ಮುಂಬೈ[ಸೆ.12]: 2020ರ ಅಂಡರ್ 17 ಮಹಿಳಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ಭಾರತದಲ್ಲಿ ನಡೆಯಲಿದ್ದು, 5 ನಗರಗಳಿಗೆ ಫಿಫಾ ನಿಯೋಗ ಬುಧವಾರ ಭೇಟಿ ನೀಡಿದೆ. 

ಫಿಫಾ ವಿಶ್ವಕಪ್ ಕ್ವಾಲಿಫೈಯರ್: ಕತಾರ್ ವಿರುದ್ಧ ಡ್ರಾ ಸಾಧಿಸಿದ ಭಾರತ

ಭುವನೇಶ್ವರದ ಫುಟ್ಬಾಲ್ ಕ್ರೀಡಾಂಗಣ ಅಂತಿಮವಾಗಿದೆ. ಈಗಾಗಲೇ ಟೂರ್ನಿಯ ಆತಿಥ್ಯ ವಹಿಸಲು ಭುವನೇಶ್ವರ ಕ್ರೀಡಾಂಗಣವನ್ನು ಆಯ್ಕೆ ಮಾಡಲಾಗಿದೆ. ಇನ್ನೂ 3 ನಗರಗಳ ಅಗತ್ಯವಿದೆ. ಇದರಿಂದ ಫಿಫಾ ನಿಯೋಗ ಕೋಲ್ಕತಾ, ಅಹಮದಾಬಾದ್, ಗೋವಾ ಹಾಗೂ ಮುಂಬೈಗೆ ಭೇಟಿ ನೀಡಿದೆ. 

ಕತಾರ್ ಫಿಫಾ ವಿಶ್ವಕಪ್ 2022ರ ಲಾಂಛನ ಅನಾವರಣ!

‘ನಾವು ಕಳೆದ ತಿಂಗಳು ಭುವನೇಶ್ವರ ಕ್ರೀಡಾಂಗಣವನ್ನು ಅಂತಿಮಗೊಳಿಸಿದ್ದೆವು. 5 ನಗರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಇತರ ನಗರಗಳು ಟೂರ್ನಿ ಆತಿಥ್ಯಕ್ಕಾಗಿ ಆಸಕ್ತಿ ತೋರಿವೆ’ ಎಂದು ಟೂರ್ನಿ ನಿರ್ದೇಶಕಿ ರೋಮಾ ಖನ್ನಾ ತಿಳಿಸಿದರು.