2019ರ ವಿಶ್ವಕಪ್ ಸರಣಿಗೆ ಭಾರತ ತಂಡ ಹೇಗಿರಲಿದೆ?

sports | Tuesday, June 5th, 2018
Suvarna Web Desk
Highlights

2019ರ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ತಯಾರಿ ಆರಂಭಗೊಂಡಿದೆ. ನಾಯಕ ವಿರಾಟ್ ಕೊಹ್ಲಿ, ಎಮ್ ಎಸ್ ಧೋನಿ ಸೇರಿದಂತೆ ಹಲವು ಸ್ಥಾನಗಳು ಈಗಾಗಲೇ ಭರ್ತಿಯಾಗಿದೆ. ಇನ್ನುಳಿದ ಕೆಲ ಸ್ಥಾನಗಳಿಗಾಗಿ ಪೈಪೋಟಿ ಆರಂಭಗೊಂಡಿದೆ. ಖಾಲಿ ಉಳಿದಿರುವ ಸ್ಥಾನಕ್ಕೆ ಆಯ್ಕೆಯಾಗೋ ಕ್ರಿಕೆಟಿಗರ ಡಿಟೇಲ್ಸ್ ಇಲ್ಲಿದೆ.
 

ಬೆಂಗಳೂರು(ಜೂನ್.5):  ವಿಶ್ವಕಪ್ ಟೂರ್ನಿಗೆ ಕ್ರಿಕೆಟ್ ರಾಷ್ಟ್ರಗಳು ತಯಾರಿ ಆರಂಭಿಸಿದೆ. ಮಂದಿನ ವರ್ಷ ಮೇ 30 ರಂದು ಆರಂಭಗೊಳ್ಳಲಿರುವ ವಿಶ್ವಕಪ್ ಟೂರ್ನಿಗಾಗಿ ಬಲಿಷ್ಠ ತಂಡವನ್ನ ಕಣಕ್ಕಿಳಿಸಲು ಕಸರತ್ತು ನಡೆಸುತ್ತಿದೆ. ಇದಕ್ಕೆ ಟೀಮ್ಇಂಡಿಯಾ ಕೂಡ ಹೊರತಲ್ಲ. ಈ ಬಾರಿ ರೌಂಡ್ ರಾಬಿನ್ ಮಾದರಿಯಲ್ಲಿ ಲೀಗ್ ಪಂದ್ಯಗಳು ನಡೆಯಲಿದೆ. ಹೀಗಾಗಿ ಪ್ರತಿ ಪಂದ್ಯ ಕೂಡ ಮುಖ್ಯವಾಗಲಿದೆ. 

ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಸಂಭಾವ್ಯ ತಂಡ ರಚಿಸಲು ಪ್ಲಾನ್ ರೆಡಿ ಮಾಡಿದೆ. ವಿರಾಟ್ ಕೊಹ್ಲಿ, ಎಮ್ ಎಸ್ ಧೋನಿ ಸೇರಿದಂತೆ ಪ್ರಮುಖ ಸ್ಥಾನಗಳು ಈಗಾಗಲೇ ಭರ್ತಿಯಾಗಿದೆ. ಇನ್ನುಳಿದ ಕೆಲ ಸ್ಥಾನಗಳಿಗೆ ಕೆಲವರ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ.

ಕೆಎಲ್ ರಾಹುಲ್: 2019 ರ ವಿಶ್ವಕಪ್ ತಂಡದ ಬ್ಯಾಕ್ ಅಪ್ ಆರಂಭಿಕನಾಗಿ ಕೆಎಲ್ ರಾಹುಲ್‌ಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್‌ಗೆ ಬ್ಯಾಕ್ ಅಪ್ ಓಪನರ್ ಆಗಿ ರಾಹುಲ್ ಆಯ್ಕೆ ಬಹುತೇಕ ಖಚಿತ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 14 ಪಂದ್ಯದಿಂದ 659 ರನ್ ಸಿಡಿಸಿದ್ದರು. ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ-ಟ್ವೆಂಟಿ ಸರಣಿಗೆ ಆಯ್ಕೆಯಾಗಿರುವ ರಾಹುಲ್, 2019ರ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯಲಿದ್ದಾರೆ. 

ರಿಷಬ್ ಪಂತ್: ಭಾರತ ತಂಡದ ಯುವ ಬ್ಯಾಟ್ಸ್‌ಮನ್ ರಿಷಬ್ ಪಂತ್ ಆಯ್ಕೆ ಸಮಿತಿಯ ಲಿಸ್ಟ್‌ನಲ್ಲಿರೋ ಪ್ರಮುಖ ಹೆಸರು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಂತ್, 173.60ರ ಸ್ಟ್ರೈಕ್ ರೇಟ್‌ನಲ್ಲಿ 684 ರನ್ ಸಿಡಿಸಿದ್ದಾರೆ. ಮುಂಬರುವ ಭಾರತ ಎ ತಂಡಕ್ಕೆ ಪಂತ್ ಆಯ್ಕೆಯಾಗಿಲ್ಲ. ಆದರೆ ರಿಷಬ್ ಪಂತ್ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗೋ ಸಾಧ್ಯತೆ ಹೆಚ್ಚಿದೆ. ಎಮ್ ಎಸ್ ಧೋನಿಗೆ ಬ್ಯಾಕ್‌ಅಪ್ ವಿಕೆಟ್ ಕೀಪರ್ ಆಗಿಯೂ ಪಂತ್ ಸಹಕಾರಿಯಾಗಲಿದ್ದಾರೆ.

ಸುರೇಶ್ ರೈನಾ: ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿಕೊಂಡು ಟೀಮ್ಇಂಡಿಯಾಗೆ ಕಮ್‌ಬ್ಯಾಕ್ ಮಾಡಿರುವ ಸುರೇಶ್ ರೈನಾ, ವಿಶ್ವಕಪ್ ತಂಡಕ್ಕೂ ಆಯ್ಕೆಯಾಗೋ ಸಾಧ್ಯತೆ ಹೆಚ್ಚಿದೆ. ಈ ಬಾರಿಯ ಐಪಿಎಲ್‌ನಲ್ಲಿ 15 ಪಂದ್ಯಗಳಿಂದ 445 ರನ್ ಸಿಡಿಸಿದ ರೈನಾ, ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
2011 ಹಾಗೂ 2015ರ ವಿಶ್ವಕಪ್ ತಂಡದ ಭಾಗವಾಗಿದ್ದ ಸುರೇಶ್ ರೈನಾ ಅನುಭವ 2019ರ ವಿಶ್ವಕಪ್ ಟೂರ್ನಿಯಲ್ಲಿ ನೆರವಿಗೆ ಬರಲಿದೆ.


 

ಅಜಿಂಕ್ಯ ರಹಾನೆ: 11ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ಅಜಿಂಕ್ಯ ರಹಾನೆ, ಮಧ್ಯಮ ಕ್ರಮಾಂಕ ಆಧಾರ ಸ್ಥಂಭ ಅನ್ನೋದನ್ನ ಮರೆಯುವಂತಿಲಲ್ಲ. 2015ರ ವಿಶ್ವಕಪ್ ಟೂರ್ನಿಯಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಹಾನೆ 8 ಪಂದ್ಯಗಳಲ್ಲಿ 208 ರನ್ ಸಿಡಿಸಿದ್ದಾರೆ.
ರಹಾನೆ 4ನೇ ಕ್ರಮಾಂಕದಲ್ಲಿ 25 ಪಂದ್ಯಗಳಿಂದ 843 ರನ್ ಸಿಡಿಸಿದ್ದಾರೆ. ಇದರಲ್ಲಿ 5 ಅರ್ಧಶತಗಳು ದಾಖಲಾಗಿವೆ. ಮಂದಿನ ಸರಣಿಗಳಲ್ಲಿ ರಹಾನೆ ಸ್ಥಿರ ಪ್ರದರ್ಶನ ನೀಡಿದರೆ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬಹುದು.

ರವೀಂದ್ರ ಜಡೇಜಾ: ನಿಗಧಿತ ಓವರ್ ಕ್ರಿಕೆಟ್‌ ತಂಡದಿಂದ ಹೊರಗುಳಿದಿರುವ ರವೀಂದ್ರ ಜಡೇಜಾ, ಕಮ್‌ಬ್ಯಾಕ್ ಮಾಡೋದರಲ್ಲಿ ಅನುಮಾನವಿಲ್ಲ. 2018ರ ಐಪಿಎಲ್‌ನಲ್ಲಿ ಬೌಲಿಂಗ್‌ನಲ್ಲಿ 7.39ರ ಎಕಾನಮಿಯಲ್ಲಿ 11 ವಿಕೆಟ್ ಕಬಳಿಸಿದ್ದಾರೆ. 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಟಾರ್ ಪರ್ಫಾಮರ್ ಆಗಿದ್ದ ಜಡೇಜಾ ಫೀಲ್ಡಿಂಗ್‌ನಲ್ಲಿ ಮಾಡೋ ಜಾದೂ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಜಡೇಜಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯೋ ಸಾಧ್ಯತೆ ಇದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Chethan Kumar