12ನೇ ಆವೃತ್ತಿಯ 22 ಲೀಗ್ ಪಂದ್ಯಗಳು ಸರಾಗವಾಗಿ ನಡೆದಿದೆ. ಆದರ 23ನೇ ಪಂದ್ಯ ಆಯೋಜನೆಗೆ ಆತಂಕ ಎದುರಾಗಿದೆ. CSK Vs KKR ನಡುವಿನ ಪಂದ್ಯಕ್ಕೆ ಎದುರಾಗಿರೋ ಅಡ್ಡಿ ಏನು? ಇಲ್ಲಿದೆ ವಿವರ. 

ಚೆನ್ನೈ(ಏ.09): 12ನೇ ಆವೃತ್ತಿ ಐಪಿಎಲ್ ಟೂರ್ನಿ ಪಂದ್ಯಗಳು ಸರಾಗವಾಗಿ ನಡೆಯುತ್ತಿದೆ. ಆದರೆ 23ನೇ ಲೀಗ್ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಆತಂಕ ಶುರುವಾಗಿದೆ. CSK Vs KKR ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: IPLಬೆಟ್ಟಿಂಗ್: ಬೆಂಗಳೂರು ಪೊಲೀಸರಿಂದ 8 ಬುಕ್ಕಿ ಅರೆಸ್ಟ್, 39.49 ರೂ ಲಕ್ಷ ವಶ!

22 ಲೀಗ್ ಪಂದ್ಯಗಳು ಯಾವುದೇ ಅಡಚಣೆ ಇಲ್ಲದೆ ಆಯೋಜನೆಗೊಂಡಿದೆ. ಇದೀಗ 23ನೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣ ಇರೋದರಿಂದ ಚೆನ್ನೈ ಸುತ್ತ ಮಳೆಯಾಗುವ ಸಂಭವ ಇದೆ. ಹೀಗಾದಲ್ಲಿ 8 ಗಂಟೆಗೆ ಆರಂಭಗೊಳ್ಳಲಿರುವ CSK Vs KKR ನಡುವಿನ ಪಂದ್ಯಕ್ಕೆ ಸಮಸ್ಯೆಯಾಗಲಿದೆ.

ಇದನ್ನೂ ಓದಿ: IPL 2019: ಚೆನ್ನೈನಿಂದ ಫೈನಲ್ ಪಂದ್ಯ ಸ್ಥಳಾಂತರ, ಬೆಂಗ್ಳೂರಿಗೆ ಶಿಫ್ಟ್ ?

ಚೆನ್ನೈನ ಚಿಪಾಕ್ ಮೈದಾನದಲ್ಲಿ ಅಂಕಪಟ್ಟಿಯಲ್ಲಿ ಮೊದಲೆರೆಡು ಸ್ಥಾನ ಹಂಚಿಕೊಂಡಿರುವ ಕೆಕೆಆರ್ ಹಾಗೂ ಚೆನ್ನೈ ಹೋರಾಟ ನಡೆಸಿದೆ. ಉಭಯ ತಂಡಗಳ ಹೋರಾಟ ತೀವ್ರ ಕುತೂಹಲ ಕೆರಳಿಸಿದೆ. ಆದರೆ ಮಳೆ ಸಾಧ್ಯತೆ ಅಭಿಮಾನಿಗಳ ಅತಂಕಕ್ಕೆ ಕಾರಣವಾಗಿದೆ.