ಮೆಲ್ಬರ್ನ್[ಡಿ.26]: ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿರುವ ಕನ್ನಡಿಗ ಮಯಾಂಕ್ ಅಗರ್’ವಾಲ್ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಮುನ್ನುಗ್ಗುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೆಲ್ಬರ್ನ್ ಟೆಸ್ಟ್’ನಲ್ಲಿ ಭಾರತ ಚಹಾ ವಿರಾಮದ ವೇಳೆಗೆ ಒಂದು ವಿಕೆಟ್ ನಷ್ಟಕ್ಕೆ 86 ರನ್ ಬಾರಿಸಿದ್ದು, ಮಯಾಂಕ್ 53 ಹಾಗೂ ಪೂಜಾರ 19 ರನ್ ಬಾರಿಸಿ ಕ್ರೀಸ್’ನಲ್ಲಿದ್ದಾರೆ.

ಇಂಡೋ-ಆಸಿಸ್ ಬಾಕ್ಸಿಂಗ್ ಡೇ ಟೆಸ್ಟ್- ಏನಿದರ ವಿಶೇಷತೆ?

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಪರ ಮಯಾಂಕ್ ಅಗರ್’ವಾಲ್ ಹಾಗೂ ಹನುಮ ವಿಹಾರಿ ಆರಂಭಿಕರಾಗಿ ಕಣಕ್ಕಿಳಿದರು. ಆರಂಭದಲ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾದ ಈ ಜೋಡಿ 19 ಓವರ್’ಗಳನ್ನು ಎದುರಿಸಿ 40 ರನ್ ಗಳಿಸಿತು. ಮಂದಗತಿಯ ಬ್ಯಾಟಿಂಗ್ ಪ್ರದರ್ಶಿಸಿದ ವಿಹಾರಿ 66 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಬಾರಿಸಿ ಪ್ಯಾಟ್ ಕಮ್ಮಿನ್ಸ್’ಗೆ ವಿಕೆಟ್ ಒಪ್ಪಿಸಿದರು. 

ಇಂಡೋ-ಆಸಿಸ್ ಟೆಸ್ಟ್: ಕನ್ನಡಿಗ ಮಯಾಂಕ್ ಕೋಚ್ ಜೊತೆ Exclusive 

ಈ ವೇಳೆ ಪೂಜಾರ ಅವರೊಂದಿಗೆ ಇನ್ನಿಂಗ್ಸ್ ಕಟ್ಟಿದ ಅಗರ್’ವಾಲ್ ಆತ್ಮವಿಶ್ವಾಸದಿಂದಲೇ ಆಸಿಸ್ ಬೌಲರ್’ಗಳನ್ನು ಎದುರಿಸಿದರು. ಕೆಟ್ಟ ಎಸೆತಗಳನ್ನು ಸಂಪೂರ್ಣವಾಗಿ ಬಳಸಿಕೊಂಡ ಅಗರ್’ವಾಲ್ 95 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ ಭಾರತದ 7ನೇ ಆರಂಭಿಕ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಮಯಾಂಕ್ ಅಗರ್’ವಾಲ್ ಪಾತ್ರರಾದರು. ಕನ್ನಡಿಗನಿಗೆ ಸೌರಾಷ್ಟ್ರದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪುಜಾರ ಉತ್ತಮ ಸಾಥ್ ನೀಡುತ್ತಿದ್ದಾರೆ.