ಪಾಕಿಸ್ತಾನದೆದುರು ಭಾರತ ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಮೆರೆಯಿತು. ರೈಡಿಂಗ್’ನಲ್ಲಿ ಭಾರತ 15 ಅಂಕ ಗಳಿಸಿದರೆ, ಪಾಕಿಸ್ತಾನ ಕಲೆಹಾಕಿದ್ದು ಕೇವಲ 9 ಅಂಕಗಳು ಮಾತ್ರ. ಟ್ಯಾಕಲ್’ನಲ್ಲಿ ಭಾರತ 12 ಅಂಕ ಪಡದರೆ, ಪಾಕ್ ಟ್ಯಾಕಲ್ ಮಾಡಿ ಗಳಿಸಿದ್ದು 8 ಅಂಕಗಳಷ್ಟೇ. ಇತರೆ ಅಂಕಗಳಲ್ಲಿ ಭಾರತ 5 ಅಂಕ ಪಡೆಯಿತು. ಒಟ್ಟನಲ್ಲಿ ಅಜಯ್ ಠಾಕೂರ್ ನೇತೃತ್ವದ ಟೀಂ ಇಂಡಿಯಾಗೆ ಪಾಕಿಸ್ತಾನ ಯಾವ ವಿಭಾಗದಲ್ಲೂ ಸವಾಲಾಗಲೇ ಇಲ್ಲ.

ದುಬೈ[ಜೂ.23]: ಚೊಚ್ಚಲ ಆವೃತ್ತಿಯ ‘ಕಬಡ್ಡಿ ಮಾಸ್ಟರ್ಸ್‌ ದುಬೈ 2018’ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 36-20 ಅಂಕಗಳಿಂದ ಮಣಿಸಿ ಶುಭಾರಂಭ ಮಾಡಿದೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಎಲ್ಲಾ ವಿಭಾಗಗಳಲ್ಲೂ ಪ್ರಾಬಲ್ಯ ಮೆರೆದ ಭಾರತ ತಂಡ ಸುಲಭವಾಗಿ ಗೆಲುವಿನ ನಗೆ ಬೀರಿದೆ.

ಪಾಕಿಸ್ತಾನದೆದುರು ಭಾರತ ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಮೆರೆಯಿತು. ರೈಡಿಂಗ್’ನಲ್ಲಿ ಭಾರತ 15 ಅಂಕ ಗಳಿಸಿದರೆ, ಪಾಕಿಸ್ತಾನ ಕಲೆಹಾಕಿದ್ದು ಕೇವಲ 9 ಅಂಕಗಳು ಮಾತ್ರ. ಟ್ಯಾಕಲ್’ನಲ್ಲಿ ಭಾರತ 12 ಅಂಕ ಪಡದರೆ, ಪಾಕ್ ಟ್ಯಾಕಲ್ ಮಾಡಿ ಗಳಿಸಿದ್ದು 8 ಅಂಕಗಳಷ್ಟೇ. ಇತರೆ ಅಂಕಗಳಲ್ಲಿ ಭಾರತ 5 ಅಂಕ ಪಡೆಯಿತು. ಒಟ್ಟನಲ್ಲಿ ಅಜಯ್ ಠಾಕೂರ್ ನೇತೃತ್ವದ ಟೀಂ ಇಂಡಿಯಾಗೆ ಪಾಕಿಸ್ತಾನ ಯಾವ ವಿಭಾಗದಲ್ಲೂ ಸವಾಲಾಗಲೇ ಇಲ್ಲ. ಇನ್ನು ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಕೀನ್ಯಾ ತಂಡವನ್ನು ಎದುರಿಸಲಿದೆ. ಆ ಬಳಿಕ ಮತ್ತೊಮ್ಮೆ ಪಾಕಿಸ್ತಾನವನ್ನು ಜೂನ್ 25ರಂದು ಭಾರತ ತಂಡವು ಎದುರಿಸಲಿದೆ.

Scroll to load tweet…

ಭಾರತ-ಪಾಕಿಸ್ತಾನ ಕಬಡ್ಡಿ ಪಂದ್ಯವನ್ನು ವೀಕ್ಷಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟೀಂ ಇಂಡಿಯಾ ಕಬಡ್ಡಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
’ಚೊಚ್ಚಲ ಕಬಡ್ಡಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಭಾರತದ ಕಬಡ್ಡಿ ತಂಡಕ್ಕೆ ಅಭಿನಂದನೆಗಳು. ಮಜಾ ಆ ಗಯಾ’ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ಕಬಡ್ಡಿ ಕರ್ಫ್ಯೂ ಎಂಬ ಹ್ಯಾಷ್’ಟ್ಯಾಗ್ ಅನ್ನೂ ನೀಡಿದ್ದಾರೆ.