ಬೆಂಗಳೂರು(ಡಿ.27): ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪದಾರ್ಪಣೆ ಮಾಡಿದ ಮಯಾಂಕ್ ಅಗರ್ವಾಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದ್ದರು. ಇದೀಗ ಮಯಾಂಕ್ ಶುಭಾರಂಭಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ಮಯಾಂಕ್ ಅರ್ಧಶತಕ-ರಾಹುಲ್,ವಿಜಯ್‌ ಫುಲ್ ಟ್ರೋಲ್!

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮಯಾಂಕ್ ಅಗರ್ವಾಲ್ 76 ರನ್ ಸಿಡಿಸಿದ್ದರು. ಇದಕ್ಕೆ ಕಿಚ್ಚ ಸುದೀಪ್, ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ ನನ್ನ ನೆಚ್ಚಿನ ಕ್ರಿಕೆಟಿಗ ಮಯಾಂಕ್‌ಗೆ ಶುಭಾಶಯ. ಅತ್ಯುತ್ತಮ ಆರಂಭ, ಹೀಗೆ ಮುಂದುವರಿಯಲಿ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

 

ಇದನ್ನೂ ಓದಿ: ಮೆಲ್ಬರ್ನ್ ಟೆಸ್ಟ್: ಮಯಾಂಕ್ ಅಗರ್’ವಾಲ್ ಭರ್ಜರಿ ಅರ್ಧಶತಕ

ಮಯಾಂಕ್ ಅಗರ್ವಾಲ್ ಕಿಚ್ಚ ಸುದೀಪ್ ಆತ್ಮೀಯ ಗೆಳೆಯರಾಗಿದ್ದಾರೆ. ಕೆಪಿಎಲ್ ಟೂರ್ನಿಯಲ್ಲಿ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ ತಂಡ ವಿರುದ್ಧ ಮಯಾಂಕ್ ಆಡಿದ್ದಾರೆ. ಇಷ್ಟೇ ಅಲ್ಲ ಸಿನಿಮಾ ಕ್ರಿಕೆಟ್ ಲೀಗ್ ಟೂರ್ನಿ ವೇಳೆಯೂ ಮಯಾಂಕ್ ಹಾಗೂ ಸುದೀಪ್ ನೆಟ್ ಪ್ರಾಕ್ಟೀಸ್ ಮಾಡಿದ್ದಾರೆ.