅಂಬಟಿ ರಾಯುಡು ಹಾಗೂ ಎಂ.ಎಸ್ ಧೋನಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 

  • Andrew Tye
    Video Icon

    29, May 2018, 6:38 PM IST

    ಐಪಿಎಲ್’ನಲ್ಲಿ ಗಮನ ಸೆಳೆದ ಟಾಪ್-5 ಬೌಲರ್’ಗಳಿವರು

    ಇಂಡಿಯನ್ ಪ್ರೀಮಿಯರ್ ಲೀಗ್ 11ನೇ ಆವೃತ್ತಿ ಮುಕ್ತಾಯಗೊಂಡಿದ್ದು, ಎಂ.ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್’ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಐಪಿಎಲ್’ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಟಾಪ್ 5 ಬೌಲರ್’ಗಳ ಪಟ್ಟಿ ನಿಮ್ಮ ಮುಂದೆ..

  • Kane Williamson
    Video Icon

    29, May 2018, 6:15 PM IST

    ಐಪಿಎಲ್’ನಲ್ಲಿ ಗಮನ ಸೆಳೆದ ಟಾಪ್-5 ಬ್ಯಾಟ್ಸ್’ಮನ್’ಗಳಿವರು

    ಇಂಡಿಯನ್ ಪ್ರೀಮಿಯರ್ ಲೀಗ್ 11ನೇ ಆವೃತ್ತಿ ಮುಕ್ತಾಯಗೊಂಡಿದ್ದು, ಚೆನ್ನೈ ಸೂಪರ್’ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಐಪಿಎಲ್’ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಟಾಪ್ 5 ಬ್ಯಾಟ್ಸ್’ಮನ್’ಗಳ ಪಟ್ಟಿ ನಿಮ್ಮ ಮುಂದೆ..

  • 28, May 2018, 9:00 PM IST

    ಧೋನಿ ಐಪಿಎಲ್ ಕಪ್ ಎತ್ತಿಹಿಡಿಯುವಾಗ ವೈರಲ್ ಆದ ಕ್ಷಣವಿದು..!

    ಇಡೀ ತಂಡ ಪೋಟೋ ತೆಗೆಸಿಕೊಳ್ಳುವಾಗ 4 ವರ್ಷದ ಝೀವಾ ಅಪ್ಪನ ಬಳಿ ಓಡಿ ಬರುತ್ತಾಳೆ. ಮಗಳನ್ನು ಕಂಡ ಧೋನಿ ಎತ್ತಿಕೊಂಡು ಫೋಟೊಗೆ ಫೋಸ್ ಕೊಡುತ್ತಾರೆ. ಈ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...

  • 28, May 2018, 7:02 PM IST

    ಸಿಎಸ್’ಕೆ ಚಾಂಪಿಯನ್ಸ್: ಧೋನಿ ಹುಡುಗರು ಗೆಲುವಿನ ಸಂಭ್ರಮವನ್ನು ಆಚರಿಸಿದ್ದು ಹೀಗೆ

    2 ವರ್ಷಗಳ ನಿಷೇಧದ ಬಳಿಕ ಐಪಿಎಲ್’ಗೆ ಕಮ್’ಬ್ಯಾಕ್ ಮಾಡಿದ ಸಿಎಸ್’ಕೆ ಆರಂಭದಿಂದಲೇ ಸಾಕಷ್ಟು ಟೀಕೆಗಳನ್ನು ಎದುರಿಸಿತು. ಇದೊಂದು ವೃದ್ದರ ತಂಡ ಎಂಬೆಲ್ಲ ಕಠಿಣ ಟೀಕೆಗಳ ಹೊರತಾಗಿಯೂ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಇಂದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸನ್’ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್’ಗಳಿಂದ ಮಣಿಸಿ ಪ್ರಶಸ್ತಿ ಎತ್ತಿ ಹಿಡಿಯಿತು. ಈ ಗೆಲುವಿನ ಖುಷಿಯನ್ನು ಸುರೇಶ್ ರೈನಾ, ಹರ್ಭಜನ್ ಸಿಂಗ್ ಡ್ವೇನ್ ಬ್ರಾವೊ ಸೇರಿದಂತೆ ಸಿಎಸ್’ಕೆ ಆಟಗಾರರು ಸಂಭ್ರಮಿಸಿದ್ದು ಹೀಗೆ...  

  • 28, May 2018, 5:11 PM IST

    ಕಳಪೆಯಾಟದ ಬಳಿಕ ಸರ್ಫರಾಜ್ ಖಾನ್ ಈಗ ಮಾಡುತ್ತಿರುವುದೇನು..?

    ಈ ಬಾರಿ ಸರ್ಫರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 7 ಪಂದ್ಯಗಳನ್ನಾಡಿ ಕೇವಲ 51 ರನ್‌ಗಳಿಸಿ ನಿರಾಸೆ ಮೂಡಿಸಿದ್ದಾರೆ. ಸನ್’ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ 8 ಎಸೆತಗಳಲ್ಲಿ 22 ರನ್ ಬಾರಿಸಿದ್ದೇ ಸರ್ಫರಾಜ್ ಈ ಆವೃತ್ತಿಯ ಗರಿಷ್ಠ ವೈಯುಕ್ತಿಕ ಮೊತ್ತವೆನಿಸಿದೆ. 

  • 28, May 2018, 4:12 PM IST

    ಐಪಿಎಲ್’ನಲ್ಲಿ ನಿರಾಸೆ ಮೂಡಿಸಿದ ಟೀಂ ಇಂಡಿಯಾದ ಟಾಪ್ 5 ಕ್ರಿಕೆಟಿಗರಿವರು...!

    ಶ್ರೇಯಸ್ ಗೋಪಾಲ್, ಮಯಾಂಕ್ ಮಾರ್ಕಂಡೆ ಮುಂತಾದ ಕೆಲ ಕ್ರಿಕೆಟಿಗರು ನಿರೀಕ್ಷೆಗೂ ಮೀರಿ ಪ್ರದರ್ಶನ ತೋರುವ ಮೂಲಕ ಪ್ರಾಂಚೈಸಿಗಳ ವಿಶ್ವಾಸಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಆವೃತ್ತಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಈ ಐವರು ಆಟಗಾರರು ನೀರಸ ಪ್ರದರ್ಶನ ತೋರುವ ಮೂಲಕ ನಿರಾಸೆ ಮೂಡಿಸಿದರು. ದುಬಾರಿ ಮೊತ್ತಕ್ಕೆ ಹರಾಜಿಗಿದ್ದ ಒತ್ತಡಕ್ಕೂ ಏನೋ ಈ ಐವರು ಆಟಗಾರರು ಐಪಿಎಲ್ ಪ್ರಾಂಚೈಸಿಗಳ ನಿರೀಕ್ಷೆಗಳನ್ನು ಹುಸಿಗೊಳಿಸಿದರು.
    ಅಂತಹ ಐವರು ಆಟಗಾರರ ಪಟ್ಟಿ ನಿಮ್ಮ ಮುಂದೆ...