ಲಂಡನ್[ಜೂ.06]: ಐಪಿಎಲ್ ಸೇರಿ ಟಿ20 ಲೀಗ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಗಮನ ಸೆಳೆದಿರುವ ಬಾರ್ಬೊಡಾಸ್ ಮೂಲದ ಆಲ್ರೌಂಡರ್, ಜೋಫ್ರಾ ಆರ್ಚರ್‌ರನ್ನು 2019ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ ಆ್ಯಷಸ್ ಸರಣಿಯಲ್ಲಿ ತಮ್ಮ ತಂಡದ ಪರ ಆಡಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿಶೇಷ ತಂತ್ರ ರೂಪಿಸುತ್ತಿದೆ. 

ಇಲ್ಲಿದೆ 2019ರ ಕ್ರಿಕೆಟ್ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ:
ಆರ್ಚರ್ ತಂದೆ ಇಂಗ್ಲೆಂಡ್‌ನವರು. ನಿಯಮದ ಪ್ರಕಾರ, ರಾಷ್ಟ್ರೀಯ ತಂಡದ ಪರ ಆಡಬೇಕಿದ್ದರೆ ಆಟಗಾರ ಕನಿಷ್ಠ 7 ವರ್ಷ ಇಂಗ್ಲೆಂಡ್‌ನಲ್ಲಿ ವಾಸ ಮಾಡಿರಬೇಕು. ಆದರೆ ಆರ್ಚರ್ ಇಂಗ್ಲೆಂಡ್‌ಗೆ ಆಗಮಿಸಿ 4 ವರ್ಷ ಮಾತ್ರ ಆಗಿದೆ.
ಬಾರ್ಬಡೋಸ್ ಮೂಲದ 23 ವರ್ಷದ ಆರ್ಚರ್ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್’ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು ಬಿಗ್ ಬ್ಯಾಷ್ ಟೂರ್ನಿಯಲ್ಲೂ ಮಿಂಚು ಹರಿಸಿದ್ದ ಆರ್ಚರ್ 2018ನೇ ಸಾಲಿನ ಐಪಿಎಲ್’ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. 

ಇಂಗ್ಲೆಂಡ್’ನಲ್ಲಿ 2019ರ ಮೇ 30ರಂದು ವಿಶ್ವಕಪ್’ಗೆ ಚಾಲನೆ ದೊರಕಲಿದ್ದು, ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಟೀಂ ಇಂಡಿಯಾ ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.