ಬೆಂಗಳೂರು(ಏ.09): ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದ್ದಂತೆ ಬೆಟ್ಟಿಂಗ್ ದಂಧೆಗಳು ಸದ್ದಿಲ್ಲದೆ ನಡೆಯುತ್ತವೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಇದೀಗ 2019ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭವಾಗಿ 3 ವಾರಗಳಲ್ಲೇ ಬೆಟ್ಟಿಂಗ್ ನಡೆಸುತ್ತಿದ್ದ 8 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇಷ್ಟೇ ಅಲ್ಲ ಬೆಟ್ಟಿಂಗ್‌ಗೆ ಬಳಸಲಾಗಿದ್ದ 39.49 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: IPL 2019: ಚೆನ್ನೈನಿಂದ ಫೈನಲ್ ಪಂದ್ಯ ಸ್ಥಳಾಂತರ, ಬೆಂಗ್ಳೂರಿಗೆ ಶಿಫ್ಟ್ ?

ಸೆಂಟ್ರಲ್ ಕ್ರೈಂ ಬ್ರಾಂಚ್(CCB) ಹಾಗೂ ಸೈಬರ್ ಕ್ರೈಂ ಪೊಲೀಸ್ ಜಂಟಿಯಾಗಿ ಕಾರ್ಯಚರಣೆ ನಡೆಸಿದೆ. ಕಳೆದ ಮಾರ್ಚ್ 10 ರಿಂದ ಇಲ್ಲೀವರಗೆ ನಗರದ ವಿವಿದೆಡೆ 8 ಬುಕ್ಕಿಗಳನ್ನು ಅರೆಸ್ಟ್ ಮಾಡಲಾಗಿದೆ. ಇವರಿಂದ 29 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಮಾರ್ಚ್ 10 ರಂದು SR ನಗರದಲ್ಲಿ ಗೌಪ್ಯವಾಗಿ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಬುಕ್ಕಿ ನಟರಾಜ ಬಂಧಿಸಿದ್ದಾರೆ. ಇವನಿಂದ 8.50 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: RCBಗೆ ಒಂದು ನ್ಯಾಯ, ಚೆನ್ನೈಗೆ ಇನ್ನೊಂದು ನ್ಯಾಯ...?

ಮಾರ್ಚ್ 18 ರಂದು ವಿವಿ ಪುರಂನಲ್ಲಿ ನಡೆಸಿದ ದಾಳಿಯಲ್ಲಿ 5.60 ಲಕ್ಷ ರೂಪಾಯಿ ಹಾಗೂ 6 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬುಕ್ಕಿಗಳು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯಕ್ಕೂ ಬೆಟ್ಟಿಂಗ್ ನಡೆಸಿರುವುದು ಬೆಳಕಿಗೆ ಬಂದಿದೆ.  ಕೊಡಿಗೆಹಳ್ಳಿ ಠಾಣಾ ಪೊಲೀಸರ ದಾಳಿಯಲ್ಲಿ ಬುಕ್ಕಿ ಶೇಕ್ ಶಫಿಯನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತನಿಂದ 2.50 ಲಕ್ಷ ರೂಪಾಯಿ 18 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬುಕ್ಕಿ ಮಾರ್ಚ್ 18 ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೆ ಬೆಟ್ಟಿಂಗ್ ನಡೆಸುತ್ತಿದ್ದ ಅನ್ನೋದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: IPL 2019: ಸತತ 6ನೇ ಸೋಲು- ಟ್ವಿಟರ್‌ನಲ್ಲಿ RCB ಟ್ರೋಲ್!

ರಾಜಗೋಪಾಲ್ ನಗರ, ಕೆಆರ್ ಪುರಂ ಸೇರಿದಂತೆ ನಗರದ ಹಲೆವಡೆ  ದಾಳಿ ಮಾಡಿರುವ ಪೊಲೀಸರು ಬುಕ್ಕಿಗಳನ್ನು ಬಂಧಿಸಿದ್ದಾರೆ. ಸಂಪೂರ್ಣ ದಾಳಿ  ಜಂಟಿ ಕಮಿಶನರ್ ಆಲೋಕ್ ಕುಮಾರ್ ಹಾಗೂ DCP ಗಿರೀಶ್ ನೇತೃತ್ವದಲ್ಲಿ ನಡೆದಿದೆ. ನಗರದ ಇನ್ನೂ ಕೆಲೆವೆಡೆ ದಾಳಿ ಮಾಡಲು ಪೊಲೀಸರು ಮುಂದಾಗಿದ್ದಾರೆ. ಐಪಿಎಲ್ ಬಳಿಕ  ವಿಶ್ವಕಪ್ ಟೂರ್ನಿ ಇರೋದರಿಂದ ಪೊಲಿಸರು ಕಟ್ಟೆಚ್ಚರ ವಹಿಸಿದ್ದಾರೆ.

ಇಂಗ್ಲೀಷ್ ಭಾಷೆಯಲ್ಲಿ ಈ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: