ಗುರುವಾರ ನಡೆದ ಪುರುಷರ 1500 ಮೀ. ಓಟದಲ್ಲಿ ಜಾನ್ಸನ್ 3.44.72 ಸೆ.ನಲ್ಲಿ ಗುರಿ ತಲುಪಿ ಚಿನ್ನ ಜಯಿಸಿದ್ದರು. ಇನ್ನು 2016 ರಿಯೋ ಒಲಿಂಪಿಕ್ಸ್ ಚಾಂಪಿಯನ್ ಅಮೆರಿಕಾದ ಮ್ಯಾಥ್ಯೂ ಇದೇ ದೂರ ಕ್ರಮಿಸಲು 3.50.00 ಸೆ.ಗಳನ್ನು ತೆಗೆದುಕೊಂಡಿದ್ದರು. ಈ ಲೆಕ್ಕಾಚಾರದಲ್ಲಿ ರಿಯೋ ಚಾಂಪಿಯನ್‌ನನ್ನೇ ಭಾರತದ ಜಾನ್ಸನ್ ಮೀರಿಸಿದ್ದಾರೆ.

ಜಕಾರ್ತ[ಸೆ.01]: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನ ಪುರುಷರ 1500 ಮೀ. ಓಟದಲ್ಲಿ ಚಿನ್ನಕ್ಕೆ ಮುತ್ತಿಟ್ಟ ಭಾರತದ ಜಿನ್ಸನ್ ಜಾನ್ಸನ್ ಒಂದೊಮ್ಮೆ, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರೆ ಅಲ್ಲಿಯೂ ಸ್ವರ್ಣ ಸಾಧನೆ ಮಾಡುತ್ತಿದ್ದರು ಎನ್ನುತ್ತಿವೆ ಅಂಕಿ-ಅಂಶಗಳು. 

ಇದೇನಪ್ಪಾ ಎಂದು ಹುಬ್ಬೇರಿಸಬೇಡಿ. ಗುರುವಾರ ನಡೆದ ಪುರುಷರ 1500 ಮೀ. ಓಟದಲ್ಲಿ ಜಾನ್ಸನ್ 3.44.72 ಸೆ.ನಲ್ಲಿ ಗುರಿ ತಲುಪಿ ಚಿನ್ನ ಜಯಿಸಿದ್ದರು. ಇನ್ನು 2016 ರಿಯೋ ಒಲಿಂಪಿಕ್ಸ್ ಚಾಂಪಿಯನ್ ಅಮೆರಿಕಾದ ಮ್ಯಾಥ್ಯೂ ಇದೇ ದೂರ ಕ್ರಮಿಸಲು 3.50.00 ಸೆ.ಗಳನ್ನು ತೆಗೆದುಕೊಂಡಿದ್ದರು. ಈ ಲೆಕ್ಕಾಚಾರದಲ್ಲಿ ರಿಯೋ ಚಾಂಪಿಯನ್‌ನನ್ನೇ ಭಾರತದ ಜಾನ್ಸನ್ ಮೀರಿಸಿದ್ದಾರೆ.

Scroll to load tweet…
Scroll to load tweet…

ಇನ್ನು ಜಿನ್ಸನ್ 800 ಮೀಟರ್ ಓಟದಲ್ಲಿ ಕಂಚಿನ ಪದಕ ಜಯಿಸಿದ್ದರು.