ಹೈದರಾಬಾದ್‌(ಮೇ.14): ಐಪಿಎಲ್‌ 12ನೇ ಆವೃತ್ತಿಯ ಫೈನಲ್‌ ಪಂದ್ಯದ ಫಲಿತಾಂಶ ಕೊನೆ ಎಸೆತದಲ್ಲಿ ನಿರ್ಧಾರವಾಯಿತು. ಕೊನೆ ಎಸೆತದಲ್ಲಿ ಎರಡೂ ತಂಡಗಳಿಗೆ ಗೆಲ್ಲುವ ಅವಕಾಶವಿತ್ತು. ಎರಡೂ ತಂಡಗಳ ಅಭಿಮಾನಿಗಳಲ್ಲಿ ಮಾತ್ರವಲ್ಲ, ತಂಡದ ಮಾಲೀಕರು ಸಹ ಒತ್ತಡದಲ್ಲಿದ್ದರು. ಪಂದ್ಯದ ಕೊನೆ ಎಸೆತವನ್ನು ವೀಕ್ಷಿಸಲು ಧೈರ್ಯ ಸಾಕಾಗಲಿಲ್ಲ ಎನ್ನುವ ಅರ್ಥದಲ್ಲಿ ಮುಂಬೈ ಇಂಡಿಯನ್ಸ್‌ ಒಡತಿ ನೀತಾ ಅಂಬಾನಿ ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ: IPL Final: ಮತ್ತೆ ಮತ್ತೆ ನೋಡಬೇಕಿನಿಸುವ ಆ ಒಂದು ಓವರ್...!

ಪಂದ್ಯದ ಬಳಿಕ ಮಾತನಾಡಿದ ಅವರು, ‘ಕೊನೆ ಓವರ್‌, ಅದರಲ್ಲೂ ಕೊನೆ ಎಸೆತವನ್ನು ವೀಕ್ಷಿಸಲಿಲ್ಲ. ಪ್ರೇಕ್ಷಕರ ಬೆಂಬಲ ಯಾರಿಗೆ ಹೆಚ್ಚಿದೆ ಎನ್ನುವದನ್ನು ಗಮನಿಸುತ್ತಾ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿದೆ’ ಎಂದಿದ್ದಾರೆ. 

ಇದನ್ನೂ ಓದಿ: IPL 2019: ಚೆನ್ನೈಗೆ ಆಘಾತ- ಮುಂಬೈಗೆ ಚಾಂಪಿಯನ್ ಕಿರೀಟ

ಅಂತಿಮ ಎಸೆತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 2 ರನ್ ಬೇಕಿತ್ತು. ಲಸಿತ್ ಮಲಿಂಗ್ ಎಸೆತಕ್ಕೆ ಕ್ರೀಸ್‌ನಲ್ಲಿದ್ದ ಶಾರ್ದೂಲ್ ಠಾಕೂರ್ ಎಲ್‌ಬಿ ಬಲೆಗೆ ಬಿದ್ದರು. ಈ ಮೂಲಕ ಮುಂಬೈ ಕೇವಲ 1 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು. 12ನೇ ಆವೃತ್ತಿ ಫೈನಲ್ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತ್ತು.