Asianet Suvarna News Asianet Suvarna News

ಶೂಟಿಂಗ್ ವಿಶ್ವಕಪ್: ಅಭಿಷೇಕ್ ವರ್ಮಾಗೆ ಚಿನ್ನ

ಐಎಸ್ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಭಾರತದ ಅಭಿಷೇಕ್ ವರ್ಮಾ ಚಿನ್ನದ ಬೇಟೆಯಾಡಿದ್ದಾರೆ. ಇನ್ನು ಮತ್ತೋರ್ವ ಶೂಟರ್ ಸೌರಭ್ ಚೌಧರಿ ಪದಕ ಜಯಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ISSF World Cup 2019 Abhishek Verma clinches gold in 10m pistol
Author
Rio de Janeiro, First Published Aug 31, 2019, 2:24 PM IST
  • Facebook
  • Twitter
  • Whatsapp

ರಿಯೊ ಡಿ ಜನೈರೊ[ಆ.31]: ಏಷ್ಯನ್ ಗೇಮ್ಸ್ ಪದಕ ವಿಜೇತ ಅಭಿಷೇಕ್ ವರ್ಮಾ, ಇಲ್ಲಿ ನಡೆಯುತ್ತಿರುವ ಐಎಸ್ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನ ಪುರುಷರ ವಿಭಾಗದ 10 ಮೀ. ಏರ್ ಪಿಸ್ತೂಲ್‌ನಲ್ಲಿ ಚಿನ್ನದ ಪದಕ ಗೆದ್ದರು. 

ಶೂಟಿಂಗ್‌ ವಿಶ್ವಕಪ್‌: ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಮನು

ಫೈನಲ್ ಸ್ಪರ್ಧೆಯಲ್ಲಿ ವರ್ಮಾ (244.2) ಅಂಕಗಳಿಸಿ ಚಿನ್ನಕ್ಕೆ ಮುತ್ತಿಟ್ಟರು. 17 ವರ್ಷದ ಯುವ ಶೂಟರ್ ಸೌರಭ್ ಚೌಧರಿ (221.9) ಅಂಕಗಳಿಸಿ ಕಂಚಿನ ಪದಕ ಪಡೆದರು. ಭಾರತದ ಶೂಟರ್ ಸಂಜೀವ್ ರಜಪೂತ್, 50 ಮೀ. ರೈಫಲ್ 3 ಪೊಸಿಷನ್ ವಿಭಾಗದಲ್ಲಿ 462 ಅಂಕಗಳಿಸಿ ಬೆಳ್ಳಿ ಗೆದ್ದರು. ಇದರೊಂದಿಗೆ ಸಂಜೀವ್ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಚಿನ್ನ ಗೆದ್ದ ಭಾರತದ ಶೂಟರ್ ಅಪೂರ್ವಿ

ಇದಕ್ಕೂ ಮೊದಲು ಬುಧವಾರ ಭಾರತದ ಮಹಿಳಾ ಶೂಟರ್ ಇಳವೆನ್ನಿಲ ವಲರಿವನ್ ಚೊಚ್ಚಲ ವಿಶ್ವಕಪ್ ಚಿನ್ನದ ಪದಕ ಜಯಿಸಿದ್ದರು. ಐಎಸ್‌ಎಸ್‌ಎಫ್ ವಿಶ್ವಕಪ್ ವನಿತೆಯರ 10 ಮೀ. ಏರ್ ರೈಫಲ್‌ನಲ್ಲಿ ಇಳವೆನ್ನಿಲ ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ದರು. 10 ಮೀ. ಏರ್ ರೈಫಲ್ ಫೈನಲ್‌ನಲ್ಲಿ ಇಳವೆನ್ನಿಲ 251.7 ಅಂಕಗಳೊಂದಿಗೆ ಅಗ್ರಸ್ಥಾನ ಸಂಪಾದಿಸುವ ಮೂಲಕ ಚಿನ್ನದ ಪದಕ ಜಯಿಸಿದ್ದರು. 
 

Follow Us:
Download App:
  • android
  • ios