ಮುಂಬೈ(ಮೇ.16): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಮುಂಬೈ ಯಶಸ್ಸಿನಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಚಾಂಪಿಯನ್ ಕೀರಿಟ ಮುಡಿಗೇರಿಸಿಕೊಂಡ ಬಳಿಕ ಇದೀಗ ಬುಮ್ರಾ ಆಲ್ ಟೈಮ್ ಗ್ರೇಟ್ ಮುಂಬೈ ತಂಡ ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ ಮುಂಬೈ ತಂಡದಿಂದ ರೋಡ್ ಶೋ!

ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ ಪ್ರಮುಖ ಆಟಗಾರರನ್ನ ಒಟ್ಟುಗೊಡಿಸಿ ತಂಡದ ಆಯ್ಕೆ ಮಾಡಲಾಗಿದೆ. ಬುಮ್ರಾ ಆಯ್ಕೆ ಮಾಡಿರುವ ತಂಡ ಬಲಿಷ್ಠ ಬೌಲಿಂಗ್ ಲೈನ್ ಅಪ್ ಹೊಂದಿದೆ. ಇನ್ನು ಬ್ಯಾಟಿಂಗ್‌ನಲ್ಲಿ ಎಂದಿನಂತೆ ಸಮೋತಲನವಾಗಿದೆ.

ಇದನ್ನೂ ಓದಿ: ಧೈರ್ಯ ಸಾಕಾಗಲಿಲ್ಲ- ಕೊನೆಯ ಎಸೆತ ನೋಡ್ಲಿಲ್ಲ: ನೀತಾ ಅಂಬಾನಿ

ಬುಮ್ರಾ ಪ್ರಕಟಿಸಿದ ಆಲ್ ಟೈಮ್ ತಂಡ:
ರೋಹಿತ್ ಶರ್ಮಾ(ನಾಯಕ), ಸಚಿನ್ ತೆಂಡುಲ್ಕರ್, ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ಕ್ರುನಾಲ್ ಪಾಂಡ್ಯ, ಹರ್ಭಜನ್ ಸಿಂಗ್, ಲಸಿತ್ ಮಲಿಂಗ, ಮಿಚೆಲ್ ಜಾನ್ಸನ್, ಜಸ್ಪ್ರೀತ್ ಬುಮ್ರಾ