ನವ​ದೆ​ಹ​ಲಿ[ಸೆ.14]: ಮುಂದಿನ ವರ್ಷ ಭಾರತದಲ್ಲಿ ಫಿಫಾ ಅಂಡರ್‌-17 ಮಹಿಳಾ ಫುಟ್ಬಾಲ್‌ ವಿಶ್ವ​ಕಪ್‌ ನಡೆ​ಯ​ಲಿದ್ದು, ಶುಕ್ರ​ವಾರ ವೇಳಾ​ಪಟ್ಟಿ ಪ್ರಕಟಗೊಂಡಿತು. ನ.2ರಿಂದ 21ರ ವರೆ​ಗೂ ಟೂರ್ನಿ ನಡೆ​ಯ​ಲಿದೆ ಎಂದು ಫಿಫಾ ಘೋಷಿ​ಸಿತು. 

ಮಹಿಳಾ ಫಿಫಾ ವಿಶ್ವಕಪ್‌ಗೆ ಭಾರತ ಆತಿಥ್ಯ: 5 ನಗರಗಳಿಗೆ ಫಿಫಾ ನಿಯೋಗ ಭೇಟಿ

ದೇಶದ ನಾಲ್ಕು ನಗರಗಳಲ್ಲಿ ಪಂದ್ಯ​ಗಳು ನಡೆ​ಯ​ಲಿವೆ. ಭುವ​ನೇ​ಶ್ವರ ಆತಿ​ಥ್ಯ ವಹಿ​ಸು​ವುದು ಬಹು​ತೇಕ ಖಚಿತವಾಗಿದ್ದು, ಕೋಲ್ಕತಾ, ನವಿ ಮುಂಬೈ, ಗೋವಾ ಹಾಗೂ ಅಹಮ​ದಾ​ಬಾದ್‌ ನಗರಗಳ ನಡುವೆ ಸ್ಪರ್ಧೆ ಇದೆ. 

ಕತಾರ್ ಫಿಫಾ ವಿಶ್ವಕಪ್ 2022ರ ಲಾಂಛನ ಅನಾವರಣ!

ಕಳೆದ ವರ್ಷ ಮಾರ್ಚ್’ನಲ್ಲಿ ಭಾರ​ತಕ್ಕೆ ಟೂರ್ನಿ ಆತಿಥ್ಯ ಸಿಕ್ಕಿತ್ತು. 2017ರಲ್ಲಿ ಪುರು​ಷರ ಅಂಡರ್‌-17 ವಿಶ್ವ​ಕಪ್‌ಗೆ ಭಾರತ ಆತಿಥ್ಯ ವಹಿಸಿತ್ತು.