ಮ್ಯಾಂಚೆಸ್ಟರ್[ಮೇ.06]: ಭಾರತ-ಪಾಕಿಸ್ತಾನ ಪಂದ್ಯ ಎಂದರೆ ಕೇವಲ ಉಭಯ ದೇಶಗಳಿಗಷ್ಟೇ ಅಲ್ಲ, ವಿಶ್ವದ ಬಹುತೇಕ ದೇಶಗಳಿಗೆ ಎಲ್ಲಿಲ್ಲದ ಕುತೂಹಲ. ಎಷ್ಟರಮಟ್ಟಿಗೆ ಅಂದರೆ, ಜೂನ್ 16ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೋಡ್'ನರ್ಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿಯ ಹೈಟೆನ್ಷನ್ ಪಂದ್ಯದ ಟಿಕೆಟ್ ಈಗಾಗಲೇ ಮಾರಾಟವಾಗಿವೆ. 

ವಿಶ್ವಕಪ್ 2019: ಇಂಡೋ-ಪಾಕ್ ಪಂದ್ಯದ ಬಗ್ಗೆ ನಿರ್ಧಾರ ಪ್ರಕಟಿಸಿದ ಐಸಿಸಿ

ಟಿಕೆಟ್‌ಗಳನ್ನು ನೀಡಲು ಆರಂಭಿಸಿದ 48 ಗಂಟೆಗಳಲ್ಲಿ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಸ್ವತಃ ಲಂಕಾಶೈರ್ ಕ್ರಿಕೆಟ್ ಮಂಡಳಿಯ ಕಾರ್ಪೊರೇಟ್ ಸೇಲ್ಸ್ ಆ್ಯಂಡ್ ಬಿಸಿನೆಸ್ ಡೆವಲಪ್
ಮೆಂಟ್ ಮ್ಯಾನೇಜರ್ ಡ್ಯಾನ್ ವೈಟ್‌ಹೆಡ್ ತಿಳಿಸಿದ್ದಾರೆ. ಮೇ. 30 ರಿಂದ ವಿಶ್ವಕಪ್ ಆರಂಭವಾಗಲಿದೆ.

#BreakingNews ವಿಶ್ವಕಪ್ ಟೂರ್ನಿಯಿಂದ ಸ್ಟಾರ್ ಕ್ರಿಕೆಟಿಗ ಔಟ್..!

ಇದೇ ವರ್ಷ ಫುಲ್ವಾಮಾ ದಾಳಿಯ ಬಳಿಕ ಭಾರತ ತಂಡವು ಪಾಕಿಸ್ತಾನ ವಿರುದ್ಧ ವಿಶ್ವಕಪ್ ಟೂರ್ನಿಯಲ್ಲಿ ಆಡಬಾರದು ಎಂದು ಹಲವು ಕ್ರಿಕೆಟಿಗರು ಮತ್ತು ರಾಜಕಾರಣಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. 

ಇಲ್ಲಿದೆ ನೋಡಿ ವಿಶ್ವಕಪ್ ಟೂರ್ನಿಗೆ ರೆಡಿಯಾದ 10 ತಂಡಗಳ ಸಂಪೂರ್ಣ ಪಟ್ಟಿ