Asianet Suvarna News Asianet Suvarna News

ಇಂದು ಮತ್ತೊಮ್ಮೆ ಇಂಡೋ-ಪಾಕ್ ಮುಖಾಮುಖಿ

ಅಜಯ್ ಠಾಕೂರ್ ನೇತೃತ್ವದ ಭಾರತ ತಂಡ, ಈಗಾಗಲೇ ಆಡಿರುವ 2 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ತನ್ನ 3ನೇ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ. 

Kabaddi Masters Dubai Dominant India eye semi-final berth as revitalised Pakistan loom

ದುಬೈ(ಜೂ.25]: ಏಷ್ಯನ್ ಗೇಮ್ಸ್‌ಗೆ ಭರ್ಜರಿ ತಯಾರಿ ನಡೆಸಿರುವ ಭಾರತ ಕಬಡ್ಡಿ ತಂಡ, ಸೋಮವಾರ ದುಬೈ ಮಾಸ್ಟರ್ಸ್‌ ಕಬಡ್ಡಿ ಟೂರ್ನಿಯಲ್ಲಿ ಸಾಂಪ್ರದಾಯಿಕ ವೈರಿ ಪಾಕಿಸ್ತಾನವನ್ನು ಮತ್ತೊಮ್ಮೆ ಎದುರಿಸಲಿದೆ. 

ಅಜಯ್ ಠಾಕೂರ್ ನೇತೃತ್ವದ ಭಾರತ ತಂಡ, ಈಗಾಗಲೇ ಆಡಿರುವ 2 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ತನ್ನ 3ನೇ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ. 
ದುಬೈ ಮಾಸ್ಟರ್ಸ್‌ ಕಬಡ್ಡಿ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಜಯ್ ಠಾಕೂರ್ ನೇತೃತ್ವದ ಭಾರತ ತಂಡ ಪಾಕಿಸ್ತಾನವನ್ನು 36-20 ಅಂಕಗಳಿಂದ ಮಣಿಸಿ ಶುಭಾರಂಭ ಮಾಡಿತ್ತು. ಆ ಬಳಿಕ ಕೀನ್ಯಾ ತಂಡವನ್ನು ಅನಾಯಾಸವಾಗಿ ಮಣಿಸಿ ಜಯದ ನಾಗಾಲೋಟ ಮುಂದುವರೆಸಿದೆ. ಇಂದು ಮತ್ತೆ ಪಾಕಿಸ್ತಾನದೆದುರು ಕಾದಾಡಲಿದೆ.

ಇದನ್ನು ಓದಿ: ಇಂಡೋ-ಪಾಕ್ ಕದನ: ಮಜಾ ಬಂತು ಎಂದ ಸೆಹ್ವಾಗ್...!

ಕೀನ್ಯಾ ವಿರುದ್ಧ ಭರ್ಜರಿ ಪ್ರದರ್ಶನ ತೋರಿದ್ದ ರಿಷಾಂಕ್ ದೇವಾಡಿಗ ಹಾಗೂ ಮೋನು ಗೋಯೆತ್ ಇಂದಿನ ಪಂದ್ಯದಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ. ರಾಹುಲ್ ಚೌಧರಿ ಹಾಗೂ ಪ್ರದೀಪ್ ನರ್ವಾಲ್ ಅವರಿಗೆ ಇಂದಿನ ಪಂದ್ಯಕ್ಕೆ ರೆಸ್ಟ್ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Follow Us:
Download App:
  • android
  • ios