ಕಬಡ್ಡಿ ಮಾಸ್ಟರ್ಸ್ ದುಬೈ : ಭಾರತಕ್ಕೆ ಸತತ 2ನೇ ಗೆಲವು

ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಭಾರತದ ಗೆಲುವಿನ ಓಟ ಮುಂದುವರಿದಿದೆ.  ಬದ್ಧವೈರಿ ಪಾಕ್ ವಿರುದ್ಧದ ಗೆಲುವಿನ ಬಳಿಕ ಭಾರತ ತನ್ನ 2ನೇ ಪಂದ್ಯದಲ್ಲೂ ಜಯಭೇರಿ ಬಾರಿಸಿದೆ. ಈ ರೋಚಕ ಚಾಂಪಿಯನ್ ಭಾರತ ತಂಡದ ಪ್ರದರ್ಶನ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.

Kabaddi Masters Dubai 2018 -India beat Kenya 48-19

ದುಬೈ(ಜೂ.23): ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನ ಮಣಿಸಿದ ಭಾರತ, ದ್ವಿತೀಯ ಪಂದ್ಯದಲ್ಲಿ ಕೀನ್ಯಾ ವಿರುದ್ಧ ಗೆಲುವಿನ ನಗೆ ಬೀರಿದೆ. ಈ ಮೂಲಕ ಟೂರ್ನಿಯಲ್ಲಿ ಸತತ 2 ಗೆಲುವು ಸಾಧಿಸಿದೆ.  ಈ ಮೂಲಕ ಅಂಕಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಕಾಪಾಡಿಕೊಂಡಿದೆ.

ಪಂದ್ಯದ ಆರಂಭದಲ್ಲೇ ಭಾರತ ಮೇಲುಗೈ ಸಾಧಿಸಿತು. ಮೊದಲ ರೈಡ್‌ನಲ್ಲೇ ಅಜಯ್ ಠಾಕೂರ್ ಪಾಯಿಂಟ್ಸ್ ಕಬಳಿಸಿದರು. ಚಾಂಪಿಯನ್ ತಂಡ ಭಾರತದ ವಿರುದ್ಧ ಕೀನ್ಯಾ ಹೋರಾಟ ಅಂಕಗಳಿಸಲು ಪರದಾಡಿತು. ಭರ್ಜರಿ ಮುನ್ನಡೆ ಸಾಧಿಸಿದ ಭಾರತ ಮೊದಲಾರ್ಧದ ಅಂತ್ಯದಲ್ಲಿ 27-9 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.

ದ್ವಿತಿಯಾರ್ಧದ ಆರಂಭದಲ್ಲೇ ಸೂಪರ್ ರೈಡ್ ಮೂಲಕ ಅಂಕಗಳ ಸುರಿಮಳೆ ಸುರಿದ ಭಾರತ ಭಾರಿ ಮುನ್ನಡೆ ಪಡೆದುಕೊಂಡಿತು. ಭಾರತದ ಆರ್ಭಟಕ್ಕೆ ಕೀನ್ಯಾ ತಬ್ಬಿಬಾಯಿತು. ಅದ್ಬುತ ಪ್ರದರ್ಶನ ನೀಡಿದ ಭಾರತ ತಂಡ 48-19 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. 
 

Latest Videos
Follow Us:
Download App:
  • android
  • ios