ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದ ಮಯಾಂಕ್ ಅಗರ್ವಾಲ್, ಅನುಭವಿ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮುರಳಿ ವಿಜಯ್ ಸ್ಥಾನ ಕಸಿದುಕೊಂಡಿದ್ದಾರೆ. ಇದೀಗ ರಾಹಲ್ ಹಾಗೂ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.
ಮೆಲ್ಬರ್ನ್(ಡಿ.26): ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಪಾದಾರ್ಪಣಾ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಮಯಾಂಕ್ ಉತ್ತಮ ಆರಂಭದಿಂದ ಟೀಂ ಇಂಡಿಯಾ ಮೊದಲ ದಿನದಾಟದಲ್ಲಿ 215 ರನ್ ಸಿಡಿಸಿದೆ.
ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್: ಮಯಾಂಕ್ ಅಬ್ಬರ-ಮೇಲುಗೈ ಸಾಧಿಸಿದ ಭಾರತ!
ಮೊದಲ ಟೆಸ್ಟ್ ಪಂದ್ಯದಲ್ಲೇ ಮಯಾಂಕ್ 76 ರನ್ ಕಾಣಿಕೆ ನೀಡಿದ್ದಾರೆ. ಕಳಪೆ ಪ್ರದರ್ಶನದಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಕೆಎಲ್ ರಾಹುಲ್ ಹಾಗೂ ಮುರಳಿ ವಿಜಯ್ ಸ್ಥಾನ ಇದೀಗ ಮಯಾಂಕ್ ಪಾಲಾಗಿದೆ. ಮಯಾಂಕ್ ಹಾಫ್ ಸೆಂಚುರಿ ಸಿಡಿಸುತ್ತಿದ್ದಂತೆ, ಟ್ವಿಟರಿಗರು ರಾಹುಲ್ ಹಾಗೂ ಮುರಳಿ ವಿಜಯ್‌ರನ್ನ ಟ್ರೋಲ್ ಮಾಡಿದ್ದಾರೆ.
