ಮುಂಬೈ(ಮೇ.06): 12ನೇ ಆವೃತ್ತಿ ಐಪಿಎಲ್ ಟೂರ್ನಿ ಲೀಗ್ ಪಂದ್ಯಗಳು ಮುಕ್ತಾಯಗೊಂಡಿದ್ದು, ಇದೀಗ ಪ್ಲೇ ಆಫ್ ಪಂದ್ಯಗಳು ಆರಂಭಗೊಳ್ಳುತ್ತಿದೆ. ಮೇ.12ರ ಫೈನಲ್ ಪಂದ್ಯದೊಂದಿಗೆ ಟೂರ್ನಿ ಮುಕ್ತಾಯಗೊಳ್ಳಲಿದೆ. ಬಳಿಕ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿ ಕೌಂಟ್ ಡೌನ್ ಆರಂಭಗೊಳ್ಲಲಿದೆ. ಈ ವಿಶ್ವಕಪ್ ಟೂರ್ನಿಯಲ್ಲಿ ಹಲವು ಬೌಲರ್‌ಗಳು ಮಿಂಚಲು ರೆಡಿಯಾಗಿದ್ದಾರೆ.  2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಇದೀಗ ಬೆಸ್ಟ್ ಬೌಲರ್ ಹೆಸರು ಬಹಿರಂಗ ಪಡಿಸಿದ್ದಾರೆ. 

ಇದನ್ನೂ ಓದಿ: ಕ್ರಿಕೆಟ್ ವಿಶ್ವಕಪ್: ಇಂಡೋ-ಪಾಕ್ ಟಿಕೆಟ್ ಸೋಲ್ಡ್ ಔಟ್

2019ರ ವಿಶ್ವಕಪ್ ಟೂರ್ನಿಯಲ್ಲಿರುವ ಬೆಸ್ಟ್ ಬೌಲರ್ ಬೇರೆ ಯಾರು ಅಲ್ಲ ಅದು, ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ. ಬುಮ್ರಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಸ್ಪೀಡ್, ಲೈನ್ ಅಂಡ್ ಲೆಂಥ್ ಹಾಗೂ ಅಷ್ಟೇ ನಿಖರ  ಯಾರ್ಕರ್ ಎಸೆತಗಳಿಂದ ಬುಮ್ರಾ ಎದುರಾಳಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ. ಬುಮ್ರಾ ಈ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಲಿದ್ದಾರೆ ಎಂದು ಯುವರಾಜ್ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಸೆಮಿಫೈನಲ್‌ಗೆ ಯಾವ ತಂಡ? ಭವಿಷ್ಯ ನುಡಿದ ಗಂಗೂಲಿ!

ವಿಶ್ವದ ಟಾಪ್ 3 ಬೌಲರ್‌ಗಳಲ್ಲಿ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ. ಇದರಿಂದ 2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಫೇವರಿಟ್ ಎನಿಸಿಕೊಂಡಿದೆ. ಬುಮ್ರಾ ಜೊತೆಗೆ ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ಕೂಡ ಉತ್ತಮ ಸಾಥ್ ನೀಡಲಿದ್ದಾರೆ ಎಂದು ಯುವಿ ಹೇಳಿದ್ದಾರೆ.