ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆಗಿಟ್ಟಿಸಿದ ಜಿನ್ಸನ್ ಜಾನ್ಸನ್
ಭಾರತದ ಮಿಂಚಿನ ಓಟಗಾರ ಜಿನ್ಸನ್ ಜಾಕ್ಸನ್ ಐಎಸ್‌ಟಿಎಎಫ್ ಬರ್ಲಿನ್ ಅಥ್ಲೆಟಿಕ್ಸ್ ಕೂಟದ 1500 ಮೀ. ಓಟದಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಲಿರುವ ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬರ್ಲಿನ್ (ಜರ್ಮನಿ): ಏಷ್ಯನ್ ಗೇಮ್ಸ್ ಚಿನ್ನ ವಿಜೇತ ಭಾರತದ ಓಟಗಾರ ಜಿನ್ಸನ್ ಜಾನ್ಸನ್, ಐಎಸ್‌ಟಿಎಎಫ್ ಬರ್ಲಿನ್ ಅಥ್ಲೆಟಿಕ್ಸ್ ಕೂಟದ 1500 ಮೀ. ಓಟದಲ್ಲಿ 3 ನಿಮಿಷ 35.24 ಸೆ.ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಗೆದ್ದರು. ಇದರೊಂದಿಗೆ ಜಿನ್ಸನ್, ಸೆ.28 ರಿಂದ ಅ.6ರವರೆಗೆ ದೋಹಾದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ.
ಭಾರತದ ಸ್ಟಾರ್ ಅಥ್ಲೀಟ್ಸ್ ಜಿನ್ಸನ್ ಜಾನ್ಸನ್, ಗೋಪಿಗೆ ಒಲಿಂಪಿಕ್ಸ್‌ಗೇರುವ ಗುರಿ
ಇದರೊಂದಿಗೆ ತಮ್ಮ ಹೆಸರಲ್ಲಿದ್ದ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ. ಭಾನುವಾರ ಇಲ್ಲಿನ ಒಲಿಂಪಿಕ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಸ್ಪರ್ಧೆಯಲ್ಲಿ ಅಮೆರಿಕದ ಜೊಶುವಾ ಥಾಮ್ಸನ್ ಚಿನ್ನಕ್ಕೆ ಮುತ್ತಿಟ್ಟರು.
ರಿಯೊ ಒಲಿಂಪಿಕ್ಸ್ ಓಡಿದ್ದರೆ ಚಿನ್ನ ಗೆಲ್ಲುತ್ತಿದ್ದ ಜಾನ್ಸನ್..!
28 ವರ್ಷ ವಯಸ್ಸಿನ ಜಿನ್ಸನ್ ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 3 ನಿಮಿಷ 37.86 ಸೆ.ಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. 800 ಮೀ. ಓಟದಲ್ಲಿ ಜಿನ್ಸನ್ (1 ನಿಮಿಷ 45.65 ಸೆ.) ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.