4ನೇ ಐಪಿಎಲ್ ಟ್ರೋಫಿ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ ತಂಡ  ನಗದರ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿತು. ಚಾಂಪಿಯನ್ ತಂಡಕ್ಕೆ ಶುಭ ಹಾರೈಸಲು ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು.

ಮುಂಬೈ(ಮೇ.14): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 1 ರನ್ ರೋಚಕ ಗೆಲುವು ಸಾಧಿಸಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತು. ಈ ಮೂಲಕ ಮುಂಬೈ 4 ಐಪಿಎಲ್ ಟ್ರೋಫಿ ಗೆದ್ದ ಸಾಧನೆ ಮಾಡಿತು. ಮುಂಬೈ ಗೆಲುವಿನ ಬಳಿಕ ಫ್ರಾಂಚೈಸಿ ನಗರದ ಮರೀನ್ ಡ್ರೈವ್ ರಸ್ತೆಯಲ್ಲಿ ರೋಡ್ ಶೋ ಹಮ್ಮಿಕೊಂಡಿತ್ತು.

ತೆರೆದ ಬಸ್‌ನಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರು ಟ್ರೋಫಿ ಹಿಡಿದು ರೋಡ್ ಶೋ ನಡೆಸಿದರು. ಬಸ್‌ನಲ್ಲಿ ಮುಂಬೈ ತಂಡದ ಆಟಗಾರರು, ಕೋಚಿಂಗ್ ಸ್ಟಾಫ್ ಕೂಡ ರೋಡ್‌ನಲ್ಲಿ ಭಾಗವಹಿಸಿದರು.

ಚಾಂಪಿಯನ್ ಮುಂಬೈ ಆಟಗಾರರ ರೋಡ್ ಶೋ ನೋಡಲು ಮುಂಬೈನಲ್ಲಿ ಅಭಿಮಾನಿಗಳ ದಂಡೇ ಹರಿದು ಬಂದಿತ್ತು.

ಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ದ ಅಂತಿಮ ಎಸೆತದಲ್ಲಿ ವಿಕೆಟ್ ಕಬಳಿಸೋ ಮೂಲಕ ಮುಂಬೈ 1 ರನ್ ರೋಚಕ ಗೆಲುವು ಸಾದಿಸಿತ್ತು.