ಖತಾರ್(ಸೆ.04): ವಿಶ್ವದ ಬಹುದೊಡ್ಡ ಕ್ರೀಡಾಹಬ್ಬ ಫಿಫಾ ವಿಶ್ವಕಪ್ ಟೂರ್ನಿ ಚಟುವಟಿಕೆಗಳು ಆರಂಭಗೊಂಡಿದೆ. ಇದರ ಮೊದಲ ಅಂಗವಾಗಿ 2022ರ ಕತಾರ್ ಫಿಫಾ ವಿಶ್ವಕಪ್ ಟೂರ್ನಿಯ ಲಾಂಛನ ಅನಾವರಣ ಮಾಡಲಾಗಿದೆ. ಫಿಫಾ ಹಾಗೂ ಕತಾರ್ ಆಯೋಜಕ ಸಮಿತಿ ನೂತನ ಲಾಂಛನ ಬಿಡುಗಡೆ ಮಾಡಿದೆ. ದೋಹಾದಲ್ಲಿ ನಡೆದ ಸಮಾರಂಭದಲ್ಲಿ ಲಾಂಛನ ಅನಾವರಣ ಮಾಡಲಾಗಿದೆ. 

ಇದನ್ನೂ ಓದಿ: ಅಂಡರ್ 17 ಫಿಫಾ ಮಹಿಳಾ ವಿಶ್ವಕಪ್ ಆತಿಥ್ಯ ಭಾರತದ ತೆಕ್ಕೆಗೆ

ಸಮಾರಂಭದಲ್ಲಿನ ಅತೀ ದೊಡ್ಡ 3ಡಿ ಸ್ಕ್ರೀನ್, ಕತಾರ್‌ನ ಪ್ರಮುಖ ಗಗನಚುಂಬಿ ಕಟ್ಟಗಳು, ಭಾರತ ಸೇರಿದಂತೆ ಫುಟ್ಬಾಲ್ ಪ್ರಿಯ 22 ರಾಷ್ಟ್ರಗಳಲ್ಲಿ ಲಾಂಚನ ಏಕಕಾಲದಲ್ಲಿ ಅನಾವರಣಗೊಂಡಿತು. ಲೋಗೋ  ವಿನ್ಯಾಸ, ಫಿಫಾ ವಿಶ್ವಕಪ್ ಫುಟ್ಬಾಲ್ ಟ್ರೋಫಿಯನ್ನು ಹೋಲುತ್ತಿದ್ದು ಎಲ್ಲರ ಗಮನಸೆಳೆದಿದೆ.

"

ಇದನ್ನೂ ಓದಿ: ಫಿಫಾ: 103ನೇ ಸ್ಥಾನಕ್ಕೆ ಕುಸಿದ ಭಾರತ ತಂಡ

2022ರ ಫಿಫಾ ವಿಶ್ವಕಪ್  ಟೂರ್ನಿಗೆ ಅರಬ್ ರಾಷ್ಟ್ರ ಕತಾರ್ ಆತಿಥ್ಯ ವಹಿಸಿದ್ದರೂ, ಲಾಂಛನ ಅನಾವರಣ ಬಿಡುಗಡೆಯನ್ನು ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೈಟ್ಸ್ ಹಾಗೂ ಈಜಿಪ್ಟ್‌‌ನಲ್ಲಿ ನಿರ್ಬಂಧಿಸಲಾಗಿತ್ತು. 2017ರಲ್ಲಿ ಕತಾರ್ ರಾಜತಾಂತ್ರಿಕ ಬಿಕ್ಕಟ್ಟಿನಿಂದ ಈ ಕ್ರಮ ಕೈಗೊಂಡಿತ್ತು. ಇನ್ನುಳಿದ ನಗರಗಳಾದ, ನ್ಯೂಯಾರ್ಕ್, ಸಾವೋ ಪೌಲೊ, ಸ್ಯಾಂಟಿಯಾಗೋ, ಮೆಕ್ಸಿಕೋ ಸಿಟಿ, ಜೋಹಾನ್ಸ್‌ಬರ್ಗ್,  ಲಂಡನ್,  ಪ್ಯಾರಿಸ್, ಬರ್ಲಿನ್, ಮಿಲನ್,  ಮ್ಯಾಡ್ರಿಡ್, ಮಾಸ್ಕೋ, ಮುಂಬೈ, ಸಿಯೋಲ್ ಸೇರಿದಂತೆ ಟರ್ಕಿಯ 10 ನಗರಗಳಲ್ಲಿ ಲೋಗೋ ಅನಾವರಣ ಮಾಡಲಾಯಿತು.