ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟಗೊಂಡಿದ್ದು ಮೇ 30ರಿಂದ ಜುಲೈ 14ರವರೆಗೆ ನಡೆಯುವ ಕ್ರಿಕೆಟ್ ಮಹಾಜಾತ್ರೆಗೆ ಇಂಗ್ಲೆಂಡ್ ಆತಿಥ್ಯ ವಹಿಸಲಿದೆ. ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇನ್ನು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಈ ಬಾರಿ ವಿಶ್ವಕಪ್’ಗೆ ಅರ್ಹತೆ ಗಿಟ್ಟಿಸಿರುವ ಆಫ್ಘಾನಿಸ್ತಾನದೊಂದಿಗೆ ಕಾದಾಡಲಿದೆ.
ದುಬೈ[ಏ.27]: ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟಗೊಂಡಿದ್ದು ಮೇ 30ರಿಂದ ಜುಲೈ 14ರವರೆಗೆ ನಡೆಯುವ ಕ್ರಿಕೆಟ್ ಮಹಾಜಾತ್ರೆಗೆ ಇಂಗ್ಲೆಂಡ್ ಆತಿಥ್ಯ ವಹಿಸಲಿದೆ. ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಇನ್ನು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಈ ಬಾರಿ ವಿಶ್ವಕಪ್’ಗೆ ಅರ್ಹತೆಗಿಟ್ಟಿಸಿರುವ ಆಫ್ಘಾನಿಸ್ತಾನದೊಂದಿಗೆ ಕಾದಾಡಲಿದೆ.
1983 ಹಾಗೂ 2011ರ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಭಾರತ ತಂಡವು ಜೂನ್ 5ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇನ್ನು ಜೂನ್ 16ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಮ್ಯಾಂಚೆಸ್ಟರ್’ನಲ್ಲಿ ಸೆಣಸಲಿದೆ.
ವಿಶ್ವಕಪ್’ನಲ್ಲಿ ಒಟ್ಟು 48 ಪಂದ್ಯಗಳು ಜರುಗಲಿದ್ದು, ಗುಂಪು ಹಂತದಲ್ಲಿ 45 ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು ಗುಂಪು ಹಂತದಲ್ಲಿ 9 ಪಂದ್ಯಗಳನ್ನು ಆಡಲಿವೆ. ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನಗಳಿಸುವ ತಂಡಗಳು ಸೆಮಿಫೖನಲ್ ಪ್ರವೇಶಿಸಲಿದೆ.
